ಮಣಿಪುರದಲ್ಲಿ ಮೂವರು ಉಗ್ರರ ಬಂಧನ, ಶಸ್ತ್ರಾಸ್ತ್ರ ವಶ
ಇಂಫಾಲ, 02 ಮಾರ್ಚ್ (ಹಿ.ಸ.): ಆ್ಯಂಕರ್: ಮಣಿಪುರದಲ್ಲಿ ಭದ್ರತಾ ಪಡೆಗಳು ಕಳೆದ 24 ಗಂಟೆಗಳಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ ನಿಷೇಧಿತ ಉಗ್ರ ಸಂಘಟನೆಗಳ ಮೂವರು ಸಕ್ರಿಯ ಕಾರ್ಯಕರ್ತರನ್ನು ಬಂಧಿಸಿವೆ. ನಿಷೇಧಿತ ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ ಹಾಗೂ ಪ್ರಿಪ್ಯಾಕ ಸಂಘಟನೆಗಳ ಇಬ್ಬ
Arrest


ಇಂಫಾಲ, 02 ಮಾರ್ಚ್ (ಹಿ.ಸ.):

ಆ್ಯಂಕರ್:

ಮಣಿಪುರದಲ್ಲಿ ಭದ್ರತಾ ಪಡೆಗಳು ಕಳೆದ 24 ಗಂಟೆಗಳಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ ನಿಷೇಧಿತ ಉಗ್ರ ಸಂಘಟನೆಗಳ ಮೂವರು ಸಕ್ರಿಯ ಕಾರ್ಯಕರ್ತರನ್ನು ಬಂಧಿಸಿವೆ.

ನಿಷೇಧಿತ ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ ಹಾಗೂ ಪ್ರಿಪ್ಯಾಕ ಸಂಘಟನೆಗಳ ಇಬ್ಬರು ಕೇಡರ್‌ಗಳನ್ನು ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಿಂದ ಬಂಧಿಸಲಾಗಿದೆ. ಅವರಿಂದ 9 ಎಂಎಂ ಪಿಸ್ತೂಲ್, ಮ್ಯಾಗಜೀನ್, ನಾಲ್ಕು ಗುಂಡುಗಳು ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಇನ್ನೊಬ್ಬರನ್ನು ನಿಷೇಧಿತ ಕಾಂಗ್ಲೇಯ್ ಯಾವೋಲ್ ಕನ್ನಾ ಲುಪ್ ಸಂಘಟನೆಯ ಕೇಡರ್ ಎಂದು ತೌಬಲ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande