ಸಂಸ್ಕರಿಸಿದ ಶುದ್ಧ ನೀರನ್ನು ಹಂಚಿನಾಳ ಕೆರೆಗೆ ಪೂರೈಸಿ
ವಿಜಯಪುರ, 02 ಮಾರ್ಚ್ (ಹಿ.ಸ.) ಆ್ಯಂಕರ್: ಹಂಚನಾಳ ಹತ್ತಿರದ ಕೆರೆಗೆ ನಗರದ ಒಳ ಚರಂಡಿಯಿಂದ ಜಮೆಯಾಗುತ್ತಿರುವ ಕಲುಷಿತ ನೀರಿನಿಂದಾಗಿ ಹಂಚನಾಳ ಸುತ್ತಮುತ್ತಲಿನ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆ ಭಾಗದ ಸಾರ್ವಜನಿಕರಿಗೆ ಆದಷ್ಟು ಶೀಘ್ರ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ವಹಿ
ನೀರು


ವಿಜಯಪುರ, 02 ಮಾರ್ಚ್ (ಹಿ.ಸ.)

ಆ್ಯಂಕರ್: ಹಂಚನಾಳ ಹತ್ತಿರದ ಕೆರೆಗೆ ನಗರದ ಒಳ ಚರಂಡಿಯಿಂದ ಜಮೆಯಾಗುತ್ತಿರುವ ಕಲುಷಿತ ನೀರಿನಿಂದಾಗಿ ಹಂಚನಾಳ ಸುತ್ತಮುತ್ತಲಿನ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆ ಭಾಗದ ಸಾರ್ವಜನಿಕರಿಗೆ ಆದಷ್ಟು ಶೀಘ್ರ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ ಪಾಟೀಲ ಹೇಳಿದರು.

ಸೋಮವಾರದ ನಗರದ ನಗರಾಭಿವೃದ್ಧಿ ಪ್ರಾಧಿಕಾರ ಸಭಾಂಗಣದಲ್ಲಿ 2026-27ನೇ ಸಾಲಿನ ಅಂದಾಜು ಆಯವ್ಯಯ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಂಚನಾಳ ಸುತ್ತಮುತ್ತಲಿನ ಬೋರವೆಲ್ಗಳಲ್ಲಿ ಕಲುಷಿತ ಹಾಗೂ ವಾಸನೆಯಿಂದ ಕೂಡಿದ ನೀರು ಬರುತ್ತಿದ್ದು, ಈಗಾಗಲೇ ಈ ಕುರಿತು ಹಲವಾರು ಬಾರಿ ಗಮನಕ್ಕೆ ತರಲಾಗಿದೆ ಆದರೂ, ಈವರೆಗೆ ಕ್ರಮ ವಹಿಸಿಲ್ಲ ಹಾಗೂ ಹಂಚಿನಾಳ ಕೆರೆಯ ಪುನರುಜ್ಜೀವನ ಹಾಗೂ ಸೌಂದರೀಕರಣದ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ನಗರದ ಒಳಚರಂಡಿ ಸಂಸ್ಕರಣಾ ಘಟಕದಿಂದ ಕೊಳಚೆ ನೀರು ಕೆರೆ ಸೇರದಂತೆ ಹಾಲಿ ಇರುವ ಎಸ್ ಟಿಪಿಯನ್ನು ಉನ್ನತೀಕರಿಸಿ ಸಂಸ್ಕರಿಸಿದ ಶುದ್ಧ ನೀರನ್ನು ಮಾತ್ರ ಹಂಚಿನಾಳ ಕೆರೆಗೆ ಬೀಡಬೇಕೆಂದು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಪ್ರಾಧಿಕಾರದ ಸನ್ 2026-27 ನೇ ಸಾಲಿನ ಆಯವ್ಯಯ ಸನ್ 2026-27ನೇ ಸಾಲಿನ ಆಯ-ವ್ಯಯದಲ್ಲಿ ವಿವಿಧ ಬಾಬ್ತುಗಳಿಂದ ಸನ್ 2026ನೇ ಸಾಲಿಗೆ 5757.98 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಹಿಂದಿನ ಸಾಲಿನ ಉಳಿಕೆಯ ವೆಚ್ಚ ಸೇರಿ ಸುಮಾರು 8,714.50 ಲಕ್ಷ ರೂ

ಗಳನ್ನು ವೆಚ್ಚವಾಗಿ ನಿರೀಕ್ಷಿಸಲಾಗಿದೆ.

ನಗರದಲ್ಲಿರುವ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಬೇಗನೆ ಮುಕ್ತಾಯಗೊಳಿಸಲು ಸೂಚಿಸಿದ ಅವರು, ಈಗಾಗಲೇ ಹಲವಾರು ಬಡಾವಣೆಗಳು ಪ್ರಾಧಿಕಾರದ ವತಿಯಿಂದ ಅಭಿವೃದ್ಧಿ ಪಡಿಸಲಾಗಿದ್ದು ಪ್ರಾಧಿಕಾರವು ಬಡಾವಣೆಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿರುವುದಿಲ್ಲ. ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದಾಗ ಈಗಾಗಲೇ ಆಯಾ ಬಡಾವಣೆಗಳ ಹೆಸರನ್ನು ಅಲ್ಲಿಯ ಸಾರ್ವಜನಿಕರು ಹೆಸರಿಸಿದ್ದು ಈಗಿರುವ ಬಡಾವಣೆಗಳ ಹೆಸರನ್ನು ಮುಂದುವರೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನಗರದ ಕೋಟೆ ಗೋಡೆಯ ಸುತ್ತಲೂ ಇರುವ ಕಂದಕದ ರಾಜ ಕಾಲುವೆಗಳ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು ಕೆಲವು ಪ್ರದೇಶದಲ್ಲಿ ಅತಿಕ್ರಮಣ ತೆರವುಗೊಳಿಸಿ ಹೂಳೆತ್ತುವ ಕಾಮಗಾರಿ ಬೇಸಿಗೆಯ ಸಮಯದಲ್ಲಿಯೇ ಮುಕ್ತಾಯಗೊಳಿಸಬೇಕು. ಕೋಟೆಗೋಡೆ ಹೊಂದಿಕೊಂಡ ಕಂದಕಗಳನ್ನು ಸ್ವಚ್ಚಗೊಳಿಸಿದಲ್ಲಿ ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ಬಹಳ ಅನುಕೂಲವಾಗಲಿದೆ ಎಂದು ನಗರ ಶಾಸಕರು ಪ್ರಸ್ತಾಪಿಸಿದರು.

ನಗರದ ಸರ್ವಾಂಗಿಣ ಅಭಿವೃದ್ಧಿಗಾಗಿ ಎಲ್ಲ ಇಲಾಖೆಗಳು ಸಮನ್ವಯತೆ ಸಾಧಿಸಿಕೊಂಡು ಕಾಮಗಾರಿಗಳನ್ನು ತ್ವರಿತವಾಗಿ ನಿಗಧಿತ ಅವಧಿಯೊಳಗೆ ಮುಗಿಸಬೇಕೆಂದು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಅಧಿಕಾರಿಗಳಿಗೆ ಸಚಿವರು ಅವರು ಸೂಚಿಸಿದರು.

ಈ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳು, ಪ್ರಾಧಿಕಾರ ಆಯುಕ್ತರು ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಪರಿಶೀಲಿಸಿ ಬೇಗನೆ ಕಾಮಗಾರಿ ಮುಕ್ತಾಯಗೊಳಿಸುವಂತೆ ಕ್ರಮ ವಹಿಸಬೇಕೆಂದು ಅವರು ಸೂಚಿಸಿದರು.

ಪ್ರಾಧಿಕಾರದಿಂದ ನಾಗರಿಕ ಸೌಲಭ್ಯದ ನಿವೇಶನಗಳ ಹಂಚಿಕೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಕಟಣೆ ಹೊರಡಿಸಬೇಕೆಂದು ಪ್ರಾಧಿಕಾರದ ಅಧ್ಯಕ್ಷರು, ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಉಸ್ತುವಾರಿ ಸಚಿವರು, ನಗರ ಶಾಸಕರು ಹಾಗೂ ನಾಗಠಾಣ ಮತಕ್ಷೇತ್ರದ ಶಾಸಕರು ಸರ್ಕಾರಿ ಇಲಾಖೆಗಳ ಕೋರಿಕೆಯನ್ನು ಪ್ರಥಮ ಆಧ್ಯತೆ ನೀಡಬೇಕು. ಉಳಿದಂತೆ ನಿಯಮಗಳಿಗೆ ಅನುಗುಣವಾಗಿ ಸಾರ್ವಜನಿಕ ಸಂಘ ಸಂಸ್ಥೆಗಳಿಗೆ ಹಂಚಿಕೆಗೆ ಕ್ರಮ ವಹಿಸಬೇಕೆಂದು ಸಭೆಯಲ್ಲಿದ್ದ ಆಯುಕ್ತರು ನಗರಾಭಿವೃದ್ಧಿ ವಿಜಯಪುರ ಅವರಿಗೆ ಸಚಿವರು ಸೂಚಿಸಿದರು.

ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ ಅವರು ಮಾತನಾಡಿ ಈ ಎಲ್ಲ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ ತ್ವರಿತವಾಗಿ ಪರಿಶೀಲಿಸಿ ಕ್ರಮ ವಹಿಸಲಾಗುವುದೆಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷಣ ನಿಂಬರಗಿ ಮಾತನಾಡಿ,ನಗರದ ಸಂಚಾರಿ ಸುವ್ಯವಸ್ಥೆಯ ಸುಧಾರಣೆ ಕುರಿತು ಸಭೆಯಲ್ಲಿ ಸುಧೀರ್ಘವಾದ ಮಾಹಿತಿ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಾಜಶೇಖರ ಡಂಬಳ ಮಾತನಾಡಿ, ಸಾಮಾನ್ಯ ಸಭೆಯಲ್ಲಿ ಚರ್ಚಿಸಿದಂತೆ ನಗರದ ಸರ್ವಾಂಗೀಣ ಅಭಿವೃದ್ಧಿ ಮತ್ತು ಆರ್ಥಿಕ ಅನುದಾನದಿಂದ ನಗರದ ಸುಗಮ ಸಂಚಾರ ಹಾಗೂ ಸುವ್ಯವಸ್ಥೆಗಾಗಿ ಪ್ರಮುಖ ವೃತ್ತ ಹಾಗೂ ಜಂಕ್ಷನ್ಗಳಲ್ಲಿನ ಸಂಚಾರ ನಿರ್ವಹಣೆಗಾಗಿ IಖಿಒಇS & IಔಂಎI ಕಾಮಗಾರಿ ಪ್ರಗತಿಯ ಬಗ್ಗೆ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ಸಭೆಯಲ್ಲಿ ವಿವರಿಸಿದರು.

ಸಭೆಯಲ್ಲಿ ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕದೋಂಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕರಾದ ಡಾ. ಗಂಗಾಧರ ಸಂಬಣ್ಣಿ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಮಹಾದೇವ ರಾಠೋಡ, ಸಂತೋಷ ಪವಾರ, ಸಲೀಮ ಪೀರಜಾದೆ, ಶ್ರೀಮತಿ ಹಡಪದ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ ಹಾಗೂ ಪಾಲಿಕೆಯ ಅಧಿಕಾರಿ,ಸಿಬ್ಬಂದಿ ಹಾಗೂ ಇತರರು ಉಪಸ್ಥಿರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande