ಬಳ್ಳಾರಿ ಗವಿಸಿದ್ದ ನಮ್ಮ ವಿಜ್ಞಾನಿ ಪ್ರಶಸ್ತಿಗೆ ಭಾಜನ
ಬಳ್ಳಾರಿ, 02 ಮಾರ್ಚ್ (ಹಿ.ಸ.) ಆ್ಯಂಕರ್: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಟಿಲಿಸ್ಕೋಪ್ ತಯಾರಿಕೆಯ ತರಬೇತಿ ಪಡೆದಿದ್ದ ಬಳ್ಳಾರಿಯ ಶ್ರೀನಂದ ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿ ಗವಿಸಿದ್ದ `ವಲ್ರ್ಡ್ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ವಲ್ರ್ಡ್'' ದಾಖಲೆಯ
ವಿದ್ಯಾರ್ಥಿ ಗವಿಸಿದ್ದ `ನಮ್ಮ ವಿಜ್ಞಾನಿ' ಜೊತೆಗೆ ಚಿನ್ನದ ಪದಕ ಪ್ರಶಸ್ತಿ


ವಿದ್ಯಾರ್ಥಿ ಗವಿಸಿದ್ದ `ನಮ್ಮ ವಿಜ್ಞಾನಿ' ಜೊತೆಗೆ ಚಿನ್ನದ ಪದಕ ಪ್ರಶಸ್ತಿ


ವಿದ್ಯಾರ್ಥಿ ಗವಿಸಿದ್ದ `ನಮ್ಮ ವಿಜ್ಞಾನಿ' ಜೊತೆಗೆ ಚಿನ್ನದ ಪದಕ ಪ್ರಶಸ್ತಿ


ಬಳ್ಳಾರಿ, 02 ಮಾರ್ಚ್ (ಹಿ.ಸ.)

ಆ್ಯಂಕರ್: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಟಿಲಿಸ್ಕೋಪ್ ತಯಾರಿಕೆಯ ತರಬೇತಿ ಪಡೆದಿದ್ದ ಬಳ್ಳಾರಿಯ ಶ್ರೀನಂದ ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿ ಗವಿಸಿದ್ದ `ವಲ್ರ್ಡ್ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ವಲ್ರ್ಡ್' ದಾಖಲೆಯ ಜೊತೆಯಲ್ಲಿ `ಇಂಡಿಯಾ ಬುಕ್ ಆಫ್ ಅವಾರ್ಡ್ ಹಾಗೂ ಚಿನ್ನದ ಪದಕ'ವನ್ನು ಸ್ವೀಕರಿಸಿ `ನಮ್ಮ ವಿಜ್ಞಾನಿ' ಪ್ರಶಸ್ತಿಯನ್ನು ಸ್ವೀಕರಿಸಿದ್ದಾನೆ.

ಶ್ರೀನಂದ ರೆಸಿಡೆನ್ಸಿ ಶಾಲೆಯ ಮುಖ್ಯಸ್ಥ ವಿ. ಗಾಂಧಿ ಅವರು, ಯುದ್ಧದ ಪರಿಸ್ಥಿತಿ ವಿಶ್ವದಲ್ಲಿ ನಿರ್ಮಾಣವಾಗಿದೆ. ಇಂಥಹಾ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಹೊಸತನದ ಜೊತೆಯಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ, ಧನಾತ್ಮಕ ಚಿಂತನೆಯ ಮೂಲಕ ನಮ್ಮ ಶಾಲೆಯ ವಿದ್ಯಾರ್ಥಿ ಗವಿಸಿದ್ದ ವಿಶೇಷ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ಅಭಿಮಾನದ ಸಂಗತಿ ಎಂದು ತಿಳಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಎನ್. ವೀರಭದ್ರಗೌಡ ಅವರು, ಸಾಧಕ ವಿದ್ಯಾರ್ಥಿ ಗವಿಸಿದ್ದ ಅವರನ್ನು ಸನ್ಮಾನಿಸಿ, ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪತ್ರಿಕೆಗಳು ನಮ್ಮ ಸುತ್ತಲಿನ ಆಗುಹೋಗುಗಳ ಜೊತೆಯಲ್ಲಿ ವಿಶ್ವದ ಪ್ರಮುಖ ವಿದ್ಯಮಾನಗಳ ಕುರಿತು ಓದುಗರಿಗೆ ಸುಲಭ, ಸರಳವಾದ ಭಾಷೆಯಲ್ಲಿ ತಿಳಿಸುತ್ತವೆ ಎಂದರು.

ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ಆರ್.ಎಚ್.ಎಂ. ಚನ್ನಬಸವಸ್ವಾಮಿ ಅವರು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸಲಿಕ್ಕಾಗಿ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಗವಿಸಿದ್ದನ ಸಾಧನೆಯು ಅನೇಕರಿಗೆ ಪ್ರೋತ್ಸಾಹ ನೀಡಲಿದೆ ಎಂದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಯು. ರಮೇಶ್ ಅವರು, ವೈಜ್ಞಾನಿಕ ಚಿಂತನೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯ ಶಿವಾರೆಡ್ಡಿ ಹಾಗೂ ವೀರಶೈವ ತರುಣ ಸಂಘದ ಅಧ್ಯಕ್ಷ ನಂದೀಶಮಠಂ ಅವರು ವೇದಿಕೆಯಲ್ಲಿ ಉಪಸ್ಥಿತರದ್ದರು.

ಮುಖ್ಯ ಶಿಕ್ಷಕಿ ಹೆಚ್.ಜೆ. ಸರಿತಾ ಅವರು ಕಾರ್ಯಕ್ರಮ ನಿರೂಪಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande