
ವಿಜಯಪುರ, 02 ಮಾರ್ಚ್ (ಹಿ.ಸ.):
ಆ್ಯಂಕರ್: ಇರಾನ್ ಅಧ್ಯಕ್ಷ ಖಮೇನಿ ಹತ್ಯೆಯಿಂದ ಶಿಯಾ ಸಮುದಾಯಕ್ಕೆ ನೋವಾಗಿದೆ. ಖಮೇನಿ ಓರ್ವ ರಾಷ್ಟ್ರದ ಅಧ್ಯಕ್ಷ ಅಷ್ಟೆ ಅಲ್ಲ, ಶಿಯಾ ಸಮುದಾಯದ ಧರ್ಮಗುರು ಆಗಿದ್ದರು. ಹಾಗಾಗಿ ಧರ್ಮ ಗುರುಗಳನ್ನು ಕಳೆದುಕೊಂಡಿರುವ ಆ ಸಮುದಾಯದವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಪ್ರತಿಭಟನಾಕಾರರ ನಡೆ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕೆ ಅಧ್ಯಕ್ಷ ಡೋನಲ್ಡ್ ಟ್ರಂಪ್ ಮಾಡಿದ್ದು ತಪ್ಪು. ಒಂದು ದೇಶದ ಅಧ್ಯಕ್ಷರನ್ನು ಅಪಹರಿಸುತ್ತಾರೆ. ಒಂದು ದೇಶದ ಅಧ್ಯಕ್ಷರನ್ನ ಹತ್ಯೆ ಮಾಡಿಸುತ್ತಾರೆ. ಇದು ಸರಿಯಲ್ಲ. ಇಂದು ಅವರಿಗೆ ಮಾಡಿದ್ದಾರೆ. ನಾಳೆ ನಮಗೆ ಕೂಡ ಮಾಡುತ್ತಾರೆ ಎಂದರು.
ಬಿಪಿಎಲ್ ಕಾರ್ಡ್ ಇದ್ದವರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸಚಿವ ಎಂ. ಬಿ. ಪಾಟೀಲ್ ಅಂತಹವರಿಗೆ 2000 ರೂ ಬೇಕಾ ಹೇಳಿ ಎಂದು ತಮ್ಮನ್ನೇ ಉದಾಹರಿಸಿದ ಅವರು, ಶ್ರೀಮಂತರು ತಾವಾಗಿಯೇ ಬಿಟ್ಟು ಕೊಡಬೇಕು ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande