ಸನಾತನ ಧರ್ಮವು ಮಾನವ ಕೇಂದ್ರಿತ : ನಿರ್ಭಯಾನಂದ ಸರಸ್ವತಿ
ಬಳ್ಳಾರಿ, 02 ಮಾರ್ಚ್ (ಹಿ.ಸ.): ಆ್ಯಂಕರ್: ಬಹುತ್ವವೇ ಸನಾತನ ಧರ್ಮದ ತಳಹದಿಯಾಗಿದ್ದು, ಬಹುತ್ವದ ಮೇಲೆ ಸನಾತನ ಭಾರತೀಯ ಸಂಸ್ಕøತಿ ಅವಲಂಭಿಸಿದೆ ಎಂದು ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ತಿಳಿಸಿದ್ದಾರೆ. ನಗರದ ಡಾ. ರಾಜಕುಮಾರ ರಸ್ತೆಯಲ್ಲಿಯ `ಪಾಂಚಜನ್ಯ’ ಸಭಾಂಗಣದಲ್ಲಿ ನಡೆದ ವಿವೇಕ ಮಂಟಪ ಉಪನ್ಯ
ಸನಾತನ ಧರ್ಮವು ಮಾನವ ಕೇಂದ್ರಿತ : ನಿರ್ಭಯಾನಂದ ಸರಸ್ವತಿ


ಸನಾತನ ಧರ್ಮವು ಮಾನವ ಕೇಂದ್ರಿತ : ನಿರ್ಭಯಾನಂದ ಸರಸ್ವತಿ


ಬಳ್ಳಾರಿ, 02 ಮಾರ್ಚ್ (ಹಿ.ಸ.):

ಆ್ಯಂಕರ್: ಬಹುತ್ವವೇ ಸನಾತನ ಧರ್ಮದ ತಳಹದಿಯಾಗಿದ್ದು, ಬಹುತ್ವದ ಮೇಲೆ ಸನಾತನ ಭಾರತೀಯ ಸಂಸ್ಕøತಿ ಅವಲಂಭಿಸಿದೆ ಎಂದು ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ತಿಳಿಸಿದ್ದಾರೆ.

ನಗರದ ಡಾ. ರಾಜಕುಮಾರ ರಸ್ತೆಯಲ್ಲಿಯ `ಪಾಂಚಜನ್ಯ’ ಸಭಾಂಗಣದಲ್ಲಿ ನಡೆದ ವಿವೇಕ ಮಂಟಪ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡುತ್ತಿದ್ದರು.

ಸನಾತನ ಧರ್ಮದ ಬಹುತ್ವವನ್ನು ತಿಳಿಯದ ಅನೇಕರು ಕೇವಲ ಆಚರಣೆಗಳನ್ನೇ ಧರ್ಮ ಎಂದು ತಿಳಿದಿದ್ದಾರೆ. ನಿಜವಾದ ಸನಾತನ ಧರ್ಮದ ಬಗ್ಗೆ ತಿಳಿಯಬೇಕು ಎಂದರೆ ವೇದಗಳ ಅಧ್ಯಯನ ಮಾಡಬೇಕು. ಸನಾತನ ಧರ್ಮ ದೇವರ ಕೇಂದ್ರೀತ ಧರ್ಮವಲ್ಲ, ಮಾನವ ಕೇಂದ್ರಿತ ಧರ್ಮ ಎಂದರು.

ಕಾರಣ ಬಸವಣ್ಣ ಅವರು ಎನ್ನ ಕಾಲೇ ಕಂಭ, ದೇಹವೇ ದೇಗುಲ, ಶಿರವೇ ಹೊನ್ನಕಳಷ ಎಂದು ಹೇಳಿದ್ದು, ಇದೇ ಕಾರಣಕ್ಕಾಗಿಯೇ ಎಂದರು.

ವಿವೇಕ ಮಂಟಪದ ಸಂಯೋಜಕ ಪ್ರಭುದೇವ ಕಪ್ಪಗಲ್ಲು ಅತಿಥಿಗಳನ್ನು ಸ್ವಾಗತಿಸಿದರು. ಲೆಕ್ಕ ಪರಿಶೋಧಕ ಸಿ. ಎರ್ರಿಸ್ವಾಮಿ ಅವರು ವಂದಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಉಪನ್ಯಾಸಕರಾದ ಎನ್. ಬಸವರಾಜ ಅವರು ರಾಮಕೃಷ್ಣ ಪರಮಹಂಸರ, ವಿವೇಕಾನಂದರ, ಮಹಾಯೋಗಿ ವೇಮನ, ದಾಸರ ಪದಗಳು ಹಾಗೂ ಶರಣರ ವಚನಗಳನು ಸುಶ್ರಾವ್ಯವಾಗಿ ಹಾಡಿ ನೆರದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಹಾರ್ಮೋನಿಯಂನಲ್ಲಿ ತಿಪ್ಪೇಸ್ವಾಮಿ ಮುದ್ದಟನೂರು, ಜಿ. ಸುಧಾಕರ ತಬಲಾ ಸಾತ್ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande