ವಿಶ್ವಶಾಂತಿ ಸಂದೇಶ ಸಾರಿದ ಮಹಾನ್ ಶರಣ ರೇಣುಕಾಚಾರ್ಯರು: ಕೆ.ಇ.ಚಿದಾನಂದಪ್ಪ
ಬಳ್ಳಾರಿ, 02 ಮಾರ್ಚ್ (ಹಿ.ಸ.): ಆ್ಯಂಕರ್: ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ
ವಿಶ್ವಶಾಂತಿ ಸಂದೇಶ ಸಾರಿದ ಮಹಾನ್ ಶರಣ ರೇಣುಕಾಚಾರ್ಯರು: ಕೆ.ಇ.ಚಿದಾನಂದಪ್ಪ

ವಿಶ್ವಶಾಂತಿ ಸಂದೇಶ ಸಾರಿದ ಮಹಾನ್ ಶರಣ ರೇಣುಕಾಚಾರ್ಯರು: ಕೆ.ಇ.ಚಿದಾನಂದಪ್ಪ

ವಿಶ್ವಶಾಂತಿ ಸಂದೇಶ ಸಾರಿದ ಮಹಾನ್ ಶರಣ ರೇಣುಕಾಚಾರ್ಯರು: ಕೆ.ಇ.ಚಿದಾನಂದಪ್ಪ

ವಿಶ್ವಶಾಂತಿ ಸಂದೇಶ ಸಾರಿದ ಮಹಾನ್ ಶರಣ ರೇಣುಕಾಚಾರ್ಯರು: ಕೆ.ಇ.ಚಿದಾನಂದಪ್ಪ

ವಿಶ್ವಶಾಂತಿ ಸಂದೇಶ ಸಾರಿದ ಮಹಾನ್ ಶರಣ ರೇಣುಕಾಚಾರ್ಯರು: ಕೆ.ಇ.ಚಿದಾನಂದಪ್ಪ

ವಿಶ್ವಶಾಂತಿ ಸಂದೇಶ ಸಾರಿದ ಮಹಾನ್ ಶರಣ ರೇಣುಕಾಚಾರ್ಯರು: ಕೆ.ಇ.ಚಿದಾನಂದಪ್ಪ

ವಿಶ್ವಶಾಂತಿ ಸಂದೇಶ ಸಾರಿದ ಮಹಾನ್ ಶರಣ ರೇಣುಕಾಚಾರ್ಯರು: ಕೆ.ಇ.ಚಿದಾನಂದಪ್ಪ

ವಿಶ್ವಶಾಂತಿ ಸಂದೇಶ ಸಾರಿದ ಮಹಾನ್ ಶರಣ ರೇಣುಕಾಚಾರ್ಯರು: ಕೆ.ಇ.ಚಿದಾನಂದಪ್ಪ

ವಿಶ್ವಶಾಂತಿ ಸಂದೇಶ ಸಾರಿದ ಮಹಾನ್ ಶರಣ ರೇಣುಕಾಚಾರ್ಯರು: ಕೆ.ಇ.ಚಿದಾನಂದಪ್ಪ

ಬಳ್ಳಾರಿ, 02 ಮಾರ್ಚ್ (ಹಿ.ಸ.):

ಆ್ಯಂಕರ್: ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಸಭಾಂಗಣದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ಧಾಂತ ಶಿಖಾಮಣಿಯ ಮೂಲಕ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಘೋಷಣೆಯ ಮೂಲಕ ವಿಶ್ವಶಾಂತಿಯ ಸಂದೇಶವನ್ನು ಜಗತ್ತಿಗೆ ನೀಡಿದ ಕೀರ್ತಿ ವೀರಶೈವ ಧರ್ಮಕ್ಕೆ ಸಲ್ಲುತ್ತದೆ ಎಂದರು.

ವೀರಶೈವ ಧರ್ಮವು ಭಗವಂತ ಮತ್ತು ಭಕ್ತನ ನಡುವೆ ನೇರ ಸಂಪರ್ಕವನ್ನು ಒದಗಿಸಿ ಇಷ್ಟಲಿಂಗದ ಮಹತ್ವವನ್ನು ಸಾರಿದ ಮಹಾನ್ ಚೇತನ ರೇಣುಕಾಚಾರ್ಯರು. ವಿಜ್ಞಾನ ಇಲ್ಲದ ಧರ್ಮ ಕುರುಡು; ಧರ್ಮವಿಲ್ಲದ ವಿಜ್ಞಾನ ಕುಂಟು. ವೀರಶೈವ ಧರ್ಮದಲ್ಲಿ ವಿಜ್ಞಾನವೂ ಇದೆ, ಆಚರಣೆಯೂ ಇದೆ ಎಂದು ತಿಳಿಸಿದರು.

ಪಂಚಗಣಾಧೀಶ್ವರರು ಪರಮಾತ್ಮನ ಆದೇಶದಂತೆ ಅವತರಿಸಿ ವೀರಶೈವ ಧರ್ಮವನ್ನು ಸ್ಥಾಪಿಸಿದರು. ಅಷ್ಟಾವರ್ಣ, ಪಂಚಾಚಾರ, ಷಟಸ್ಥಳ ತತ್ವಗಳನ್ನು ಜಗದ್ಗುರು ಶ್ರೀ ರೇಣುಕಾಚಾರ್ಯರು ಜಗತ್ತಿಗೆ ಸಾರಿದರು ಎಂದು ತಿಳಿಸಿದರು.

ಕಾಶಿಯಿಂದ ಲಿಂಗ ತಂದು ಎತ್ತಿನ ಮೇಲೆ ಮೆರವಣಿಗೆ ಮಾಡಿದಾಗ ಜನರು ಗೌರವ ತೋರಿದ್ದು ಎತ್ತಿಗೆ ಅಲ್ಲ, ಅದರ ಮೇಲಿದ್ದ ಲಿಂಗಕ್ಕೆ ಎಂಬ ಉದಾಹರಣೆ ನೀಡಿ, ಲಿಂಗಧಾರಣೆಯ ಮಹತ್ವವನ್ನು ವಿವರಿಸಿದ ಅವರು, ಸರ್ಕಾರ ರೇಣುಕಾಚಾರ್ಯರ ಜಯಂತಿ ಆಚರಿಸುತ್ತಿರುವುದು ಗೌರವದ ಸಂಕೇತ ಎಂದು ಅವರು ಹೇಳಿದರು.

ಶ್ರೀ ಚೆನ್ನವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮಾತನಾಡುವುದೇ ಸಾಧನೆಯಾಗಬಾರದು; ಸಾಧನೆಗಳು ಮಾತನಾಡಬೇಕು. ಧರ್ಮ ಉಳಿಯಬೇಕಾದರೆ ಆಚರಣೆ ಮತ್ತು ಸಂಸ್ಕಾರ ಅಗತ್ಯವೆಂದು ಅವರು ತಿಳಿಸಿದರು.

ಸಮಾಜದ ಹಿರಿಯ ಮುಖಂಡ ಪಲ್ಲೇದ ಪಂಪಾಪತಿ ಅವರು, ರೇಣುಕಾಚಾರ್ಯರು ಮಹಾನ್ ದೈವಪುರುಷರು. ಇಂತಹ ಪೂಜ್ಯರ ಜಯಂತಿಯನ್ನು ಪ್ರತಿವರ್ಷ ಆಚರಿಸುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಯಿತು. ಸಿದ್ಧಾಂತ ಶಿಖಾಮಣಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಸಂಭ್ರಮದ ಮೆರವಣಿಗೆ:

ಶ್ರೀ ರೇಣುಕಾಚಾರ್ಯ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ನಗರದಲ್ಲಿ ಭಕ್ತಿಭಾವದಿಂದ ಹಾಗೂ ಧಾರ್ಮಿಕ ವೈಭವದಿಂದ ನೆರವೇರಿತು.

ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾದ ಮೆರವಣಿಗೆಯು ಗಡಿಗಿ ಚೆನ್ನಪ್ಪ ವೃತ್ತ- ರೈಲ್ವೇ ನಿಲ್ದಾಣ ರಸ್ತೆ- ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ- ಹೆಚ್.ಆರ್ ಗವಿಯಪ್ಪ ವೃತ್ತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವರೆಗೆ ತಲುಪಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಬಳ್ಳಾರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಗೋನಾಳ್ ನಾಗಭೂಷಣಗೌಡ, ಮಹಾನಗರ ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಹಿರಿಯ ಮುಖಂಡರು, ಸಮಾಜದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande