
ನವದೆಹಲಿ, 02 ಮಾರ್ಚ್ (ಹಿ.ಸ.):
ಆ್ಯಂಕರ್:ಭಾರತದ ಯುವಕರ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುವ ಸ್ಪೂರ್ತಿದಾಯಕ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಯುವಕರು ಏನನ್ನಾದರೂ ಸಾಧಿಸಬೇಕೆಂದು ಮನಸ್ಸು ಮಾಡಿದಾಗ, ಅದನ್ನು ನೆರವೇರಿಸುವವರೆಗೆ ಅವರು ನಿಲ್ಲುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
ಸೋಮವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ’ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಭಾರತದ ಯುವಕರ ದೃಢಸಂಕಲ್ಪ ಅನುಪಮವೆಂದು ಅವರು ಬರೆದಿದ್ದಾರೆ. “ನಮ್ಮ ಯುವ ಒಡನಾಡಿಗಳು ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಅದಕ್ಕಾಗಿಯೇ ನಮ್ಮ ದೇಶ ಇಂದು ತನ್ನ ಕನಸುಗಳನ್ನು ನನಸಾಗಿಸಿಕೊಳ್ಳುತ್ತಿದೆ,” ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ.
ತಮ್ಮ ಸಂದೇಶದಲ್ಲಿ ಪ್ರಧಾನಿ ಸಂಸ್ಕೃತ ಶ್ಲೋಕವೊಂದನ್ನು ಹಂಚಿಕೊಂಡಿದ್ದಾರೆ:
“ನ ವಾ ಉ ಮಾ ವೃಜನೇ ವರಯಂತೇ ನ ಪರ್ವತಸೋ ಯದಹಂ ಮನಸ್ಯೇ...”
ಈ ಶ್ಲೋಕದ ಅರ್ಥವನ್ನು ವಿವರಿಸುತ್ತಾ, ಆತ್ಮವಿಶ್ವಾಸದ ಶಕ್ತಿ ಅಪಾರವಾಗಿದ್ದು ಅದನ್ನು ಯಾವುದೂ ಕುಗ್ಗಿಸಲಾರದು ಎಂದು ಪ್ರಧಾನಿ ಹೇಳಿದ್ದಾರೆ. ಪರ್ವತಗಳಂತಹ ಮಹತ್ತರ ಅಡೆತಡೆಗಳೂ ದೃಢಸಂಕಲ್ಪದ ಮುಂದೆ ನಿಲ್ಲಲು ಸಾಧ್ಯವಿಲ್ಲ. ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸ ಇದ್ದರೆ ಸೂರ್ಯನಿಗಿಂತಲೂ ಹೆಚ್ಚಿನ ಶಕ್ತಿಯನ್ನು ವ್ಯಕ್ತಿ ಹೊಂದಿರಬಹುದು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa