ಕುರುಗೋಡು ಯುವಕ ಕಾಣೆ: ಪತ್ತೆಗೆ ಮನವಿ
ಕುರುಗೋಡು, 02 ಮಾರ್ಚ್ (ಹಿ.ಸ.) ಆ್ಯಂಕರ್: ಕುರುಗೋಡು ಪೊಲೀಸ್ ಠಾಣೆಯ ವ್ಯಾಪ್ತಿಯ ಭಾಗ್ಯನಗರ ಕ್ಯಾಂಪ್ ನಿವಾಸಿ ವೈ. ವೆಂಕಟೇಶ್ವರ ರೆಡ್ಡಿ (20) ಫೆಬ್ರವರಿ 21 ರಿಂದ ಕಾಣೆಯಾಗಿದ್ದಾನೆ. ಫೆಬ್ರವರಿ 21 ರಂದು ಜಿಂದಾಲ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗಿಬರುತ್ತೇನೆ ಎಂದು ಹೇಳಿಹೋದ
ಕುರುಗೋಡು ಯುವಕ ಕಾಣೆ: ಪತ್ತೆಗೆ ಮನವಿ


ಕುರುಗೋಡು, 02 ಮಾರ್ಚ್ (ಹಿ.ಸ.)

ಆ್ಯಂಕರ್: ಕುರುಗೋಡು ಪೊಲೀಸ್ ಠಾಣೆಯ ವ್ಯಾಪ್ತಿಯ ಭಾಗ್ಯನಗರ ಕ್ಯಾಂಪ್ ನಿವಾಸಿ ವೈ. ವೆಂಕಟೇಶ್ವರ ರೆಡ್ಡಿ (20) ಫೆಬ್ರವರಿ 21 ರಿಂದ ಕಾಣೆಯಾಗಿದ್ದಾನೆ.

ಫೆಬ್ರವರಿ 21 ರಂದು ಜಿಂದಾಲ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗಿಬರುತ್ತೇನೆ ಎಂದು ಹೇಳಿಹೋದವನು ಮನೆಗೆ ಹಿಂದಿರುಗಿ ಬಂದಿಲ್ಲ.

ಎತ್ತರ ಸುಮಾರು 5 ಅಡಿ, ಸಾಧಾರಣ ಮೈ ಕಟ್ಟು, ಗೋಧಿ ಮೈ ಬಣ್ಣ, ಕೋಲು ಮುಖ ಹೊಂದಿದ್ದು, ಹಣೆಯ ಮೇಲೆ ಕಪ್ಪು ಮಚ್ಚೆ ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ತುಂಬಾ ತೋಳಿನ ಅಂಗಿ, ಗ್ರೇ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.

ಕನ್ನಡ, ಹಿಂದಿ, ತೆಲುಗು, ಭಾಷೆ ಮಾತನಾಡುತ್ತಾನೆ. ಕಾಣೆಯಾದ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಎಸ್ಪಿ ಕಚೇರಿ ದೂ.08392-258400, ತೋರಣಗಲ್ಲು ಉಪವಿಭಾಗದ ಡಿ.ಎಸ್.ಪಿ ಮೊ.9480803010, ಕುರುಗೋಡು ಸಿಪಿಐ ಮೊ.9480803039, ಕುರುಗೋಡು ಪಿಎಸ್ಐ ಮೊ.9480803051 ಅಥವಾ ಬಳ್ಳಾರಿ ಪೆÇಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande