
ಗದಗ, 02 ಮಾರ್ಚ್ (ಹಿ.ಸ.)
ಆ್ಯಂಕರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2026-27ನೇ ಸಾಲಿನ ಸದಸ್ಯತ್ವ ನವೀಕರಣ ಅಥವಾ ಹೊಸ ಸದಸ್ಯತ್ವ ಪಡೆಯಲು ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗದಗ ಜಿಲ್ಲಾ ಘಟಕದಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಮಾಚ್ 08 ಕೊನೆಯ ದಿನವಾಗಿದೆ.
ಮಾರ್ಚ 1ರಿಂದ ಅರ್ಜಿಗಳನ್ನು ಗದಗ ನಗರದ ಮುಳಗುಂದ ರಸ್ತೆಯ ಪತ್ರಿಕಾ ಭವನದಲ್ಲಿ ಭಾನುವಾರ ಹಾಗೂ ರಜಾ ದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ 10 ರಿಂದ ಮದ್ಯಾನ್ಹ 2 ಘಂಟೆಯವರೆಗೂ ಪಡೆಯಬಹುದು. ಗದಗ ಜಿಲ್ಲಾ ಕೇಂದ್ರದ ಪತ್ರಕರ್ತರು ಭರ್ತಿ ಮಾಡಿದ ಅರ್ಜಿಗಳನ್ನು ಗದಗ ಪತ್ರಿಕಾ ಭವನದಲ್ಲೇ ಸಲ್ಲಿಸಬೇಕು. ತಾಲೂಕಾ ಕೇಂದ್ರದ ಪತ್ರಕರ್ತರು ಆಯಾ ತಾಲೂಕಿನ ಅಧ್ಯಕ್ಷರ ಬಳಿ ಅರ್ಜಿ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ.
ಅರ್ಜಿ ನವೀಕರಣ ಅಥವಾ ನೂತನ ಸದಸ್ಯತ್ವ ಪಡೆಯಲು ಹಿಂದಿನ ವರ್ಷದ ಸಂಘದ ಕಾರ್ಡ್(ಅರ್ಜಿ ನವೀಕರಣಕ್ಕೆ ಮಾತ್ರ), ಸಂಪಾದಕರು ಅಥವಾ ಮಾಧ್ಯಮ ಸಂಸ್ಥೆಗಳು ನೀಡಿದ ಆದೇಶ ಪ್ರತಿ, ಆಧಾರ್ ಕಾರ್ಡ್, ಎಸ್ ಎಸ್ ಎಲ್ ಸಿ ತೇರ್ಗಡೆ ಪ್ರಮಾಣ ಪತ್ರ, ಜೊತೆಗೆ ಕನಿಷ್ಠ ಎರಡು ವರ್ಷ ಸೇವಾನುಭವ ಹೊಂದಿರುವ ಕುರಿತು ಸಂಸ್ಥೆಗಳಿಂದ ದೃಢಿಕರಣ ಪತ್ರ (ಹೊಸ ಅರ್ಜಿ ಸಲ್ಲಿಸುವವರು) ಎರಡು ಭಾವಚಿತ್ರ ಮತ್ತು 510 ರೂ. ಶುಲ್ಕದೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು.
ತಾಲೂಕು ಮಟ್ಟದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಆಯಾ ತಾಲೂಕು ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪದಾಧಿಕಾರಿಗಳು ಪರಾಮರ್ಶೆ ನಡೆಸಿ ಮಾ.8 ರೊಳಗೆ ಅರ್ಜಿ ಮತ್ತು ಶುಲ್ಕದ ಮೊತ್ತವನ್ನು ಜಿಲ್ಲಾ ಸಮಿತಿಗೆ ರವಾನಿಸಬೇಕು.
ಸದಸ್ಯತ್ವ ಮಾರ್ಗಸೂಚಿಗಳನ್ನು ಮುಳಗುಂದ ರಸ್ತೆಯ ಪತ್ರಿಕಾಭವನದ ಸೂಚನಾ ಫಲಕದಲ್ಲಿ ಅಳವಡಿಸಲಾಗಿದ್ದು ಹೆಚ್ಚಿನ ಮಾಹಿತಿಗೆ ಸೂಚನಾ ಫಲಕ ನೋಡಬಹುದು. ಸದಸ್ಯತ್ವ ನೀಡುವ ವಿಚಾರದಲ್ಲಿ ರಾಜ್ಯ ಸಮಿತಿ ಸೂಚಿಸಿದ ಮಾನದಂಡಗಳನ್ನು ಪಾಲಿಸಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಎಂ. ಹೆಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP