ಮಧ್ಯಪ್ರಾಚ್ಯ ಉದ್ವಿಗ್ನತೆ: ಹಲವು ಅಂತಾರಾಷ್ಟ್ರೀಯ ವಿಮಾನಗಳು ರದ್ದು
ನವದೆಹಲಿ, 02 ಮಾರ್ಚ್ (ಹಿ.ಸ.): ಆ್ಯಂಕರ್:ಇರಾನ್–ಇಸ್ರೇಲ್–ಅಮೆರಿಕಾ ನಡುವಿನ ಸಂಘರ್ಷದ ಹಿನ್ನೆಲೆ ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶ ನಿರ್ಬಂಧಗಳು ಜಾರಿಯಾಗಿದ್ದು, ಭಾರತದಿಂದ ಹೊರಡುವ ಹಾಗೂ ಆಗಮಿಸುವ ಅನೇಕ ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿವೆ. ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ ಹಲವು ವಿಮಾನ
Flight cancel


ನವದೆಹಲಿ, 02 ಮಾರ್ಚ್ (ಹಿ.ಸ.):

ಆ್ಯಂಕರ್:ಇರಾನ್–ಇಸ್ರೇಲ್–ಅಮೆರಿಕಾ ನಡುವಿನ ಸಂಘರ್ಷದ ಹಿನ್ನೆಲೆ ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶ ನಿರ್ಬಂಧಗಳು ಜಾರಿಯಾಗಿದ್ದು, ಭಾರತದಿಂದ ಹೊರಡುವ ಹಾಗೂ ಆಗಮಿಸುವ ಅನೇಕ ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿವೆ.

ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಭದ್ರತಾ ಕಾರಣಗಳಿಂದ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಇಂಡಿಗೋ ಮಾರ್ಚ್ 2 ಮತ್ತು 3ರಂದು ಒಟ್ಟು 203 ವಿಮಾನಗಳನ್ನು ರದ್ದುಗೊಳಿಸಿದ್ದು, ಇದು ಮುನ್ನೆಚ್ಚರಿಕೆ ಕ್ರಮ ಎಂದು ತಿಳಿಸಿದೆ.

ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಕಟಣೆಯಲ್ಲಿ, ಮಧ್ಯಪ್ರಾಚ್ಯದ ರಾಜಕೀಯ ಪರಿಸ್ಥಿತಿಯಿಂದ ಪಶ್ಚಿಮಮುಖಿ ವಿಮಾನಗಳು ವ್ಯತ್ಯಯ ಮತ್ತು ಮರು ವೇಳಾಪಟ್ಟಿಯನ್ನು ಎದುರಿಸುತ್ತಿವೆ ಎಂದು ತಿಳಿಸಿದೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಯೂ ಹಲವು ವಿಮಾನಗಳು ರದ್ದಾಗಿದ್ದು, ಪ್ರಯಾಣಿಕರು ಅನಾನುಕೂಲತೆಯನ್ನು ಅನುಭವಿಸುತ್ತಿದ್ದಾರೆ. ಭಾನುವಾರ ಮಾತ್ರ ದೇಶದಾದ್ಯಂತ ಸುಮಾರು 350 ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿದ್ದು, ಮುಂಬೈನಲ್ಲಿ 125, ದೆಹಲಿಯಲ್ಲಿ 100 ಮತ್ತು ಅಮೃತಸರದಲ್ಲಿ 10 ವಿಮಾನಗಳು ಸ್ಥಗಿತಗೊಂಡಿವೆ.

ಕತಾರ್ ಏರ್ವೇಸ್, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಸ್ಪೈಸ್‌ಜೆಟ್ ಸೇರಿದಂತೆ ಹಲವು ಸಂಸ್ಥೆಗಳ ದುಬೈ, ದೋಹಾ ಮತ್ತು ಶಾರ್ಜಾ ಮಾರ್ಗದ ವಿಮಾನಗಳು ಪರಿಣಾಮಕ್ಕೊಳಗಾಗಿವೆ.

ಪ್ರಯಾಣಿಕರು ತಮ್ಮ ವಿಮಾನಗಳ ಸ್ಥಿತಿಯನ್ನು ಸಂಬಂಧಿತ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande