
ಗಂಗಾವತಿ, 02 ಮಾರ್ಚ್ (ಹಿ.ಸ.)
ಆ್ಯಂಕರ್: ವಿಜಯವೃಂದ ಯುವಕ ಸಂಘದ ವತಿಯಿಂದ ಗಂಗಾವತಿ ನಗರದಲ್ಲಿ ಹೋಳಿ ಸಂಭ್ರಮಾಚರಣೆ ಮಹೋತ್ಸವ ಇದೇ ತಿಂಗಳು 4ನೇ ತಾರೀಕು ಬುಧವಾರದಂದು ಕನಕಗಿರಿ ರಸ್ತೆಯಲ್ಲಿ ಇರುವ ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೂ ಡಿಜೆ ವಾದ್ಯದೊಂದಿಗೆ ಬಣ್ಣದೋಕುಳಿ ಜರುಗುವುದು, ಈ ಬಣ್ಣದೋಕುಳಿ ಯಲ್ಲಿ
ನೈಸರ್ಗಿಕ ಬಣ್ಣಗಳು ಬಳಸಿ, ರಾಸಾಯನಿಕ ಬಣ್ಣಗಳು ಬಳಸಬೇಡಿ ಎಂದು ಸೂಚನೆ ನೀಡಿದ್ದಾರೆ. ವಿಶೇಷವಾಗಿ ಸಂಘದಿಂದನೆ ನೈಸರ್ಗಿಕ ಬಣ್ಣಗಳನ್ನು ಉಚಿತವಾಗಿ ಕೊಡುತ್ತೇವೆ. ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ,
ಗಂಗಾವತಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿಜಯ ವೃಂದ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್