ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡವರ ಸಂಬಂಧಿಕರಿಗೆ ಸಹಾಯವಾಣಿ ವಿವರ
ಗದಗ, 02 ಮಾರ್ಚ್ (ಹಿ.ಸ.) ಆ್ಯಂಕರ್:- ಮಧ್ಯ ಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಸಾವು–ನೋವು ಸಂಭವಿಸಿದೆ. ಈ ಯುದ್ಧ ಪೀಡಿತ ಪ್ರದೇಶಗಳಲ್ಲಿ ಕರ್ನಾಟಕದ ಹಲವರು ಸಿಲುಕಿಕೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಗದಗ ಜಿಲ್ಲೆಯ
ಫೋಟೋ


ಗದಗ, 02 ಮಾರ್ಚ್ (ಹಿ.ಸ.)

ಆ್ಯಂಕರ್:- ಮಧ್ಯ ಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಸಾವು–ನೋವು ಸಂಭವಿಸಿದೆ. ಈ ಯುದ್ಧ ಪೀಡಿತ ಪ್ರದೇಶಗಳಲ್ಲಿ ಕರ್ನಾಟಕದ ಹಲವರು ಸಿಲುಕಿಕೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಗದಗ ಜಿಲ್ಲೆಯ ನಿವಾಸಿಗಳೂ ಈ ದೇಶಗಳಲ್ಲಿ ಅಡಕವಾಗಿರುವ ಸಾಧ್ಯತೆ ಇದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಯುದ್ಧ ಪೀಡಿತ ರಾಷ್ಟ್ರಗಳಲ್ಲಿ ಗದಗ ಜಿಲ್ಲೆಯ ಯಾರಾದರೂ ಸಿಲುಕಿಕೊಂಡಿದ್ದಲ್ಲಿ, ಅವರ ಕುಟುಂಬದ ಸದಸ್ಯರು ಅಥವಾ ಸಂಬಂಧಿಕರು ತಕ್ಷಣವೇ ಸಂಬಂಧಿಸಿದ ದೇಶಗಳ ಕಂಟ್ರೋಲ್ ರೂಂ ಸಹಾಯವಾಣಿಗಳಿಗೆ ಅಥವಾ ಗದಗ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಇದರಿಂದ ಸಿಲುಕಿಕೊಂಡವರ ಕುರಿತು ನಿಖರ ಮಾಹಿತಿ ಸಂಗ್ರಹಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೂಲಕ ಅಗತ್ಯ ನೆರವು ಒದಗಿಸಲು ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.

ವಿವಿಧ ದೇಶಗಳ ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆಗಳು

ಕತಾರ್: 00974–55647502

ಬಹ್ರೇನ್: 00973–39418071

ಜೋರ್ಡನ್: 00962–770422276

ಓಮನ್: ಟೋಲ್ ಫ್ರೀ – 8007 1234

ವಾಟ್ಸ್ಆಪ್ – 96898282270

ಇರಾಕ್:

+964 771 651 1185 (ಇಂಗ್ಲಿಷ್ ಮತ್ತು ಹಿಂದಿ)

+964 770 444 4899 (ಅರೇಬಿಕ್)

ಕುವೈತ್: 9656501946

ಪ್ಯಾಲೆಸ್ಟೈನ್: 970 592916418

ಗದಗ ಜಿಲ್ಲೆಯ ವಿಪತ್ತು ನಿರ್ವಹಣಾ ಕೇಂದ್ರಗಳ ದೂರವಾಣಿ ಸಂಖ್ಯೆಗಳು

ಗದಗ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ: 08372–239177

ತಾಲೂಕು ವಿಪತ್ತು ನಿರ್ವಹಣಾ ಕೇಂದ್ರಗಳು:

ಗದಗ – 08372–250009

ಗಜೇಂದ್ರಗಡ – 08381–298982

ಲಕ್ಷ್ಮೇಶ್ವರ – 08487–273273

ಮುಂಡರಗಿ – 08371–262237

ನರಗುಂದ – 08377–245243

ರೋಣ – 08381–267237

ಶಿರಹಟ್ಟಿ – 08487–242100

ಯುದ್ಧ ಪೀಡಿತ ದೇಶಗಳಲ್ಲಿ ಸಿಲುಕಿಕೊಂಡಿರುವವರ ವಿವರಗಳು, ಪಾಸ್ಪೋರ್ಟ್ ಮಾಹಿತಿ, ಸಂಪರ್ಕ ಸಂಖ್ಯೆ ಹಾಗೂ ವಾಸ್ತವ್ಯ ಸ್ಥಳದ ಮಾಹಿತಿಯನ್ನು ನೀಡುವುದರಿಂದ ರಕ್ಷಣಾ ಹಾಗೂ ಸಹಾಯ ಕಾರ್ಯಗಳು ವೇಗವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೇ, ಅಧಿಕೃತ ಸಹಾಯವಾಣಿ ಸಂಖ್ಯೆಗಳ ಮೂಲಕ ಮಾತ್ರ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande