ಚನ್ನಮ್ಮ ವಸತಿ ಶಾಲೆ ಸಂಕೀರ್ಣದ ಶಂಕುಸ್ಥಾಪನೆ
ಬೀದರ್, 02 ಮಾರ್ಚ್ (ಹಿ.ಸ.): ಆ್ಯಂಕರ್: 16.75 ಕೋಟಿ ರೂ ವೆಚ್ಚದಲ್ಲಿ ಬೀದರ್ ಜಿಲ್ಲೆಯ ಹುಮನಾಬಾದ ಮತಕ್ಷೇತ್ರದ ಚಿಟ್ಟಗುಪ್ಪ ತಾಲೂಕಿನ ತಾಳಮಡಗಿ (ಹಿಪ್ಪರ್ಗಾ) ಬಳಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಸಂಕೀರ್ಣದ ಶಂಕುಸ್ಥಾಪನೆಯನ್ನು ಸಚಿವ ಈಶ್ವರ ಖಂಡ್ರೆ ನೆರವೇರ
Foundation


ಬೀದರ್, 02 ಮಾರ್ಚ್ (ಹಿ.ಸ.):

ಆ್ಯಂಕರ್:

16.75 ಕೋಟಿ ರೂ ವೆಚ್ಚದಲ್ಲಿ ಬೀದರ್ ಜಿಲ್ಲೆಯ ಹುಮನಾಬಾದ ಮತಕ್ಷೇತ್ರದ ಚಿಟ್ಟಗುಪ್ಪ ತಾಲೂಕಿನ ತಾಳಮಡಗಿ (ಹಿಪ್ಪರ್ಗಾ) ಬಳಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಸಂಕೀರ್ಣದ ಶಂಕುಸ್ಥಾಪನೆಯನ್ನು ಸಚಿವ ಈಶ್ವರ ಖಂಡ್ರೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆ. ವಸತಿ ಶಾಲೆಗಳ ಮೂಲಕ ಶೈಕ್ಷಣಿಕ ಸಮಾನತೆ ಸಾಧಿಸಿ, ಮಕ್ಕಳ ಭವಿಷ್ಯಕ್ಕೆ ಬಲವಾದ ಅಡಿಪಾಯ ಹಾಕುವುದು ನಮ್ಮ ಸಂಕಲ್ಪ. ಈ ಶಾಲಾ ಸಂಕೀರ್ಣವು ಈ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೊಸ ದಿಕ್ಕು ನೀಡಲಿದೆ ಎಂದರು.

ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತವೆ. ಇದಕ್ಕೆ ಅಡ್ಡಿಪಡಿಸಿ ರಾಜಕೀಯ ಮಾಡಲು ಬಯಸುವವರು, ತಮ್ಮ ಕ್ಷೇತ್ರದ ಜನತೆಗೆ ಮಾಡುವ ಮಹಾಮೋಸವೆಂಬುದು ಅರ್ಥಮಾಡಿಕೊಳ್ಳಬೇಕು. ಜನರ ಹಿತ, ಮಕ್ಕಳ ಭವಿಷ್ಯ ಹಾಗೂ ಪ್ರದೇಶದ ಸಮಗ್ರ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ. ಯಾವುದೇ ಅಡ್ಡಿ–ಅವಾಂತರಗಳಿಗೂ ಜಗ್ಗದೆ ಅಭಿವೃದ್ಧಿ ಪಥವನ್ನು ಮುಂದುವರಿಸುತ್ತೇವೆ ಎಂದರು

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande