
ಹಾಸನ, 02 ಮಾರ್ಚ್ (ಹಿ.ಸ.):
ಆ್ಯಂಕರ್:ಹಾಸನ ನಗರದ ಎಪಿಎಂಸಿ ಆವರಣದಲ್ಲಿರುವ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಅವರು ಭೇಟಿ ರಾಗಿ ಖರೀದಿಯ ಗುಣಮಟ್ಟದ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ 26 ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ, ಆಲೂರು ಹಾಗೂ ಸಕಲೇಶಪುರ ಕೇಂದ್ರ ಹೊರತು ಪಡಿಸಿ ಇತರೆ ಎಲ್ಲಾ ಕೇಂದ್ರಗಳಲ್ಲಿ ರಾಗಿ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
ರಾಗಿಯನ್ನು ಸ್ವಚ್ಚಗೊಳಿಸುವ ವೇಸ್ಟೇಜ್‌ನ ಪ್ರಮಾಣ ಹೆಚ್ಚು ಬರುತ್ತಿದೆ ಎಂದು ರೈತರಿಂದ ದೂರುಗಳು ಬಂದಿದ್ದು, 2 ಭಾರಿ ಸ್ವಚ್ಚತೆಯನ್ನು ಮಾಡಲು ಸೂಚನೆಯನ್ನು ನೀಡಲಾಗಿದೆ ಹಾಗೂ ಹಮಾಲಿಗಳಿಂದ ಹೆಚ್ಚಿನ ಹಣ ಬೇಡಿಕೆ ಇತ್ತು ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಿದರು.
ತೂಕ ಹಾಗೂ ಗುಣಮಟ್ಟದಲ್ಲಿ ಖರೀದಿ ಮಾಡುವ ಉದ್ದೇಶದಿಂದ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ, ಎಪಿಎಂಸಿ ಕಾರ್ಯದರ್ಶಿ, ಆಹಾರ ನಾಗರಿಕ ಸರಬರಾಜು ಇಲಾಖೆಯ ಶಿರೇಸ್ತೆದ್ದಾರ್, ಉಪ ತಹಶೀಲ್ದಾರ್‌ರರು ಒಳಗೊಂಡ ಸಮಿತಿಯನ್ನು ಮಾಡಲಾಗಿದೆ ಮೇಲುಸ್ತುವಾರಿ ಮಾಡಲಾಗುತ್ತಿದೆ ಎಂದರು.
ಪ್ರತಿ ಕೇಂದ್ರದಲ್ಲಿ ಯಾವುದೇ ರೈತರಿಗೆ ತೊಂದರೆಯಾಗದಂತೆ ಮೋಸ ಆಗದಂತೆ, ಅಕ್ರಮಗಳು ನಡೆಯದಂತೆ ಪಾರದರ್ಶಕತೆಯಿಂದ ನಡೆಸಲು ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ವಾಹನಗಳ ಮೂಲಕ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮುಗಳಲ್ಲಿ ಶೇಖರಿಸಿಡಲಾಗುತ್ತದೆ, ಗೋದಾಮುಗಳಿಗೆ ಸಾಗಣಿಕೆ ಮಾಡುವ ವಾಹನಕ್ಕೆ ಜಿ.ಪಿ.ಎಸ್ ಅಳವಡಿಸಲಾಗಿದೆ ಹಾಗೂ ಲಾರಿಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಸಂಬಂಧಪಟ್ಟ ಏಜೆನ್ಸಿಯವರಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಅರುಣ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa