ನಾಗಾವಿ ಗ್ರಾಮದಲ್ಲಿ ಕಡಲೆ ಖರೀದಿ ಕೇಂದ್ರ ಪ್ರಾರಂಭ
ಗದಗ, 02 ಮಾರ್ಚ್ (ಹಿ.ಸ.) ಆ್ಯಂಕರ್:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಂಬಲ ಬೆಲೆ ಯೋಜನೆಯಡಿ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾಗಾವಿ ಗ್ರಾಮದಲ್ಲಿ ಕಡಲೆ ಕಾಳು ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ.2 ವತಿಯಿಂದ ಅಧಿಕೃತವಾಗಿ ಕಡಲೆ ಖರೀದಿ ಕ
ಫೋಟೋ


ಗದಗ, 02 ಮಾರ್ಚ್ (ಹಿ.ಸ.)

ಆ್ಯಂಕರ್:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಂಬಲ ಬೆಲೆ ಯೋಜನೆಯಡಿ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾಗಾವಿ ಗ್ರಾಮದಲ್ಲಿ ಕಡಲೆ ಕಾಳು ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ.2 ವತಿಯಿಂದ ಅಧಿಕೃತವಾಗಿ ಕಡಲೆ ಖರೀದಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ರೈತರು ತಮ್ಮ ಬೆಳೆಗಳನ್ನು ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡಿಕೊಳ್ಳಲು ಅನುಕೂಲವಾಗುವ ಉದ್ದೇಶದಿಂದ ಈ ಖರೀದಿ ಕೇಂದ್ರವನ್ನು ಆರಂಭಿಸಲಾಗಿದೆ. ಇದರಿಂದಾಗಿ ರೈತರಿಗೆ ನ್ಯಾಯಸಮ್ಮತ ಬೆಲೆ ದೊರೆಯುವುದರ ಜೊತೆಗೆ ಆರ್ಥಿಕ ಭದ್ರತೆ ಹೆಚ್ಚಾಗಲಿದೆ ಎಂದು ಸಂಘದ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಖರೀದಿ ಕೇಂದ್ರ ಉದ್ಘಾಟನಾ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬಿ.ಎಸ್. ಚಿಂಚಲಿ ಅವರು ಮಾತನಾಡಿ, “ರೈತರು ತಮ್ಮ ಬೆಳೆಯನ್ನು ಸುರಕ್ಷಿತವಾಗಿ ಹಾಗೂ ಪಾರದರ್ಶಕ ರೀತಿಯಲ್ಲಿ ಮಾರಾಟ ಮಾಡುವ ಅವಕಾಶ ಕಲ್ಪಿಸುವುದು ಸಹಕಾರ ಸಂಘಗಳ ಪ್ರಮುಖ ಕರ್ತವ್ಯ. ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿ ಕೇಂದ್ರ ಆರಂಭಿಸಿರುವುದು ರೈತರ ಬದುಕಿಗೆ ಬಲ ತುಂಬುವ ಮಹತ್ವದ ಹೆಜ್ಜೆಯಾಗಿದೆ” ಎಂದರು.

ಉಪಾಧ್ಯಕ್ಷರಾದ ಈಶ್ವರಪ್ಪ ಗೋಲಪ್ಪನವರ ಮಾತನಾಡಿ, “ರೈತರು ಖರೀದಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು. ಅಗತ್ಯ ದಾಖಲೆಗಳೊಂದಿಗೆ ಬೆಳೆಯನ್ನು ತರಿಸಿ ಸರ್ಕಾರ ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಿ ಲಾಭ ಪಡೆಯಬೇಕು” ಎಂದು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಸುರೇಶ ಚಲವಾದಿ, ಬಸವರಾಜ ಈಳಗೇರ, ನಿಂಗಪ್ಪ ಅಳಗವಾಡಿ, ನಾಗೇಶ ಕಮತರ, ಶಿದ್ದಯ್ಯ ಹಿರೇಮಠ, ನಬಿಸಾಬ ಚಿಂಚಲಿ, ಚನ್ನಬಸಪ್ಪ ಮಡಿವಾಳರ, ಈರಪ್ಪ ಹಾವಳೆಪ್ಪನವರ, ಶ್ರೀಮತಿ ರೂಪಾ ಮಾಡಳ್ಳಿ, ದ್ರಾಕ್ಷಾಯಿಣಿ ರೇವಯ್ಯನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಘದ ಸಿ.ಇ.ಓ ಎಸ್.ವಾಯ್. ಹಾವಳೆಪ್ಪನವರ ಖರೀದಿ ಪ್ರಕ್ರಿಯೆಯ ತಾಂತ್ರಿಕ ಮಾಹಿತಿ ನೀಡಿ, ರೈತರಿಗೆ ಮಾರ್ಗದರ್ಶನ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮದ ರೈತರಾದ ಗೂಳಪ್ಪ ಹೊಂಬಳ, ವೈಲಾರಪ್ಪ ತಾಮ್ರಗುಂಡಿ, ಪರಪ್ಪ ಸೊಪ್ಪಿನ ಸೇರಿದಂತೆ ಹಲವರು ಭಾಗವಹಿಸಿ, ಖರೀದಿ ಕೇಂದ್ರ ಆರಂಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. “ಕಳೆದ ಕೆಲವು ವರ್ಷಗಳಿಂದ ಕಡಲೆ ಬೆಲೆಯ ಅಸ್ಥಿರತೆಯಿಂದ ನಷ್ಟ ಅನುಭವಿಸುತ್ತಿದ್ದೆವು. ಇದೀಗ ಸರ್ಕಾರದ ಬೆಂಬಲ ಬೆಲೆಯಡಿ ಖರೀದಿ ನಡೆಯುತ್ತಿರುವುದರಿಂದ ನಮಗೆ ಭರವಸೆ ಮೂಡಿದೆ” ಎಂದು ರೈತರು ಹೇಳಿದರು.

ಖರೀದಿ ಕೇಂದ್ರದಲ್ಲಿ ಸರ್ಕಾರ ನಿಗದಿಪಡಿಸಿದ ಗುಣಮಟ್ಟದ ಮಾನದಂಡಗಳ ಆಧಾರದ ಮೇಲೆ ಕಡಲೆ ಕಾಳುಗಳನ್ನು ಸ್ವೀಕರಿಸಲಾಗುತ್ತಿದ್ದು, ಪಾರದರ್ಶಕ ತೂಕಮಾಪನ ಹಾಗೂ ನೇರ ಪಾವತಿ ವ್ಯವಸ್ಥೆ ಜಾರಿಯಲ್ಲಿರಲಿದೆ ಎಂದು ಸಂಘದ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ರೈತರು ಈ ಕೇಂದ್ರದ ಪ್ರಯೋಜನ ಪಡೆದುಕೊಳ್ಳುವ ನಿರೀಕ್ಷೆಯಿದೆ.

ಈ ಖರೀದಿ ಕೇಂದ್ರವು ನಾಗಾವಿ ಗ್ರಾಮ ಸೇರಿದಂತೆ ಸುತ್ತಮುತ್ತಲ ರೈತರಿಗೆ ಆರ್ಥಿಕ ನೆರವಾಗುವುದರ ಜೊತೆಗೆ ಸಹಕಾರ ಚಳವಳಿಗೆ ಹೊಸ ಚೈತನ್ಯ ನೀಡಲಿದೆ ಎಂಬ ವಿಶ್ವಾಸವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande