ಪ್ರೊ. ಸಿ.ವಿ. ರಾಮನ್ ವಿಶ್ವಕಂಡ ಶ್ರೇಷ್ಠ ವಿಜ್ಞಾನಿ - ಪ್ರೋ. ಎಸ್.ಟಿ. ನಂದಿಬೇವೂರು
ಕೊಪ್ಪಳ, 02 ಮಾರ್ಚ್ (ಹಿ.ಸ.) ಆ್ಯಂಕರ್: ಪ್ರೊ. ಸಿ.ವಿ. ರಾಮನ್ ಅವರು ದೇಶೀ ಮತ್ತು ವಿಶ್ವ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಹೊಸ ಶಕ್ತಿತಂದಿದ್ದರು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಜೀವನಾವಧಿ ಪ್ರಾಧ್ಯಾಪಕರಾದ ಪ್ರೋ. ಎಸ್.ಟಿ. ನಂದಿಬೇವೂರು ಅವರು ತಿಳಿಸಿದ್ದಾರೆ. ಶ್ರೀ ಗವಿಸಿದ್ದೇಶ್ವರ
ಪ್ರೊ. ಸಿ.ವಿ. ರಾಮನ್ ವಿಶ್ವಕಂಡ ಶ್ರೇಷ್ಠ ವಿಜ್ಞಾನಿ - ಪ್ರೋ. ಎಸ್.ಟಿ. ನಂದಿಬೇವೂರು


ಪ್ರೊ. ಸಿ.ವಿ. ರಾಮನ್ ವಿಶ್ವಕಂಡ ಶ್ರೇಷ್ಠ ವಿಜ್ಞಾನಿ - ಪ್ರೋ. ಎಸ್.ಟಿ. ನಂದಿಬೇವೂರು


ಕೊಪ್ಪಳ, 02 ಮಾರ್ಚ್ (ಹಿ.ಸ.)

ಆ್ಯಂಕರ್: ಪ್ರೊ. ಸಿ.ವಿ. ರಾಮನ್ ಅವರು ದೇಶೀ ಮತ್ತು ವಿಶ್ವ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಹೊಸ ಶಕ್ತಿತಂದಿದ್ದರು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಜೀವನಾವಧಿ ಪ್ರಾಧ್ಯಾಪಕರಾದ ಪ್ರೋ. ಎಸ್.ಟಿ. ನಂದಿಬೇವೂರು ಅವರು ತಿಳಿಸಿದ್ದಾರೆ.

ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ `ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಯಲ್ಲಿ `ವಿಜ್ಞಾನದಲ್ಲಿ ಮಹಿಳೆ-ಅಭಿವೃದ್ದಿಶೀಲ ಭಾರತದ ಪ್ರೇರಕ ಶಕ್ತಿ’ ಘೋಷದ ಅಡಿಯಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಪ್ರೊ. ಸಿ.ವಿ. ರಾಮನ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ನೋಬೆಲ್ ಗೌರವ ತಂದುಕೊಟ್ಟಿದ್ದರು. ಸಿವಿಲ್ ಸೇವೆಗೆ ರಾಜೀನಾಮೆ ನೀಡಿ, ಪ್ರಾಧ್ಯಾಪಕರಾಗಿ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ರಾಮನ್, ತಮ್ಮಲ್ಲಿಯ ಕುತೂಹಲ, ಆಸಕ್ತಿಗಳಿಂದಲೇ ದೊಡ್ಡ ಸಂಶೋಧಕರಾಗಿ ಖ್ಯಾತರಾದರು ಎಂದರು.

ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ನ ಕಾರ್ಯದರ್ಶಿಗಳಾದ ಡಾ. ಆರ್. ಮರೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಿ.ವಿ. ರಾಮನ್ ಅವರು ಪ್ರಪಂಚ ಕಂಡ ಶ್ರೇಷ್ಠ ವಿಜ್ಞಾನಿ. ಭಾರತದ ವಿಜ್ಞಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯ ಸ್ಮರಣೆಗಾಗಿ ಆ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್.ಬಿ. ಕಂಬಾರ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತ ಕೋರಿದರು. ಪೆÇ್ರ. ಶ್ರೀಧರ್ ಪೂಜಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕರಾದ ಡಾ. ಕೆ. ಕವಿತಾ ಅವರು ವಂದಿಸಿದರು.

ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಂಯೋಜಕರಾದ ಪ್ರೊ. ಎಚ್.ವಿ. ಆನಂದಹಳ್ಳಿ ಹಾಗೂ ಹಾಗೂ ಪ್ರಾಧ್ಯಾಪಕರಾದ ನಾಗರಾಜ್ ಬೊಮ್ಮನಾಳ್, ಡಾ. ಚನ್ನಬಸವ, ಡಾ. ನಾಗರಾಜ್ ದಂಡೋತಿ, ಡಾ. ಶೈಲಜಾ ಅರಲೇಮಠ, ಡಾ. ಆನಂದರಾವ ದೇಸಾಯಿ, ಡಾ. ನೀಲಾಂಬಿಕೆ ಹುದ್ದಾರ ಅವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande