ಬಲ್ಡೋಟ ವಿರೋಧಿ ಧರಣಿ : ನಿಂಗೋಜಿ ಹೈಸ್ಕೂಲ್ ಮಕ್ಕಳಿಂದ 'ಭೂತಾಯಿ' ಪ್ರದರ್ಶನ
ಕೊಪ್ಪಳ, 02 ಮಾರ್ಚ್ (ಹಿ.ಸ.) ಆ್ಯಂಕರ್: ನಗರಸಭೆ ಮುಂದುಗಡೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿ ಯಾ ವೇದಿಕೆ ನಡೆಸಿರುವ 123ನೇ ದಿನದ ಬಲ್ಡೋಟ ಹಟಾವೋ ಧರಣಿಯನ್ನು ನಗರದ ಬಿ.ಟಿ.ಪಾಟೀಲ್ ನಗರದ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಮಂಡಳಿಯವರು ನಡೆಸಿದರು.
ಬಲ್ಡೋಟ ವಿರೋಧಿ ಧರಣಿ : ನಿಂಗೋಜಿ ಹೈಸ್ಕೂಲ್ ಮಕ್ಕಳಿಂದ 'ಭೂತಾಯಿ' ಪ್ರದರ್ಶನ


ಬಲ್ಡೋಟ ವಿರೋಧಿ ಧರಣಿ : ನಿಂಗೋಜಿ ಹೈಸ್ಕೂಲ್ ಮಕ್ಕಳಿಂದ 'ಭೂತಾಯಿ' ಪ್ರದರ್ಶನ


ಕೊಪ್ಪಳ, 02 ಮಾರ್ಚ್ (ಹಿ.ಸ.)

ಆ್ಯಂಕರ್: ನಗರಸಭೆ ಮುಂದುಗಡೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿ ಯಾ ವೇದಿಕೆ ನಡೆಸಿರುವ 123ನೇ ದಿನದ ಬಲ್ಡೋಟ ಹಟಾವೋ ಧರಣಿಯನ್ನು ನಗರದ ಬಿ.ಟಿ.ಪಾಟೀಲ್ ನಗರದ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಮಂಡಳಿಯವರು ನಡೆಸಿದರು.

ಇಂದಿನ ಧರಣಿ ವೇದಿಕೆಯಲ್ಲಿ ಎಸ್.ಎ.ನಿಂಗೋಜಿ ಇಂಟರ್ ನ್ಯಾಶನಲ್ ಶಾಲೆ, ದದೇಗಲ್ ವಿದ್ಯಾರ್ಥಿಗಳು ಶಿಕ್ಷಕ ಈಶಪ್ಪ ಅವರು ನಿರ್ದೇಶಿಸಿದ 'ಭೂತಾಯಿ' ಕಿರು ನಾಟಕ ಪ್ರದರ್ಶನ ಮಾಡಿದರು. ಕಾರ್ಖಾನೆ ಮಾಲೀಕರು ಮುಗ್ಧ ರೈತರಿಗೆ ಆಮಿಷ ಒಡ್ಡಿ, ಹಣದ ಆಸೆ ಹುಟ್ಟಿಸಿ, ಬೆದರಿಕೆ ಹಾಕಿ ಭೂಮಿ ಕಿತ್ತುಕೊಳ್ಳುವ ಸಂಚನ್ನು ಅನಾವರಣಗೊಳಿಸುವ ಪಾತ್ರಗಳು ಭೂತಾಯಿ ನೇಣಿಗೆ ಶರಣಾಗಲು ಮುಂದಾದ ರೈತನನ್ನು ಸಂತೈಸಿ, ಮಗನೆ ನನ್ನನು ನೀನು ಬಿಡಬೇಡ, ನಿನ್ನನು ನಾನು ಕಾಪಾಡುತ್ತೇನೆ. ಈ ಕಾರ್ಖಾನೆ ದುರುಳರು ನನ್ನನು ವಶಕ್ಕೆ ತೆಗೆದುಕೊಂಡು ಅನ್ನ ಸಿಗದಂತೆ ಮಾಡುತ್ತಾರೆ ನಾನು ನಿನ್ನಲ್ಲಿಯೇ ಇರುತ್ತೇನೆ ಎನ್ನುವ ವಾಗ್ದಾನ ಕಣ್ಣೀರಿಳಿಯುವಂತೆ ಮಾಡಿತು. ಪಾತ್ರ ನಿರ್ವಹಿಸಿದ ಮಕ್ಕಳು ಮನೋಜ್ಞವಾಗಿ ಅಭಿನಯಿಸಿದರು.

ಪ್ರಿನ್ಸಿಪಾಲ್ ಸಂಪತ್ ಆಕಳವಾಡಿ ಮಾತನಾಡಿ, ಕೊಪ್ಪಳ ಈಗ ಅತ್ಯಂತ ಅಪಾಯಕಾರಿ ವಾತಾವರಣಕ್ಕೆ ಸಿಲುಕಿದೆ. ಬಲ್ಡೋಟ ಇಲ್ಲಿಂದ ತೊಲಗದಿದ್ದರೆ ಮುಂದಿನ ಭವಿಷ್ಯದ ಕರಾಳ ಅಧ್ಯಾಯ ಆರಂಭವಾದಂತೆ. ಈ ಹಿಂದೆ ಹಳ್ಳಿಗಳಲ್ಲಿ ಜನ ವಿರೋಧಿಸಿದಾಗಲೂ ಅವರ ಕೂಗಿಗೆ ಧ್ವನಿಯಾಗದೆ ದಬ್ಬಾಳಿಕೆ ಮಾಡಿ ಮಾಲಿನ್ಯಕಾರಕ ಕಾರ್ಖಾನೆಗಳ ಸ್ಥಾಪನೆ ಮಾಡಲಾಯಿತು. ಈಗ ಅಲ್ಲಿ ಆರೋಗ್ಯ ಕ್ಷೀಣಿಸಿ ಜನರು ಸಾಯುತ್ತಿರುವ ಚಿತ್ರಣ ನಮ್ಮ ಕಣ್ಣು ಮುಂದಿದೆ. ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಸಂಸ್ಥೆ ಕಾಳಜಿ ಮಾಡುವ ಬಯಕೆಯಿಂದ ಮಕ್ಕಳಿಂದ ಕಿರುನಾಟಕ ಮಾಡಿಸಿದ್ದೇವೆ. ಇನ್ನಷ್ಟು ಶಿಕ್ಷಣ ಸಂಸ್ಥೆಗಳು ಮುಂದೆ ಬಂದು ಜಾಗೃತಿ ಮೂಡಿಸುವ ಮೂಲಕ ಮನೆಮನೆಯ ವ್ಯಸನ ಮತ್ತು ಚಿಂತೆಯ ಕಾಳಜಿ ವಿಚಾರವಾಗಿ ಹೋರಾಟ ಗೆದ್ದು ಭವಿಷ್ಯ ಉಳಿಸಿಕೊಳ್ಳೋಣ. ಎಂದರು.

ನಗರದ ಶ್ರೀ ಸಾಯಿ ಸಮರ್ಥ ಇಂಗ್ಲಿಷ್ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಕೆ.ಜಿ. ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಿದ ಅಲ್ಲಿನ ಮುಖ್ಯಸ್ಥರಾದ ಕವಿತಾ ಮಾಟೂರು ಅವರು ಮಾತನಾಡಿ, ನಮ್ಮ ಮಕ್ಕಳಿಗೆ ಮತ್ತು ಪಾಲಕರಿಗೆ ಕೊಪ್ಪಳದಲ್ಲಿ ನೆಲೆನಿಂತು ಆರೋಗ್ಯ ಕೆಡಿಸುವ ಧಾವಂತದಲ್ಲಿರುವ ಬಲ್ಡೋಟ ಕಾರ್ಖಾನೆಯ ಅಪಾಯ ಏನೆಂದು ತೋರಿಸಿ ಕೊಡುವ ವಸ್ತು ಪ್ರದರ್ಶನ ಮಾಡಿ ಪ್ರಜ್ಞೆ ಮೂಡಿಸುವ ಪ್ರಯತ್ನ ಮಾಡಿದ್ದೇವೆ ಎಂದರು. ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ, ನಮ್ಮ ನೆಲ, ಜಲ, ಗಾಳಿ ನಮ್ಮ ಹಕ್ಕು ಎಂದು ಪುಟ್ಟ ಎಲ್.ಕೆ.ಜಿ. ವಿದ್ಯಾರ್ಥಿನಿ ನೈತಿ ಪಾಠ ಮಾಡಿ ಪ್ರಾತ್ಯಕ್ಷಿಕೆ ತೋರಿಸಿದ್ದು ಅದ್ಭುತವಾಗಿತ್ತು.

ಬಿ.ಟಿ.ಪಾಟೀಲ ನಗರದ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಮಂಡಳಿಯ ಟ್ರಸ್ಟಿ ಸುರೇಶ ನಾಡಿಗೇರ ಮಾತನಾಡಿ, ನಮ್ಮ ಬಿ.ಟಿ. ಪಾಟೀಲ್ ನಗರ ಸಂಪೂರ್ಣ ದೂಳು ಬಾಧಿತವಾಗಿ ನಲುಗಿ ಹೋಗಿದೆ. ಅಲ್ಲೊಂದು ಇಲ್ಲೊಂದು ಬೆಂಚ್ ಹಾಕಿ, ಟ್ರೀ ಗಾರ್ಡ್ ಗಿಡವಿಲ್ಲದಿದ್ದರೂ ಇಟ್ಟು ಬಲ್ಡೋಟ ಅನುಕಂಪ ಪಡೆಯುವುದನ್ನು ನಂಬಲು ಯಾರೂ ದಡ್ಡರಲ್ಲ ಎಂದರು.

ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎ.ಎಂ.ಮದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಹಿಳಾ ಮುಖಂಡರಾದ ಕಾವ್ಯ ಗಡಾದ, ಪ್ರಕಾಶಕ ಡಿ.ಎಂ.ಬಡಿಗೇರ, ದೇವಸ್ಥಾನ ಮಂಡಳಿಯ ಪಂಪಾಪತಿ ಹೊನ್ನಳ್ಳಿ, ಮುದುಕಪ್ಪ ಕುರಿ, ವೀರಣ್ಣ ಹೂಗಾರ, ವಿಶ್ವನಾಥ ಸೊಪ್ಪಿಮಠ, ಗವಿಸಿದ್ದಪ್ಪ ಅಂಗಡಿ, ವಿ.ಎನ್.ಹಿರೇಮಠ, ಮಲ್ಲಿಕಾರ್ಜುನ ಕೋಣೆ, ಬಿ. ಹನುಮಂತಪ್ಪ, ಎಲ್.ಎಫ್. ಪಾಟೀಲ್, ಕರ್ಣ ಪೂಜಾರ, ರೇವತಿ ಹೂಗಾರ, ರಿಜಾ ಪಾತೀಮಾ ಖಾಜಿ, ನೇತ್ರಾವತಿ ಗಂಟಿ, ದೇವಯ್ಯ ಮಠಪತಿ, ಶಂಭುಲಿಂಗಪ್ಪ ಹರಗೇರಿ, ಮಂಗಳೇಶ ರಾಠೋಡ್, ಪಾತ್ರದಾರಿಗಳಾದ ಶುಭಂ, ಗಗನಸ್ವಾಮಿ, ವಿಶ್ವನಾಥ, ಆನಂದ, ಕರುಣಾ ಸಾಗರ, ಚೇತನ್, ಮನೋಜ್, ಅನುಷ್, ಸುಭಾನ್ ಸಾಬ್ ನೀರಲಗಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹನುಮಂತ ಜಂತ್ಲಿ, ಶರಣು ಗಡ್ಡಿ , ಶರಣು ಶೆಟ್ಟರ್ ಮಹಾಂತೇಶ ಕೊತಬಾಳ, ಬಿ.ಜಿ.ಕರಿಗಾರ, ಭಾಗ್ಯನಗರದ ಗ್ಯಾನೇಶ ಹ್ಯಾಟಿ, ಈಶಪ್ಪ ದೊಡ್ಡಮನಿ, ಮಹಾದೇವಪ್ಪ ಮಾವಿನಮಾಡು, ಬಸವರಾಜ ಪೂಜಾರ ಕಾಸನಕಂಡಿ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು ಇದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande