ನಿಷ್ಕ್ರೀಯಗೊಂಡ ಸಹಕಾರ ಸಂಘಗಳ ಸಮಾಪನೆ
ಚಿತ್ರದುರ್ಗ, 19 ಮಾರ್ಚ್ (ಹಿ.ಸ.): ಆ್ಯಂಕರ್: ಸಹಕಾರ ಸಂಘಗಳ ಕಾಯ್ದೆ, ನಿಯಮ ಮತ್ತು ಸಂಘಗಳ ಬೈಲಾ ಪ್ರಕಾರ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವ ಸಮಾಪನೆಗೊಳಿಸಲು ಕ್ರಮವಹಿಸಲಾಗಿದೆ. ಸದಸ್ಯರಿಂದ ಹಾಗೂ ಸಾರ್ವಜನಿಕರಿಂದ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಕೂಡಲೇ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಬಿ.
ನಿಷ್ಕ್ರೀಯಗೊಂಡ ಸಹಕಾರ ಸಂಘಗಳ ಸಮಾಪನೆ


ಚಿತ್ರದುರ್ಗ, 19 ಮಾರ್ಚ್ (ಹಿ.ಸ.):

ಆ್ಯಂಕರ್:

ಸಹಕಾರ ಸಂಘಗಳ ಕಾಯ್ದೆ, ನಿಯಮ ಮತ್ತು ಸಂಘಗಳ ಬೈಲಾ ಪ್ರಕಾರ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವ ಸಮಾಪನೆಗೊಳಿಸಲು ಕ್ರಮವಹಿಸಲಾಗಿದೆ. ಸದಸ್ಯರಿಂದ ಹಾಗೂ ಸಾರ್ವಜನಿಕರಿಂದ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಕೂಡಲೇ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಬಿ.ಎಲ್.ಗೌಡ ಲೇಔಟ್, ಚಿತ್ರದುರ್ಗ ಇವರಿಗೆ ಸಲ್ಲಿಸಲು ತಿಳಿಸಿದೆ.

ನಿಷ್ಕ್ರೀಯಗೊಂಡಿರುವ ಸಹಕಾರ ಸಂಘಗಳ ವಿವರ ಇಂತಿದೆ. ಚಿತ್ರದುರ್ಗ ತಾಲ್ಲೂಕಿನ ಹಾಯ್ಕಲ್, ಸಜ್ಜನಕೆರೆ, ಆಲಘಟ್ಟ ಅಂಚೆ ಚಿಕ್ಕೇನಹಳ್ಳಿ ಬೇವಿನಹಳ್ಳಿ ಕೋಳಿ ಸಾಕಾಣಿಕೆ ಮತ್ತು ಮಾರಾಟ ಸಹಕಾರ ಸಂಘ, ಭರಮಸಾಗರ ಹಿಂದುಳಿದ ಗಾಣಿದಾರರ ಕೋಳಿ ಸಾಕಾಣಿಕೆದಾರರ ಸಹಕಾರ ಸಂಘ, ಮಾಳಪ್ಪನಹಟ್ಟಿ ಉಣ್ಣೆ ಕೈಮಗ್ಗ ಮತ್ತು ಉತ್ಪಾದನಾ ಮಾರಾಟ ಸಹಕಾರ ಸಂಘ ಹಾಗೂ ಹಿರಿಯೂರು ತಾಲ್ಲೂಕು ಸೊಂಡೆಕರೆ ಕನಕಶ್ರೀ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸಮಾಪನೆಗೆ ಕ್ರಮವಹಿಸಲಾಗಿದೆ ಎಂದು ಚಿತ್ರದುರ್ಗ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande