ಆಲಿಕಲ್ಲು ಮಳೆಗೆ 25ಕ್ಕೂ ಹೆಚ್ಚು ಕುರಿ-ಆಡುಗಳ ಸಾವು-ಲಕ್ಷಾಂತರ ರೂ. ನಷ್ಟ
ಬಾಗಲಕೋಟೆ, 19 ಮಾರ್ಚ್ (ಹಿ.ಸ.) ಆ್ಯಂಕರ್ : ನಿರಂತರವಾಗಿ ಸುರಿಯುತ್ತಿರುವ ಆಲಿಕಲ್ಲು ಮಳೆಯ ಪರಿಣಾಮ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದಲ್ಲಿ 25ಕ್ಕೂ ಹೆಚ್ಚು ಕುರಿ-ಆಡುಗಳು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಯಂಡಗೇರಿ ಗ್ರಾಮದ ಕುರಿದಡ್ಡಿಯಲ್ಲಿದ್ದ ಹುಸೇನಸಾಬ ಬಾಂಗದ ಅವರಿಗ
ಕುರಿ ಸಾವು


ಬಾಗಲಕೋಟೆ, 19 ಮಾರ್ಚ್ (ಹಿ.ಸ.)

ಆ್ಯಂಕರ್ : ನಿರಂತರವಾಗಿ ಸುರಿಯುತ್ತಿರುವ ಆಲಿಕಲ್ಲು ಮಳೆಯ ಪರಿಣಾಮ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದಲ್ಲಿ 25ಕ್ಕೂ ಹೆಚ್ಚು ಕುರಿ-ಆಡುಗಳು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.

ಯಂಡಗೇರಿ ಗ್ರಾಮದ ಕುರಿದಡ್ಡಿಯಲ್ಲಿದ್ದ ಹುಸೇನಸಾಬ ಬಾಂಗದ ಅವರಿಗೆ ಸೇರಿದ ಕುರಿ-ಆಡುಗಳು ಅಕಾಲಿಕ ಆಲಿಕಲ್ಲು ಮಳೆಗೆ ಸಿಲುಕಿ ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಏಕಾಏಕಿ ಸುರಿದ ಮಳೆ ಮತ್ತು ಭಾರೀ ಆಲಿಕಲ್ಲಿನ ಪರಿಣಾಮ ಪಶು ಸಂಪತ್ತಿಗೆ ದೊಡ್ಡ ಹಾನಿಯಾಗಿದೆ.

ಈ ಘಟನೆದಿಂದ ಕುರಿಗಾಯಿಯಾದ ಹುಸೇನಸಾಬ ಬಾಂಗದ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಕುಟುಂಬವು ಸಂಕಷ್ಟಕ್ಕೆ ಸಿಲುಕಿದೆ. ಪಶುಸಂಗೋಪನೆ ಮೇಲೆ ಅವಲಂಬಿತವಾಗಿದ್ದ ಕುಟುಂಬಕ್ಕೆ ಇದು ಭಾರೀ ಹೊಡೆತವಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಬೇಕು. ಲಕ್ಷಾಂತರ ಮೌಲ್ಯದ ಕುರಿ-ಆಡುಗಳ ಸಾವಿನಿಂದ ಕುರಿಗಾಯಿ ಹುಸೇನ್ ನಷ್ಟವಾಗಿದ್ದು ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಕುರಿಗಾಯಿ ಹುಸೇನ್ ಕುಟುಂಬ ಆಗ್ರಹಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande