ಅಕಾಲಿಕ ಆಲಿಕಲ್ಲು ಮಳೆ-ಅಪಾರ ಬೆಳೆ ಹಾನಿ ದಾಳಿಂಬೆ, ಪಪ್ಪಾಯಿ, ಗೋಧಿ ಬೆಳೆ ನಾಶ; ಪರಿಹಾರಕ್ಕೆ ರೈತರ ಆಗ್ರಹ
ಬಾಗಲಕೋಟೆ, 19 ಮಾರ್ಚ್ (ಹಿ.ಸ.) ಆ್ಯಂಕರ್ : ನಿರಂತರವಾಗಿ ಆಲಿಕಲ್ಲು ಸಮೇತ ಸುರಿಯುತ್ತಿರುವ ರಾತ್ರಿ ಗಾಳಿ ಹಾಗೂ ಮಳೆಯಿಂದ ಬಾಗಲಕೋಟೆ ಜಿಲ್ಲೆಯ ಕಲಾದಗಿ ಭಾಗದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲಾದಗಿ, ಚಿಕ್ಕಶೆಲ್ಲಿಕೇರಿ, ಹಿರೇಶೆಲ್ಲಿಕೇರಿ ಹಾ
ಕ್ಅಪ್ಲಾಸ್


ಕ್ರಾಪಲಾಸ್


ಬಾಗಲಕೋಟೆ, 19 ಮಾರ್ಚ್ (ಹಿ.ಸ.)

ಆ್ಯಂಕರ್ : ನಿರಂತರವಾಗಿ ಆಲಿಕಲ್ಲು ಸಮೇತ ಸುರಿಯುತ್ತಿರುವ ರಾತ್ರಿ ಗಾಳಿ ಹಾಗೂ ಮಳೆಯಿಂದ ಬಾಗಲಕೋಟೆ ಜಿಲ್ಲೆಯ ಕಲಾದಗಿ ಭಾಗದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಲಾದಗಿ, ಚಿಕ್ಕಶೆಲ್ಲಿಕೇರಿ, ಹಿರೇಶೆಲ್ಲಿಕೇರಿ ಹಾಗೂ ಕಳಸಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಸುರಿದ ಪರಿಣಾಮ ದಾಳಿಂಬೆ, ಪಪ್ಪಾಯಿ ಮತ್ತು ಗೋಧಿ ಬೆಳೆಗಳು ಹಾನಿಗೊಳಗಾಗಿವೆ. ಕೆಲವೆಡೆ ಹೊಲಗಳಲ್ಲಿ ದೊಡ್ಡ ಪ್ರಮಾಣದ ಆಲಿಕಲ್ಲುಗಳು ಬಿದ್ದಿರುವ ದೃಶ್ಯ ಕಂಡುಬಂದಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ಬೆಳೆ ಕೊಯ್ಲಿನ ಹಂತದಲ್ಲಿದ್ದ ಅನೇಕ ತೋಟಗಳು ಮತ್ತು ಬೆಳೆಗಳು ಹಾನಿಗೊಳಗಾದ ಪರಿಣಾಮ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಕುರಿತು ವರದ ಆಗಿವೆ. ಈಗಾಗಲೇ ಹವಾಮಾನ ವೈಪರೀತ್ಯದಿಂದ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ಈ ಅಕಾಲಿಕ ಮಳೆ ಮತ್ತೊಂದು ದೊಡ್ಡ ಹೊಡೆತ ನೀಡಿದೆ.

ಹಾನಿಗೊಳಗಾದ ಪ್ರದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು. ಸರ್ಕಾರವು ನಷ್ಟದ ಅಂದಾಜು ಮಾಡಿ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಹಿಂದುಸ್ತಾನ್ ಸಮಾಚಾರ ಸುದ್ದಿ ಸಂಸ್ಥೆ ಎದುರು ಗೋಳನ್ನು ತೋಡಿಕೊಂಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande