ಬೇಸಿಗೆ ಮಕ್ಕಳ ಚಿತ್ರಕಲಾ ಶಿಬಿರ
ಧಾರವಾಡ, 19 ಮಾರ್ಚ್ (ಹಿ.ಸ.): ಆ್ಯಂಕರ್: ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ಏಪ್ರಿಲ್ 06 ರಿಂದ ಮೇ 06 2026 ರವರೆಗೆ ಬೇಸಿಗೆ ಮಕ್ಕಳ ಚಿತ್ರಕಲಾ ಶಿಬಿರ-2026 ವನ್ನು ಪ್ರಾರಂಭಿಸಲಾಗುತ್ತಿದೆ. 07 ವರ್ಷದಿಂದ 10 ವರ್ಷ ವಯೋಮಾನದ ಹಾಗೂ 11 ವರ್ಷ
ಬೇಸಿಗೆ ಮಕ್ಕಳ ಚಿತ್ರಕಲಾ ಶಿಬಿರ


ಧಾರವಾಡ, 19 ಮಾರ್ಚ್ (ಹಿ.ಸ.):

ಆ್ಯಂಕರ್:

ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ಏಪ್ರಿಲ್ 06 ರಿಂದ ಮೇ 06 2026 ರವರೆಗೆ ಬೇಸಿಗೆ ಮಕ್ಕಳ ಚಿತ್ರಕಲಾ ಶಿಬಿರ-2026 ವನ್ನು ಪ್ರಾರಂಭಿಸಲಾಗುತ್ತಿದೆ. 07 ವರ್ಷದಿಂದ 10 ವರ್ಷ ವಯೋಮಾನದ ಹಾಗೂ 11 ವರ್ಷದಿಂದ 15 ವರ್ಷ ವಯೋಮಾನದ ಆಸಕ್ತ ವಿದ್ಯಾರ್ಥಿಗಳು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಾಲೇಜು ರಸ್ತೆ, ಧಾರವಾಡ-580001 ಈ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಚೇರಿಗೆ ಅಥವಾ ದೂರವಾಣಿ ಸಂಖ್ಯೆ:0836-2442909, 9742982065 ಗೆ ಸಂರ್ಪಕಿಸಬಹುದಾಗಿದೆ.

ಅರ್ಜಿ ನಮೂನೆಯನ್ನು ಕಚೇರಿಯ ವೇಳೆಯಲ್ಲಿ ಪಡೆಯಬಹುದು. ಸದರಿ ಶಿಬಿರವನ್ನು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗುತ್ತಿದೆ. ಚಿತ್ರಕಲೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಬೇಸಿಗೆ ಮಕ್ಕಳ ಚಿತ್ರಕಲಾ ಶಿಬಿರ-2026 ರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್‍ನ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande