ಶಿಕ್ಷಕರು ದೇಶ ಕಟ್ಟುವ ಶಿಲ್ಪಿಗಳು:ಎಸ್ಪಿ ಲಕ್ಷ್ಮಣ ನಿಂಬರಗಿ
ವಿಜಯಪುರ, 19 ಮಾರ್ಚ್ (ಹಿ.ಸ.) ಆ್ಯಂಕರ್ : ದೇಶ ಕಾಯುವ ಸೈನಿಕರಿಗೆ ಜೈ ಜವಾನ್, ಅನ್ನ ನೀಡುವ ರೈತರಿಗೆ ಜೈ ಕಿಸಾನ್ ಎನ್ನುವಂತೆ, ದೇಶ ಕಟ್ಟುವ ಶಿಕ್ಷಕರಿಗೆ ಜೈ ಶಿಕ್ಷಕ ಎನ್ನಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು. ವಿಜಯಪುರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯ
ಶಿಕ್ಷಣದ


ವಿಜಯಪುರ, 19 ಮಾರ್ಚ್ (ಹಿ.ಸ.)

ಆ್ಯಂಕರ್ : ದೇಶ ಕಾಯುವ ಸೈನಿಕರಿಗೆ ಜೈ ಜವಾನ್, ಅನ್ನ ನೀಡುವ ರೈತರಿಗೆ ಜೈ ಕಿಸಾನ್ ಎನ್ನುವಂತೆ, ದೇಶ ಕಟ್ಟುವ ಶಿಕ್ಷಕರಿಗೆ ಜೈ ಶಿಕ್ಷಕ ಎನ್ನಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ವಿಜಯಪುರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪಾಲಕರನ್ನು ಹೊರತುಪಡಿಸಿದರೆ ಮಕ್ಕಳು ಶಿಕ್ಷಕರ ಸಾನ್ನಿಧ್ಯದಲ್ಲೇ ಹೆಚ್ಚು ಬೆಳೆಯುತ್ತಾರೆ. ಹೀಗಾಗಿ ಭವಿಷ್ಯದ ಶಿಕ್ಷಕರಾಗಿ ಹೊರಹೊಮ್ಮುವ ಬಿ.ಎಡ್. ವಿದ್ಯಾರ್ಥಿಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ನಿರಂತರ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.

ರಾಜ್ಯದಲ್ಲಿ ಶಿಕ್ಷಣಕ್ಕೆ ಉನ್ನತ ಸ್ಥಾನ ದೊರಕುವಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯ ಕೊಡುಗೆಯೂ ಗಮನಾರ್ಹವಾಗಿದೆ ಎಂದು ಹೇಳಿದರು.

ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಎಸ್. ಆವರಣದ ಆಡಳಿತಾಧಿಕಾರಿ ಐ.ಎಸ್. ಕಾಳಪ್ಪನವರ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಈ ವೃತ್ತಿಯನ್ನು ಬಯಸಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಶಿಸ್ತು, ಆರೋಗ್ಯ, ಪ್ರಯತ್ನ ಮತ್ತು ಕರ್ತವ್ಯನಿಷ್ಠೆ ಬೆಳೆಸಿಕೊಂಡು ಆದರ್ಶ ಶಿಕ್ಷಕರಾಗಬೇಕು ಎಂದು ತಿಳಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ವಿ.ಎಸ್. ಬಗಲಿ ಮಾತನಾಡಿ, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯವು ಗುಣಮಟ್ಟದ ಶಿಕ್ಷಕರನ್ನು ರೂಪಿಸುವ ಶ್ರೇಷ್ಠ ಶಿಕ್ಷಣ ಕೇಂದ್ರವಾಗಿದೆ. ಇಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಕೌಶಲ್ಯಭರಿತ ಶಿಕ್ಷಕರಾಗಿ ಹೊರಹೊಮ್ಮಬೇಕು ಎಂದು ಆಶಿಸಿದರು.

ಕಾಲೇಜಿನ ಪ್ರಾಚಾರ್ಯೆ ಡಾ. ಭಾರತಿ ವೈ. ಖಾಸನೀಸ ಅವರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿದರು.

ಈ ಸಂದರ್ಭದಲ್ಲಿ ಸಹಪ್ರಾಧ್ಯಾಪಕ ಡಾ. ಎಂ.ಎಸ್. ಹಿರೇಮಠ, ಡಾ. ಜ್ಯೋತಿ ಪಟ್ಟಣಶೆಟ್ಟಿ, ಡಾ. ಬಿ.ಎಸ್. ಹಿರೇಮಠ, ಎಸ್.ಎಸ್. ಪಾಟೀಲ, ಡಾ. ಎಸ್.ಪಿ. ಶೇಗುಣಸಿ, ಎಂ.ಪಿ. ಕುಪ್ಪಿ, ಸುರೇಶ ಬಗಲಿ, ಸುಜಾತಾ ದೇಸಾಯಿ, ಎ.ಎಸ್. ಬರಡ್ಡಿ, ವಿದ್ಯಾ ಭಮಗೊಂಡ ಸೇರಿದಂತೆ ಶಿಕ್ಷಕ ವೃಂದ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande