‘ಶ್ರೀರಾಮ ಯಂತ್ರ’ ಸ್ಥಾಪನೆ: ಹೊಸ ಇತಿಹಾಸಕ್ಕೆ ಸಾಕ್ಷಿಯಾದ ಅಯೋಧ್ಯೆ
ಅಯೋಧ್ಯೆ, 19 ಮಾರ್ಚ್ (ಹಿ.ಸ.): ಆ್ಯಂಕರ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚೈತ್ರ ನವರಾತ್ರಿಯ ಪ್ರಥಮ ದಿನ ಹಾಗೂ ವಿಕ್ರಮ ಸಂವತ್ಸರ 2083ರ ಶುಭಾರಂಭದ ಸಂದರ್ಭದಲ್ಲಿ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ‘ಶ್ರೀರಾಮ ಯಂತ್ರ’ವನ್ನು ಪ್ರತಿಷ್ಠಾಪಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
President


ಅಯೋಧ್ಯೆ, 19 ಮಾರ್ಚ್ (ಹಿ.ಸ.):

ಆ್ಯಂಕರ್:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚೈತ್ರ ನವರಾತ್ರಿಯ ಪ್ರಥಮ ದಿನ ಹಾಗೂ ವಿಕ್ರಮ ಸಂವತ್ಸರ 2083ರ ಶುಭಾರಂಭದ ಸಂದರ್ಭದಲ್ಲಿ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ‘ಶ್ರೀರಾಮ ಯಂತ್ರ’ವನ್ನು ಪ್ರತಿಷ್ಠಾಪಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಮಂದಿರದ ದ್ವಿತೀಯ ಮಹಡಿಯ ಗರ್ಭಗುಡಿಯಲ್ಲಿ ಅಭಿಜಿತ್ ಮುಹೂರ್ತದಲ್ಲಿ ವೇದ ಪಂಡಿತರ ಮಂತ್ರೋಚ್ಚಾರಗಳ ನಡುವೆ ವಿಧಿ ವಿಧಾನಗಳೊಂದಿಗೆ ಯಂತ್ರವನ್ನು ಪ್ರತಿಷ್ಠಾಪಿಸಲಾಯಿತು. ಇದಕ್ಕೂ ಮೊದಲು ರಾಷ್ಟ್ರಪತಿಗಳು ಶ್ರೀರಾಮಲಲಾ ದರ್ಶನ ಪಡೆದು ಪೂಜೆ ಹಾಗೂ ಆರತಿ ನೆರವೇರಿಸಿದರು.

‘ಶ್ರೀರಾಮ ಯಂತ್ರ’ ಪ್ರತಿಷ್ಠಾಪನೆಯೊಂದಿಗೆ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ಮತ್ತೊಂದು ಐತಿಹಾಸಿಕ ಘಟ್ಟವನ್ನು ತಲುಪಿದಂತೆ ಪರಿಣಮಿಸಿದೆ. ಈ ಸಂದರ್ಭ ಮಂದಿರ ಪ್ರದೇಶದಲ್ಲಿ ‘ಜೈ ಶ್ರೀರಾಮ’ ಘೋಷಣೆಗಳು ಮೊಳಗಿದವು.

ಕಾರ್ಯಕ್ರಮದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹಾಸಚಿವ ಚಂಪತ್ ರೈ, ಕೇರಳದ ಆಧ್ಯಾತ್ಮಿಕ ನಾಯಕಿ ಮಾತಾ ಅಮೃತಾನಂದಮಯಿ, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ದೇಶ-ವಿದೇಶಗಳಿಂದ ಬಂದ 7,000ಕ್ಕೂ ಹೆಚ್ಚು ಗಣ್ಯರು ಹಾಗೂ ಸಂತರು ಭಾಗವಹಿಸಿದ್ದರು.

ಉಲ್ಲೇಖನೀಯವಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉತ್ತರ ಪ್ರದೇಶದ ಮೂರು ದಿನಗಳ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಅವರು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಸ್ವಾಗತಿಸಿದರು. ನಂತರ ಅವರು ಮಥುರಾಕ್ಕೆ ತೆರಳಿ ವೃಂದಾವನದ ಬಾಂಕೆ ಬಿಹಾರಿ ಮಂದಿರದಲ್ಲಿ ದರ್ಶನ ಪಡೆಯಲಿದ್ದಾರೆ. ಮಾರ್ಚ್ 20ರಂದು ಸಂತ ಪ್ರೇಮಾನಂದ ಮಹಾರಾಜರನ್ನು ಭೇಟಿಯಾಗುವ ಜೊತೆಗೆ ಇತರೆ ಆಧ್ಯಾತ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡಲಿದ್ದಾರೆ.

ರಾಷ್ಟ್ರಪತಿಯವರ ಪ್ರವಾಸದ ಹಿನ್ನೆಲೆ ಅಯೋಧ್ಯೆಯಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande