ಸರಕೆ ಚುನರ್’ ಹಾಡು ವಿವಾದ: ಎನ್ಸಿಡಬ್ಲ್ಯು ಸಮನ್ಸ್ ಜಾರಿ
ನವದೆಹಲಿ, 19 ಮಾರ್ಚ್ (ಹಿ.ಸ.): ಆ್ಯಂಕರ್: ಸರಕೆ ಚುನರ್’ ಹಾಡಿನ ವಿಷಯವಾಗಿ ಉಂಟಾದ ವಿವಾದಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ನಟಿ ನೋರಾ ಫತೇಹಿ ಹಾಗೂ ನಟ ಸಂಜಯ್ ದತ್ ಸೇರಿದಂತೆ ಐವರಿಗೆ ಸಮನ್ಸ್ ಜಾರಿಗೊಳಿಸಿದೆ. ಆಯೋಗವು 1990ರ ಅಧಿನಿಯಮದಡಿ ನೀಡಿರುವ ಅಧಿಕಾರವನ್ನು ಬಳಸಿಕ
Ncw President


ನವದೆಹಲಿ, 19 ಮಾರ್ಚ್ (ಹಿ.ಸ.):

ಆ್ಯಂಕರ್:

ಸರಕೆ ಚುನರ್’ ಹಾಡಿನ ವಿಷಯವಾಗಿ ಉಂಟಾದ ವಿವಾದಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ನಟಿ ನೋರಾ ಫತೇಹಿ ಹಾಗೂ ನಟ ಸಂಜಯ್ ದತ್ ಸೇರಿದಂತೆ ಐವರಿಗೆ ಸಮನ್ಸ್ ಜಾರಿಗೊಳಿಸಿದೆ.

ಆಯೋಗವು 1990ರ ಅಧಿನಿಯಮದಡಿ ನೀಡಿರುವ ಅಧಿಕಾರವನ್ನು ಬಳಸಿಕೊಂಡು ಮಾಧ್ಯಮ ವರದಿಗಳ ಆಧಾರದಲ್ಲಿ ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ‘ಸರಕೆ ಚುನರ್’ ಹಾಡಿನಲ್ಲಿ ಅಶ್ಲೀಲತೆ ಹಾಗೂ ಅಭದ್ರ ಅಂಶಗಳಿವೆ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಲಾಗಿದೆ.

ಆಯೋಗದ ಪ್ರಕಟಣೆಯ ಪ್ರಕಾರ, ಹಾಡಿನ ವಿಷಯವು ಪ್ರಾಥಮಿಕ ದೃಷ್ಟಿಯಿಂದ ಲೈಂಗಿಕ ಸೂಚಕ, ಆಕ್ಷೇಪಾರ್ಹವಾಗಿದ್ದು, ಭಾರತೀಯ ನ್ಯಾಯ ಸಂಹಿತೆ, ಐಟಿ ಕಾಯ್ದೆ ಮತ್ತು ಪೊಕ್ಸೊ ಕಾಯ್ದೆಯ ಕೆಲವು ನಿಯಮಗಳ ಉಲ್ಲಂಘನೆಗೊಳಗಾಗಿರುವಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಈ ಸಂಬಂಧವಾಗಿ ಗೀತರಚನೆಗಾರ ರಕೀಬ್ ಆಲಂ, ನಿರ್ಮಾಪಕ ವೆಂಕಟ್ ಕೆ. ನಾರಾಯಣ ಹಾಗೂ ನಿರ್ದೇಶಕ ಕಿರಣ್ ಕುಮಾರ್ ಅವರಿಗೆ ಸಹ ಸಮನ್ಸ್ ಜಾರಿಗೊಳಿಸಲಾಗಿದೆ. ಎಲ್ಲರೂ ಮಾರ್ಚ್ 24ರಂದು ಮಧ್ಯಾಹ್ನ 12:30ಕ್ಕೆ ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ನಿಗದಿತ ದಿನಾಂಕದಲ್ಲಿ ಹಾಜರಾಗದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಎಚ್ಚರಿಕೆ ನೀಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande