
ನವದೆಹಲಿ, 19 ಮಾರ್ಚ್ (ಹಿ.ಸ.):
ಆ್ಯಂಕರ್:ಉನ್ನತ ಶಿಕ್ಷಣ ನಿಯಂತ್ರಣ ವ್ಯವಸ್ಥೆಯಲ್ಲಿ ಪ್ರಸ್ತಾಪಿತ ಬದಲಾವಣೆಗಳ ಕುರಿತು ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ತರಲಿರುವ ‘ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ವಿಧೇಯಕ-2025’ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಹಾಗೂ ಸಂಸದ ಜೈರಾಮ್ ರಮೇಶ್ ಅವರು ಪಕ್ಷದ ಅಧಿಕೃತ ಹೇಳಿಕೆಯಲ್ಲಿ ಈ ವಿಧೇಯಕದ ಇಂದಿನ ರೂಪುರೇಷೆಗಳ ವಿರುದ್ಧ ಏಳು ಪ್ರಮುಖ ಆಕ್ಷೇಪಗಳನ್ನು ದಾಖಲಿಸಿದ್ದಾರೆ.
ಸಂಸತ್ತಿನ ಸ್ಥಾಯಿ ಸಮಿತಿಯ ವರದಿಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಮುಂತಾದ ಪ್ರಮುಖ ಸಂಸ್ಥೆಗಳಲ್ಲಿ ಬಹಳಷ್ಟು ಹುದ್ದೆಗಳು ಖಾಲಿ ಇರುವುದನ್ನು ಉಲ್ಲೇಖಿಸಿರುವ ಸಂದರ್ಭದಲ್ಲೇ ಈ ವಿಧೇಯಕವನ್ನು ತರಲಾಗಿದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಇದ್ದರೂ, ವಿಧೇಯಕ ರಚನೆ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಇದರಿಂದ ಸಂಘೀಯ ವ್ಯವಸ್ಥೆಗೆ ಧಕ್ಕೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ವಿಧೇಯಕದಲ್ಲಿ ಅನುದಾನ ನೀಡುವ ಪ್ರತ್ಯೇಕ ಮಂಡಳಿ ಬಗ್ಗೆ ಪ್ರಾವಧಾನವಿಲ್ಲದೆ, ಆ ಅಧಿಕಾರವನ್ನು ನೇರವಾಗಿ ಕೇಂದ್ರ ಸಚಿವಾಲಯದ ಕೈಗೆ ಒಪ್ಪಿಸುವಂತಾಗಿದೆ. ಇದರಿಂದ ಉನ್ನತ ಶಿಕ್ಷಣದ ಕೇಂದ್ರೀಕರಣ ಹೆಚ್ಚಾಗಿ, ಶೈಕ್ಷಣಿಕ ಸ್ವಾಯತ್ತತೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದಲ್ಲದೆ, ಹೊಸ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ಸೇರಿದಂತೆ ಪ್ರಮುಖ ಶಿಕ್ಷಣ ಸಂಸ್ಥೆಗಳ ಆಡಳಿತವು ಶಿಕ್ಷಣ ತಜ್ಞರ ಬದಲಿಗೆ ಆಡಳಿತಾಧಿಕಾರಿಗಳ ಕೈಗೆ ಹೋಗುವ ಸಾಧ್ಯತೆ ಇದೆ. ಇದರಿಂದ ಶಿಕ್ಷಣದ ಕಾರ್ಯಪದ್ಧತಿ ಅಕಾಡೆಮಿಕ್ ದೃಷ್ಟಿಕೋಣದಿಂದ ದೂರವಾಗಿ ಆಡಳಿತಾತ್ಮಕ ದೃಷ್ಟಿಕೋಣಕ್ಕೆ ಸೀಮಿತವಾಗಬಹುದು ಎಂದು ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಭಾರತೀಯ ತಾಂತ್ರಿಕ ಸಂಸ್ಥೆಗಳು , ಭಾರತೀಯ ನಿರ್ವಹಣಾ ಸಂಸ್ಥೆಗಳು, ರಾಷ್ಟ್ರೀಯ ತಾಂತ್ರಿಕ ಸಂಸ್ಥೆಗಳು , ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಹಾಗೂ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು ಮುಂತಾದ ರಾಷ್ಟ್ರೀಯ ಮಹತ್ವದ ಸಂಸ್ಥೆಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ಇವುಗಳ ಶೈಕ್ಷಣಿಕ ಮತ್ತು ಸಂಸ್ಥಾಗತ ಸ್ವಾಯತ್ತತೆ ಕುಂಠಿತವಾಗುವ ಭೀತಿ ವ್ಯಕ್ತವಾಗಿದೆ.
ವಿಧೇಯಕವು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಉದ್ದೇಶಗಳಿಗೆ ವಿರುದ್ಧವಾಗಿದ್ದು, ವಿಶ್ವವಿದ್ಯಾಲಯಗಳೊಂದಿಗೆ ಸಂವಾದದ ಅವಶ್ಯಕತೆಯನ್ನು ದುರ್ಬಲಗೊಳಿಸಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಎನ್ಈಪಿ 2020 ಉದ್ದೇಶಿಸಿದಂತೆ ಸ್ವಾಯತ್ತತೆ ಹೆಚ್ಚಿಸುವ ಬದಲು, ನಿಯಂತ್ರಣವನ್ನು ಇನ್ನಷ್ಟು ಕಠಿಣಗೊಳಿಸುವ ಪ್ರಯತ್ನವಾಗಿದೆ ಎಂದು ಪಕ್ಷ ಆರೋಪಿಸಿದೆ
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa