ಚಿಣ್ಣರಮೇಳ ಮಕ್ಕಳ ರಂಗ ತರಬೇತಿ ಶಿಬಿರಕ್ಕಾಗಿ ಅರ್ಜಿ ಆಹ್ವಾನ
ಧಾರವಾಡ, 19 ಮಾರ್ಚ್ (ಹಿ.ಸ.): ಆ್ಯಂಕರ್: ಧಾರವಾಡ ರಂಗಾಯಣವು ಚಿಣ್ಣರಮೇಳ-2026 ಅಭಿನಯ-ಅಭಿವ್ಯಕ್ತಿ ಮಕ್ಕಳ ರಂಗ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ. ಮಗುವಿನ ಭಾವನಾತ್ಮಕ ಬೆಳವಣಿಗೆಗಳಿಗೆ ಪೂರಕವಾಗುವ ರಂಗಾಟಗಳು, ಹಾಡು, ಕಥೆ, ಜಾನಪದ ಆಟಗಳು, ಸಿನಿಮಾ ವೀಕ್ಷಣೆ, ಅಲ್ಲಿಕೇರಿ, ಸಂತೆ, ಆಹಾರ ಮೇಳಗ
ಚಿಣ್ಣರಮೇಳ ಮಕ್ಕಳ ರಂಗ ತರಬೇತಿ ಶಿಬಿರಕ್ಕಾಗಿ ಅರ್ಜಿ ಆಹ್ವಾನ


ಧಾರವಾಡ, 19 ಮಾರ್ಚ್ (ಹಿ.ಸ.):

ಆ್ಯಂಕರ್:

ಧಾರವಾಡ ರಂಗಾಯಣವು ಚಿಣ್ಣರಮೇಳ-2026 ಅಭಿನಯ-ಅಭಿವ್ಯಕ್ತಿ ಮಕ್ಕಳ ರಂಗ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ. ಮಗುವಿನ ಭಾವನಾತ್ಮಕ ಬೆಳವಣಿಗೆಗಳಿಗೆ ಪೂರಕವಾಗುವ ರಂಗಾಟಗಳು, ಹಾಡು, ಕಥೆ, ಜಾನಪದ ಆಟಗಳು, ಸಿನಿಮಾ ವೀಕ್ಷಣೆ, ಅಲ್ಲಿಕೇರಿ, ಸಂತೆ, ಆಹಾರ ಮೇಳಗಳೊಂದಿಗೆ ಅಭಿನಯ-ಅಭಿವ್ಯಕ್ತಿಗೆ ಒತ್ತು ಕೊಟ್ಟು ನಾಟಕ ಕಲೆಯನ್ನು ಮಕ್ಕಳಿಗೆ ಪರಿಚಯಿಸುವುದು ಈ ಬಾರಿಯ ಮಕ್ಕಳ ರಂಗ ತರಬೇತಿ ಶಿಬಿರದ ಉದ್ದೇಶವಾಗಿದೆ. ಶಿಬಿರವು ಏಪ್ರೀಲ್ 12, 2026 ರಿಂದ ಮೇ 03,2026 ರವರೆಗೆ ನಡೆಯಲಿದ್ದು, ಹಲವಾರು ಕಲಾ ಪ್ರದರ್ಶನಗಳನ್ನು ಪರಿಚಯಿಸುವುದರೊಂದಿಗೆ ಶಿಬಿರದ ಕೊನೆಯಲ್ಲಿ ಮಕ್ಕಳಿಂದ ಸಿದ್ಧವಾದ ನಾಟಕಗಳನ್ನು ಪ್ರದರ್ಶಿಸಲಾಗುವುದು.

ಶಿಬಿರದಲ್ಲಿ ಪ್ರವೇಶ ಪಡೆಯುವ ಮಕ್ಕಳ 2 ಭಾವಚಿತ್ರ ಹಾಗೂ ವಯಸ್ಸಿನ ದಾಖಲಾತಿ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ರೂ.20 ಹಾಗೂ ಪ್ರವೇಶ ಶುಲ್ಕ ರೂ. 2,000 ಯನ್ನು ನಿಗದಿಪಡಿಸಲಾಗಿದೆ. ಏಪ್ರೀಲ್ 01, 2026 ಕ್ಕೆ 8 ವರ್ಷ ಪೂರ್ಣ ತುಂಬಿರುವ 15 ವರ್ಷದ ಒಳಗಿರುವ ಮಕ್ಕಳು ಮಾತ್ರ ಈ ಶಿಬಿರದಲ್ಲಿ ಭಾಗವಹಿಸಬಹುದು. ಕೇವಲ 100 ಮಕ್ಕಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ.

ಆಸಕ್ತರು ಅರ್ಜಿ ನಮೂನೆಯನ್ನು ರಂಗಾಯಣ ಕಚೇರಿಯಲ್ಲಿ ಪಡೆದು, ಏಪ್ರೀಲ್ 9, 2026 ರೊಳಗಾಗಿ ಪ್ರವೇಶ ಶುಲ್ಕದೊಂದಿಗೆ ಪಾಲಕರು ಖುದ್ದಾಗಿ ತಮ್ಮ ಮಗುವಿನೊಂದಿಗೆ ಬಂದು ಪ್ರವೇಶ ನೋಂದಾಯಿಸಬೇಕು.

ಹೆಚ್ಚಿನ ಮಾಹಿತಿಗಾಗಿ ರಂಗಾಯಣ, ಸುವರ್ಣ ಸಾಂಸ್ಕøತಿಕ ಸಮುಚ್ಛಯ ಸಭಾಭವನ ಧಾರವಾಡ ಇಲ್ಲಿಗೆ ಸಂಪರ್ಕಿಸಲು ಹಾಗೂ ಕಚೇರಿ ದೂರವಾಣಿ ಸಂಖ್ಯೆ-0836-2441706 ಗೆ ಸಂಪರ್ಕಿಸಬಹುದು ಎಂದು ರಂಗಾಯಣದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande