ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಏರಿಕೆ
ನವದೆಹಲಿ, 18 ಮಾರ್ಚ್ (ಹಿ.ಸ.): ಆ್ಯಂಕರ್: ದೇಶೀಯ ಷೇರು ಮಾರುಕಟ್ಟೆ ಇಂದು ಆರಂಭಿಕ ವಹಿವಾಟಿನಲ್ಲಿ ಏರಿಳಿತಗಳ ನಡುವೆಯೂ ಬಲಿಷ್ಠ ಪ್ರವೃತ್ತಿಯನ್ನು ಕಾಯ್ದುಕೊಂಡಿದೆ. ವಹಿವಾಟು ಪ್ರಾರಂಭವಾಗುತ್ತಿದ್ದಂತೆಯೇ ಖರೀದಿ ಮತ್ತು ಮಾರಾಟದ ಒತ್ತಡಗಳ ನಡುವೆ ಸೂಚ್ಯಂಕಗಳು ಏರಿಳಿತ ಕಂಡರು ಮಾರುಕಟ್ಟೆ ಬಲಿಷ್ಠವಾಗಿ
Exp


ನವದೆಹಲಿ, 18 ಮಾರ್ಚ್ (ಹಿ.ಸ.):

ಆ್ಯಂಕರ್:

ದೇಶೀಯ ಷೇರು ಮಾರುಕಟ್ಟೆ ಇಂದು ಆರಂಭಿಕ ವಹಿವಾಟಿನಲ್ಲಿ ಏರಿಳಿತಗಳ ನಡುವೆಯೂ ಬಲಿಷ್ಠ ಪ್ರವೃತ್ತಿಯನ್ನು ಕಾಯ್ದುಕೊಂಡಿದೆ. ವಹಿವಾಟು ಪ್ರಾರಂಭವಾಗುತ್ತಿದ್ದಂತೆಯೇ ಖರೀದಿ ಮತ್ತು ಮಾರಾಟದ ಒತ್ತಡಗಳ ನಡುವೆ ಸೂಚ್ಯಂಕಗಳು ಏರಿಳಿತ ಕಂಡರು ಮಾರುಕಟ್ಟೆ ಬಲಿಷ್ಠವಾಗಿಯೇ ಉಳಿದಿದೆ.

ಬೆಳಿಗ್ಗೆ 10 ಗಂಟೆಯ ವೇಳೆಗೆ, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಶೇ. 0.47ರಷ್ಟು ಏರಿಕೆಯನ್ನು ದಾಖಲಿಸಿ ವಹಿವಾಟು ನಡೆಸುತ್ತಿವೆ.

ಮುಖ್ಯ ಷೇರುಗಳಲ್ಲಿ ಐಟಿ ಕ್ಷೇತ್ರದ ಟಿಸಿಎಸ್, ಜಿಯೋ ಫೈನಾನ್ಷಿಯಲ್, ಟೆಕ್ ಮಹೀಂದ್ರಾ, ವಿಪ್ರೋ ಹಾಗೂ ಇನ್ಫೋಸಿಸ್ ಶೇ. 2.95ರಿಂದ 2.38ರಷ್ಟು ಲಾಭ ಗಳಿಸಿ ಮುನ್ನಡೆ ಸಾಧಿಸಿವೆ. ಇದಕ್ಕೆ ಜೊತೆಗೆ ಕೋಲ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಟಾಟಾ ಸ್ಟೀಲ್ ಕೂಡ ಶೇ. 1.17ರಿಂದ 0.29ರಷ್ಟು ಏರಿಕೆ ಕಂಡಿವೆ.

ಮಾರುಕಟ್ಟೆಯ ವ್ಯಾಪ್ತಿಯನ್ನು ನೋಡಿದರೆ, ಒಟ್ಟು 2,708 ಷೇರುಗಳಲ್ಲಿ ವಹಿವಾಟು ನಡೆಯುತ್ತಿದ್ದು, ಅದರಲ್ಲಿ 2,331 ಷೇರುಗಳು ಲಾಭದೊಂದಿಗೆ ಹಸಿರು ವಲಯದಲ್ಲಿದ್ದರೆ, 377 ಷೇರುಗಳು ನಷ್ಟದೊಂದಿಗೆ ಕೆಂಪು ವಲಯದಲ್ಲಿವೆ.

ಸೆನ್ಸೆಕ್ಸ್‌ನ 30 ಷೇರುಗಳಲ್ಲಿ 25 ಷೇರುಗಳು ಏರಿಕೆಯಲ್ಲಿ ವಹಿವಾಟು ನಡೆಸುತ್ತಿದ್ದರೆ, 5 ಷೇರುಗಳು ಕುಸಿತ ಕಂಡಿವೆ. ನಿಫ್ಟಿಯ 50 ಷೇರುಗಳಲ್ಲಿ 41 ಷೇರುಗಳು ಹಸಿರು ವಲಯದಲ್ಲಿದ್ದು, 9 ಷೇರುಗಳು ಕೆಂಪು ವಲಯದಲ್ಲಿವೆ.

ಬಿಎಸ್‌ಇ ಸೆನ್ಸೆಕ್ಸ್ ಇಂದು 296.71 ಅಂಕಗಳ ಏರಿಕೆಯೊಂದಿಗೆ 76,367.55ರಲ್ಲಿ ಆರಂಭವಾಗಿ, ಕೆಲವೇ ಕ್ಷಣಗಳಲ್ಲಿ 76,609.46 ಮಟ್ಟ ತಲುಪಿತು. ನಂತರ ಮಾರಾಟದ ಒತ್ತಡದಿಂದ ಸ್ವಲ್ಪ ಇಳಿಕೆಯಾಗಿದ್ದರೂ, ಬೆಳಿಗ್ಗೆ 10 ಗಂಟೆಯ ವೇಳೆಗೆ 355.59 ಅಂಕಗಳ ಲಾಭದೊಂದಿಗೆ 76,426.43ರಲ್ಲಿ ವಹಿವಾಟು ನಡೆಸುತ್ತಿದೆ.

ಇದೇ ವೇಳೆ, ಎನ್‌ಎಸ್‌ಇ ನಿಫ್ಟಿ 51.75 ಅಂಕಗಳ ಏರಿಕೆಯೊಂದಿಗೆ 23,632.90ರಲ್ಲಿ ಆರಂಭವಾಗಿ, ಗರಿಷ್ಠ 23,754.65 ಮಟ್ಟ ತಲುಪಿತು. ನಂತರದ ಏರಿಳಿತಗಳ ನಡುವೆ, ಬೆಳಿಗ್ಗೆ 10 ಗಂಟೆಗೆ 108.40 ಅಂಕಗಳ ಲಾಭದೊಂದಿಗೆ 23,689.55 ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ.

ಹಿಂದಿನ ವಹಿವಾಟು ದಿನವಾದ ಮಂಗಳವಾರವೂ ಮಾರುಕಟ್ಟೆ ಏರಿಕೆಯಲ್ಲಿ ಮುಕ್ತಾಯಗೊಂಡಿತ್ತು. ಸೆನ್ಸೆಕ್ಸ್ 567.99 ಅಂಕಗಳ (ಶೇ. 0.75) ಏರಿಕೆಯೊಂದಿಗೆ 76,070.84ಕ್ಕೆ ತಲುಪಿದ್ದರೆ, ನಿಫ್ಟಿ 172.35 ಅಂಕಗಳ (ಶೇ. 0.74) ಏರಿಕೆಯಿಂದ 23,581.15ರಲ್ಲಿ ಮುಚ್ಚಿತ್ತು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande