ಜಾಗತಿಕ ಮಾರುಕಟ್ಟೆಗಳಲ್ಲಿ ದೌರ್ಬಲ್ಯದ ಲಕ್ಷಣ
ನವದೆಹಲಿ, 16 ಮಾರ್ಚ್ (ಹಿ.ಸ.): ಆ್ಯಂಕರ್: ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಇಂದು ದೌರ್ಬಲ್ಯದ ಲಕ್ಷಣಗಳು ಗೋಚರಿಸುತ್ತಿವೆ. ಹಿಂದಿನ ವಹಿವಾಟಿನಲ್ಲಿ ಅಮೆರಿಕದ ಮಾರುಕಟ್ಟೆಗಳು ಕುಸಿತದೊಂದಿಗೆ ಮುಕ್ತಾಯಗೊಂಡಿದ್ದು, ಯುರೋಪಿನ ಮಾರುಕಟ್ಟೆಗಳಲ್ಲಿಯೂ ನಿರಂತರ ಮಾರಾಟದ ಒತ್ತಡ ಕಂಡುಬಂದಿದೆ. ಇತ್ತ ಏಷ್ಯಾದ
Market


ನವದೆಹಲಿ, 16 ಮಾರ್ಚ್ (ಹಿ.ಸ.):

ಆ್ಯಂಕರ್:

ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಇಂದು ದೌರ್ಬಲ್ಯದ ಲಕ್ಷಣಗಳು ಗೋಚರಿಸುತ್ತಿವೆ. ಹಿಂದಿನ ವಹಿವಾಟಿನಲ್ಲಿ ಅಮೆರಿಕದ ಮಾರುಕಟ್ಟೆಗಳು ಕುಸಿತದೊಂದಿಗೆ ಮುಕ್ತಾಯಗೊಂಡಿದ್ದು, ಯುರೋಪಿನ ಮಾರುಕಟ್ಟೆಗಳಲ್ಲಿಯೂ ನಿರಂತರ ಮಾರಾಟದ ಒತ್ತಡ ಕಂಡುಬಂದಿದೆ. ಇತ್ತ ಏಷ್ಯಾದ ಮಾರುಕಟ್ಟೆಗಳು ಮಿಶ್ರ ವಹಿವಾಟು ನಡೆಸುತ್ತಿರುವುದು ಗಮನಸೆಳೆಯುತ್ತಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೌರಾಜಕೀಯ ಬಿಕ್ಕಟ್ಟಿನ ಪರಿಣಾಮವಾಗಿ ಕಳೆದ ವಹಿವಾಟಿನ ಅವಧಿಯಲ್ಲಿ ಅಮೆರಿಕದ ಮಾರುಕಟ್ಟೆ ಒತ್ತಡಕ್ಕೆ ಒಳಗಾಗಿತ್ತು. ಪರಿಣಾಮವಾಗಿ ವಾಲ್ ಸ್ಟ್ರೀಟ್ ಪ್ರಮುಖ ಸೂಚ್ಯಂಕಗಳು ಕುಸಿತದೊಂದಿಗೆ ಮುಕ್ತಾಯಗೊಂಡವು. ಎಸ್&ಪಿ 500 ಸೂಚ್ಯಂಕವು ಶೇಕಡಾ 0.61 ರಷ್ಟು ಇಳಿದು 6,632.19 ಅಂಕಗಳಲ್ಲಿ ಮುಕ್ತಾಯಗೊಂಡಿದೆ. ಅದೇ ವೇಳೆ ನ್ಯಾಸ್ಡಾಕ್ ಸೂಚ್ಯಂಕವು 206.62 ಅಂಕಗಳು (ಶೇ.0.93) ಕುಸಿದು 22,105.36 ಅಂಕಗಳಿಗೆ ತಲುಪಿತು.

ಆದಾಗ್ಯೂ, ಇಂದು ಡೌ ಜೋನ್ಸ್ ಫ್ಯೂಚರ್ಸ್ 154.02 ಅಂಕಗಳು (ಶೇ.0.33) ಏರಿಕೆಯೊಂದಿಗೆ 46,712.49 ಅಂಕಗಳಲ್ಲಿ ವಹಿವಾಟು ನಡೆಸುತ್ತಿರುವುದು ಕೆಲವು ಮಟ್ಟಿನ ಧೈರ್ಯವನ್ನು ಮೂಡಿಸಿದೆ.

ಇತ್ತ ಯುರೋಪಿನ ಮಾರುಕಟ್ಟೆಗಳಲ್ಲಿಯೂ ದುರ್ಬಲತೆ ಮುಂದುವರಿದಿದೆ. ಎಫಟಿಎಸ್ಇ ಸೂಚ್ಯಂಕವು ಶೇ.0.43 ರಷ್ಟು ಇಳಿದು 10,261.15 ಅಂಕಗಳಿಗೆ ತಲುಪಿದರೆ, ಸಿಎಸಿ ಸೂಚ್ಯಂಕವು ಶೇ.0.92 ರಷ್ಟು ಕುಸಿದು 7,911.53 ಅಂಕಗಳಲ್ಲಿ ಮುಕ್ತಾಯವಾಯಿತು. ಜೊತೆಗೆ ಡಿಎಎಕ್ಸ ಸೂಚ್ಯಂಕವು 142.36 ಅಂಕಗಳು (ಶೇ.0.61) ಇಳಿದು 23,447.29 ಅಂಕಗಳಲ್ಲಿ ಕೊನೆಗೊಂಡಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಇಂದು ಮಿಶ್ರ ವಹಿವಾಟು ಕಂಡುಬರುತ್ತಿದೆ. ಒಟ್ಟು ಒಂಬತ್ತು ಪ್ರಮುಖ ಸೂಚ್ಯಂಕಗಳಲ್ಲಿ ನಾಲ್ಕು ಸೂಚ್ಯಂಕಗಳು ಏರಿಕೆಯಲ್ಲಿ ಇದ್ದರೆ, ಐದು ಸೂಚ್ಯಂಕಗಳು ಕುಸಿತದಲ್ಲಿ ವಹಿವಾಟು ನಡೆಸುತ್ತಿವೆ.

ಗಿಫ್ಟ್ ನಿಫ್ಟಿ ಶೇ.0.26 ರಷ್ಟು ಏರಿಕೆಯೊಂದಿಗೆ 23,264 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಹ್ಯಾಂಗ್ ಸೆಂಗ್ ಸೂಚ್ಯಂಕವು 155.40 ಅಂಕಗಳು (ಶೇ.0.61) ಏರಿಕೆಯೊಂದಿಗೆ 25,621 ಅಂಕಗಳಿಗೆ ತಲುಪಿದೆ. ಅದೇ ರೀತಿ ಎಸ್ಇಟಿ ಕಾಂಪೋಸಿಟ್ ಸೂಚ್ಯಂಕವು ಶೇ.0.28 ರಷ್ಟು ಏರಿ 1,413.26 ಅಂಕಗಳಿಗೆ ತಲುಪಿದರೆ, ತೈವಾನ್ ವೆಯ್ಟೆಡ್ ಇಂಡೆಕ್ಸ್ 0.01 ಶೇಕಡಾ ಸಾಂಕೇತಿಕ ಏರಿಕೆಯೊಂದಿಗೆ 33,403.69 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.

ಇನ್ನೊಂದೆಡೆ ಕೆಲವು ಏಷ್ಯಾದ ಮಾರುಕಟ್ಟೆಗಳು ಕುಸಿತದಲ್ಲಿವೆ. ನಿಕ್ಕಿ ಸೂಚ್ಯಂಕವು 546.61 ಅಂಕಗಳು (ಶೇ.1.03) ಇಳಿದು 53,273 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಶಾಂಘೈ ಕಾಂಪೋಸಿಟ್ ಸೂಚ್ಯಂಕವು ಶೇ.0.72 ರಷ್ಟು ಕುಸಿದು 4,066.32 ಅಂಕಗಳಿಗೆ ಇಳಿದಿದೆ.

ಜಕಾರ್ತಾ ಕಾಂಪೋಸಿಟ್ ಸೂಚ್ಯಂಕವು ದೊಡ್ಡ ಮಟ್ಟದ ಕುಸಿತವನ್ನು ದಾಖಲಿಸಿದ್ದು, 117.27 ಅಂಕಗಳು (ಶೇ.1.67) ಇಳಿದು 7,019.94 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಇದೇ ವೇಳೆ ಕೋಸ್ಪಿ ಸೂಚ್ಯಂಕವು ಶೇ.0.19 ರಷ್ಟು ಕುಸಿದು 5,476.81 ಅಂಕಗಳಲ್ಲಿ ಇದ್ದರೆ, ಸ್ಟ್ರೈಟ್ಸ್ ಟೈಮ್ಸ್ ಸೂಚ್ಯಂಕವು ಶೇ.0.04 ರಷ್ಟು ಸ್ವಲ್ಪ ಇಳಿಕೆಯಿಂದ 4,840.27 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande