ಧಾರವಾಡದಲ್ಲಿ ದೇವಸ್ಥಾನಗಳ ಮಹಿಳಾ ಸಮಿತಿ ರಚನೆಗೆ ಬೃಹತ್ ಸಭೆ
ಧಾರವಾಡ, 15 ಮಾರ್ಚ್ (ಹಿ.ಸ.): ಆ್ಯಂಕರ್:ಮಾತೃ ಭೂಮಿ ಸೇವಾ ಟ್ರಸ್ಟ್ (ರಿ.) ಧಾರವಾಡ ಹಾಗೂ ಧಾರವಾಡ ಜಿಲ್ಲಾ ದೇವಸ್ಥಾನಗಳ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಧಾರವಾಡ ಜಿಲ್ಲಾ ದೇವಸ್ಥಾನಗಳ ಮಹಿಳಾ ಸಮಿತಿಯನ್ನು ರಚಿಸುವ ಉದ್ದೇಶದಿಂದ ಭಾನುವಾರ ಧಾರವಾಡದ ಸರಸ್ವತಿ ನಿಕೇತನ, ಮರಾಠಾ ಕಾಲೋನಿ, ದುರ್ಗಾದೇವಿ
Photo


ಧಾರವಾಡ, 15 ಮಾರ್ಚ್ (ಹಿ.ಸ.):

ಆ್ಯಂಕರ್:ಮಾತೃ ಭೂಮಿ ಸೇವಾ ಟ್ರಸ್ಟ್ (ರಿ.) ಧಾರವಾಡ ಹಾಗೂ ಧಾರವಾಡ ಜಿಲ್ಲಾ ದೇವಸ್ಥಾನಗಳ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಧಾರವಾಡ ಜಿಲ್ಲಾ ದೇವಸ್ಥಾನಗಳ ಮಹಿಳಾ ಸಮಿತಿಯನ್ನು ರಚಿಸುವ ಉದ್ದೇಶದಿಂದ ಭಾನುವಾರ ಧಾರವಾಡದ ಸರಸ್ವತಿ ನಿಕೇತನ, ಮರಾಠಾ ಕಾಲೋನಿ, ದುರ್ಗಾದೇವಿ ಗುಡಿ ಹತ್ತಿರ ಮಹಿಳೆಯರಿಗಾಗಿ ಬೃಹತ್ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಧಾರವಾಡ ಜಿಲ್ಲಾ ದೇವಸ್ಥಾನಗಳ ಸಮಿತಿಯ ಅಧ್ಯಕ್ಷರಾದ ಡಾ. ಎಸ್. ಆರ್. ರಾಮನಗೌಡರ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕರಾದ ಡಾ. ಅಮೃತ ಯಾರ್ದಿ ಭಾಗವಹಿಸಿ ಮಹಿಳೆಯರ ಸಂಘಟನೆಯ ಮಹತ್ವ ಮತ್ತು ದೇವಸ್ಥಾನಗಳ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಹಿಳೆಯರ ಪಾತ್ರ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ದೇವಸ್ಥಾನಗಳ ಸಮಿತಿಯ ಉಪಾಧ್ಯಕ್ಷರಾದ ಸುಭಾಷ ಆಕಳವಾಡಿ, ಮಾತೃ ಭೂಮಿ ಸೇವಾ ಟ್ರಸ್ಟ್ (ರಿ.) ಧಾರವಾಡದ ಅಧ್ಯಕ್ಷರಾದ ನಿತೀನ ರಾಮದುರ್ಗ, ಯುವ ಮುಖಂಡ ನಾಗೇಶ ಕುಸುಗಲ್ ಸೇರಿದಂತೆ ವಿವಿಧ ಬಡಾವಣೆಗಳ ಮಹಿಳೆಯರು, ಧಾರವಾಡ ಜಿಲ್ಲಾ ದೇವಸ್ಥಾನಗಳ ಸಮಿತಿಯ ಹಾಗೂ ಮಾತೃಭೂಮಿ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರತಿ ಸೋಮವಾರ ನಡೆಯುವ ಧರ್ಮದ ಆರತಿ ಕಾರ್ಯಕ್ರಮದ ಪ್ರಾತ್ಯಕ್ಷಿಕೆಯನ್ನು ಕೂಡ ನಡೆಸಲಾಯಿತು.

ಕಾರ್ಯಕ್ರಮವನ್ನು ವಿರೇಶ ತೋಟರ ನಿರೂಪಿಸಿದರು. ಪರಶುರಾಮ ದೊಡವಾಡ ಸ್ವಾಗತಿಸಿದರು. ನರಸಪ್ಪ ಭಟ್ಟಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿರೇಶ ಕೆಲಗೇರಿ ವಂದಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande