
ಬಾಗಲಕೋಟೆ, 15 ಮಾರ್ಚ್ (ಹಿ.ಸ.)
ಆ್ಯಂಕರ್ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು, ವಾಟ್ಸಾಪ್ ಗುಂಪುಗಳು, ಮೊಬೈಲ್ ಅಪ್ಲಿಕೇಶನ್ಗಳು ಹಾಗೂ ಕರೆಗಳ ಮೂಲಕ ಅಧಿಕ ಲಾಭದ ಭರವಸೆ ನೀಡಿ ಹೂಡಿಕೆ ಮಾಡಲು ಪ್ರಲೋಭನೆ ನೀಡುವ ಮೋಸ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಬಾಗಲಕೋಟೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಪ್ರಕಟಣೆಯಲ್ಲಿ ತಿಳಿಸದ ಪೊಲೀಸ್ ಇಲಾಖೆ, ಸಾರ್ವಜನಿಕರು ಇಂತಹ ಆಮಿಷಗಳಿಗೆ ಒಳಗಾಗದೆ ಜಾಗೃತರಾಗಬೇಕು. ಯಾವುದೇ ಹೂಡಿಕೆ ಮಾಡುವ ಮೊದಲು ಅದರ ಪ್ರಾಮಾಣಿಕತೆಯನ್ನು ಭಾರತೀಯ ಭದ್ರತಾ ಪತ್ರಗಳು ಮತ್ತು ವಿನಿಮಯ ಮಂಡಳಿ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬೇಕು. ಅಧಿಕೃತ ಹಾಗೂ ಮಾನ್ಯ ಮಾರ್ಗಗಳ ಮೂಲಕ ಮಾತ್ರ ಹೂಡಿಕೆ ಮಾಡಬೇಕು ಎಂದು ತಿಳಿಸಲಾಗಿದೆ.
ಅಪರಿಚಿತ ಆಪ್ಗಳು, ಲಿಂಕ್ಗಳು ಅಥವಾ ಗುಂಪುಗಳ ಮೂಲಕ ಹಣ ಹೂಡಿಕೆ ಮಾಡುವುದನ್ನು ತಪ್ಪಿಸಲು ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ. ಯಾರಾದರೂ ಸೈಬರ್ ವಂಚನೆಗೆ ಒಳಗಾದರೆ ತಕ್ಷಣವೇ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಬೇಕು ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ ವೆಬ್ಸೈಟ್ www.cybercrime.gov.in ನಲ್ಲಿ ದೂರು ದಾಖಲಿಸಲು ಮನವಿ ಮಾಡಲಾಗಿದ್ದು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande