
ವಿಜಯಪುರ, 14 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ನಗರದ ನವರಸಪುರದಲ್ಲಿರುವ ಸುರಭಿ ಸಿದ್ದೇಶ್ವರ ಲೇಔಟ್ನಲ್ಲಿ ಜಗದ್ಗುರು ಬಾಳೆಹೊನ್ನೂರು ರಂಭಾಪುರಿ ಮಹಾಪೀಠದ ಪ್ರಥಮ ಶಾಖಾ ಮಠದ ಭೂಮಿಪೂಜೆ ಕಾರ್ಯಕ್ರಮ ಇಂದು ನಡೆಯಲಿದೆ.
ಪರಮಪೂಜ್ಯ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ನಾಡಿನ ಅನೇಕ ಮಠಾಧೀಶರ ಸಮ್ಮುಖದಲ್ಲಿ ಈ ಪವಿತ್ರ ಕಾರ್ಯಕ್ರಮ ನೆರವೇರಲಿದೆ.
ದಶಕಗಳ ಕಾಲ ಭಕ್ತರ ಮನದಲ್ಲಿ ಮೂಡಿದ್ದ ಶಾಖಾ ಮಠ ಸ್ಥಾಪನೆಯ ಕನಸು ಇದೀಗ ಸಾಕಾರವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧರ್ಮ, ದಾಸೋಹ ಮತ್ತು ಬಸವ ತತ್ವಗಳ ಪ್ರಸಾರಕ್ಕೆ ಈ ಶಾಖಾ ಮಠವು ಪ್ರಮುಖ ಕೇಂದ್ರವಾಗಲಿದೆ ಎಂದು ಹೇಳಲಾಗಿದೆ.
ವಿಜಯಪುರದಲ್ಲಿ ಈ ಮಠದ ಸ್ಥಾಪನೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ತಿಳಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande