ಕಸಬಾ ರೇಷ್ಮೆ ಬೆಳೆಗಾರರ ಸಹಕಾರ ಸಂಘಕ್ಕೆ ಶಬ್ಬೀರ್ ಅಹ್ಮದ್ ಪಾಷಾ ಸೇರಿ ೧೨ ಮಂದಿ ಅವಿರೋಧ ಆಯ್ಕೆ
ಕಸಬಾ ರೇಷ್ಮೆ ಬೆಳೆಗಾರರ ಸಹಕಾರ ಸಂಘಕ್ಕೆ ಶಬ್ಬೀರ್ ಅಹ್ಮದ್ ಪಾಷಾ ಸೇರಿ ೧೨ ಮಂದಿ ಅವಿರೋಧ ಆಯ್ಕೆ
ಶಬ್ಬೀರ್ ಅಹ್ಮದ್ ಪಾಷಾ ಸೇರಿ ಒಟ್ಟು ೧೨ ಮಂದಿ ಅಭ್ರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಕೋಲಾರ, 14 ಮಾರ್ಚ್ (ಹಿ.ಸ.):

ಆ್ಯಂಕರ್:

ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿ ಚುನಾವಣೆಯಲ್ಲಿ ಶಬ್ಬೀರ್ ಅಹ್ಮದ್ ಪಾಷಾ ಸೇರಿ ಒಟ್ಟು ೧೨ ಮಂದಿ ಅಭ್ರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಆಡಳಿತ ಮಂಡಳಿಯ ಒಟ್ಟು ೧೨ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಅದರಲ್ಲಿ ೧೧ ಸ್ಥಾನಗಳು ಸಾಲಗಾರರ ಕ್ಷೇತ್ರಕ್ಕೆ ಹಾಗೂ ೧ ಸ್ಥಾನ ಸಾಲಗಾರರಲ್ಲದ ಕ್ಷೇತ್ರಕ್ಕೆ ಮೀಸಲಾಗಿತ್ತು.

ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಮರ್ಚ್ ೧೧ ಕೊನೆಯ ದಿನವಾಗಿತ್ತು.

ವಿವಿಧ ಕ್ಷೇತ್ರಗಳಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಬಳಿಕ ನಾಮಪತ್ರಗಳ ಪರಿಶೀಲನೆ ಹಾಗೂ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರತಿಯೊಂದು ಸ್ಥಾನಕ್ಕೂ ತಲಾ ಒಬ್ಬರೇ ಅಭ್ಯಗಳು ಉಳಿದ ಹಿನ್ನೆಲೆ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆಭಿದ್ ಹುಸೇನ್ ಸಾಬ್ ಅಧಿಕೃತವಾಗಿ ಘೋಷಿಸಿದರು.

ಅವಿರೋಧವಾಗಿ ಆಯ್ಕೆಯಾದವರಲ್ಲಿ ಹಿಂದುಳಿದ ರ್ಗ ‘ಎ’ ಮೀಸಲು ಕ್ಷೇತ್ರದಿಂದ ಶಬ್ಬೀರ್ ಅಹ್ಮದ್ ಪಾಷಾ, ಹಿಂದುಳಿದ ರ್ಗ ‘ಬಿ’ ಮೀಸಲು ಕ್ಷೇತ್ರದಿಂದ ಸಿ. ಮುನಿವೆಂಕಟಪ್ಪ, ಬಿ.ವಿ. ವೆಂಕಟರೆಡ್ಡಿ, ಟಿ. ರಾಮಚಂದ್ರಪ್ಪ, ಎಂ. ಮುನಿಶ್ವರ್ ಬಾಬು, ಪಿ.ಎಸ್. ಮಂಜುನಾಥ ರೆಡ್ಡಿ ಹಾಗೂ ಎಂ. ಭೈರಾರೆಡ್ಡಿ, ಎಸ್ಸಿ ಮೀಸಲು ಕ್ಷೇತ್ರದಿಂದ ಹೆಚ್.ಸಿ. ಮಂಜುನಾಥ್, ಎಸ್ಟಿ ಮೀಸಲು ಕ್ಷೇತ್ರದಿಂದ ಸಿ.ವಿ. ದೇವರಾಜ, ಮಹಿಳಾ ಮೀಸಲು ಕ್ಷೇತ್ರಗಳಿಂದ ಭಾಗ್ಯಮ್ಮ ಹಾಗೂ ಸುನಂದಮ್ಮ, ಸಾಲಗಾರರಲ್ಲದ ಕ್ಷೇತ್ರದಿಂದ ಸಿ.ವಿ. ಸಂಪತ್ ಕುಮಾರ್ ಆಯ್ಕೆಯಾಗಿದ್ದಾರೆ.

ಶಬ್ಬೀರ್ ಅಹ್ಮದ್ ಪಾಷಾ ಅವರು ಅವಿರೋಧವಾಗಿ ಆಯ್ಕೆಯಾಗಿರುವುದು ಅವರ ಮೂರನೇ ಅವಧಿಯಾಗಿದೆ. ಈ ಹಿಂದೆ ಅವರು ಎರಡು ಬಾರಿ ಸಂಘದ ಸಾಲಗಾರರಲ್ಲದ ಕ್ಷೇತ್ರದ ನರ್ದೇಶಕರಾಗಿ ಆಯ್ಕೆಯಾಗಿದ್ದು, ಸಂಘದ ಅಭಿವೃದ್ಧಿಗೆ ಸಕ್ರಿಯವಾಗಿ ಕರ್ಯನರ್ವಹಿಸಿದ್ದರು. ಮೂರನೇ ಬಾರಿ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿರುವುದು ಗಮನರ್ಹವಾಗಿದೆ.

ಅವಿರೋಧ ಆಯ್ಕೆಯಾದ ಬಳಿಕ ಪ್ರತಿಕ್ರಿಯೆ ನೀಡಿದ ಶಬ್ಬೀರ್ ಅಹ್ಮದ್ ಪಾಷಾ ಅವರು, ತಮ್ಮ ಆಯ್ಕೆಗೆ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿ ಸಹಕರಿಸಿದ ಎಲ್ಲಾ ಮುಖಂಡರು, ಸಂಘದ ಸದಸ್ಯರು, ಹಿರಿಯರು, ಸ್ನೇಹಿತರು ಮತ್ತು ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಹೊಸ ಆಡಳಿತ ಮಂಡಳಿಗೆ ಸ್ಥಳೀಯ ರೈತರು ಹಾಗೂ ಸಂಘದ ಸದಸ್ಯರು ಅಭಿನಂದನೆ ಸಲ್ಲಿಸಿದ್ದು, ಸಂಘದ ಚಟುವಟಿಕೆಗಳು ಇನ್ನಷ್ಟು ಚುರುಕುಗೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಂರ್ಭದಲ್ಲಿ ಸಹಕಾರ ಸಂಘದ ಮುಖ್ಯ ಕರ್ಯನರ್ವಹಣಾಧಿಕಾರಿ ಸಿ. ಎಸ್ . ಶಿವಾರೆಡ್ಡಿ, ಸಂಘದ ಸಿಬ್ಬಂದಿ ಹಾಗೂ ಮುಖಂಡರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande