ಕೊಪ್ಪಳ : ಮಾ.17 - ಜಿಲ್ಲಾ ಮಟ್ಟದ ಭೂ ಅನುಷ್ಠಾನ ಸಮಿತಿ ಸಭೆ
ಬಳ್ಳಾರಿ, 14 ಮಾರ್ಚ್ (ಹಿ.ಸ.) ಆ್ಯಂಕರ್: ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಭೂ ಮಾಲೀಕರ ಪ್ರಸ್ತಾವನೆಗಳಿಗೆ ದರ ನಿಗದಿಪಡಿಸಲು ಜಿಲ್ಲಾ ಮಟ್ಟದ ಭೂ ಅನುಷ್ಠಾನ ಸಮಿತಿ ಸಭೆಯನ್ನು ಮಾರ್ಚ್ 17 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯ
ಕೊಪ್ಪಳ : ಮಾ.17 - ಜಿಲ್ಲಾ ಮಟ್ಟದ ಭೂ ಅನುಷ್ಠಾನ ಸಮಿತಿ ಸಭೆ


ಬಳ್ಳಾರಿ, 14 ಮಾರ್ಚ್ (ಹಿ.ಸ.)

ಆ್ಯಂಕರ್: ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಭೂ ಮಾಲೀಕರ ಪ್ರಸ್ತಾವನೆಗಳಿಗೆ ದರ ನಿಗದಿಪಡಿಸಲು ಜಿಲ್ಲಾ ಮಟ್ಟದ ಭೂ ಅನುಷ್ಠಾನ ಸಮಿತಿ ಸಭೆಯನ್ನು ಮಾರ್ಚ್ 17 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ಣಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ಣಾಟಕ ಭೋವಿ ಅಭಿವೃದ್ಧಿ ನಿಗಮಗಳಿಗೆ ಭೂಮಿ ಮಾರಾಟ ಮಾಡಲು ಒಪ್ಪಿಗೆ ಪತ್ರ ನೀಡಿದ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಕಾರಟಗಿ, ಕೊಪ್ಪಳ, ಗಂಗಾವತಿ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಭೂಮಾಲೀಕರ ಪ್ರಸ್ತಾವನೆಗಳಿಗೆ ಭೂ ಮಾಲೀಕರ ಸಮಕ್ಷಮದಲ್ಲಿ ಬೆಲೆ ನಿಗದಿಪಡಿಸಲು ಜಿಲ್ಲಾ ಮಟ್ಟದ ಭೂ ಅನುಷ್ಠಾನ ಸಮಿತಿ ಸಭೆಯನ್ನು ಮಾ.17 ರಂದು ನಿಗದಿಪಡಿಸಲಾಗಿದೆ.

ಜಿಲ್ಲಾಧಿಕಾರಿಗಳು ಹಾಗೂ ಭೂ ಒಡೆತನ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಡಾ.ಸುರೇಶ ಬಿ.ಇಟ್ನಾಳ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಆದ್ದರಿಂದ ಈ ನಿಗಮಗಳಿಗೆ ಭೂಮಿ ಮಾರಾಟ ಮಾಡಲು ಒಪ್ಪಿಗೆ ಪತ್ರ ನೀಡಿದ ಭೂ ಮಾಲೀಕರು ಖುದ್ದಾಗಿ ಸಭೆಗೆ ಹಾಜರಾಗಬೇಕು ಎಂದು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande