
ಕೋಲಾರ, ೧೪ ಮಾರ್ಚ್ (ಹಿ.ಸ):
ಆ್ಯಂಕರ್ : ವ್ಯಾಜ್ಯಗಳನ್ನು ತಾರ್ಕಿಕ ಹಂತಕ್ಕೆ ಕೊಂಡ್ಯೋಯ್ದು ಸರ್ವ ಸಮ್ಮತವಾದ ನ್ಯಾಯ ಲೋಕ ಅದಾಲತ್ನಲ್ಲಿ ಒದಗಿಸಲಾಗುವುದು. ಕೋಲಾರ ಜಿಲ್ಲೆಯಾದ್ಯಂತ ಐವತ್ತು ಆರು ಸಾವಿರ ಆರು ನೂರ ಅರವತ್ತೆರಡು ಪ್ರಕರಣಗಳು ಬಾಕಿ ಇದ್ದು, ಲೋಕ ಅದಾಲತ್ನಲ್ಲಿ ಹಲವಾರು ಪ್ರಕರಣಗಳನ್ನು ರಾಜೀ ಸಂದಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಪ್ರಧಾನ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ತಿಳಿಸಿದರು.
ಕೋಲಾರದಲ್ಲಿ ಶನಿವಾರ ನಡೆದ ರಾಷ್ಟಿಯ ಲೋಕ ಅದಾಲತ್ಗೆ ಕೋಲಾರ ಜಿಲ್ಲಾ ಮತ್ತು ಸೆಷನ್ಸ್ ಪ್ರದಾನ ನ್ಯಾಯಾಧೀಶರಾದ ವಿಜಯ್ ಕುಮಾರ್ ಎನ್. ಆನಂದ ಶೆಟ್ಟಿ ಚಾಲನೆ ನೀಡಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ್ ಆರ್ ಹಾಗೂ ವಕೀಲರು ಅದಾಲತ್ನಲ್ಲಿ ಭಾಗಿಯಾಗಿದ್ದರು. ಕೋಲಾರ ಜಿಲ್ಲೆಯಾದ್ಯಂತ ನಡೆದ ಅದಾಲತ್ನಲ್ಲಿ ಸಿವಿಲ್,ಕ್ರಿಮಿನಲ್, ರೈತರ ಸಾಲದ ಪ್ರಕರಣಗಳು, ಕೌಟುಂಬಿಕ ಸಮಸ್ಯೆಗಳ ಪ್ರಕರಣಗಳು ಸೇರಿದಂತೆ ಇತರ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಕೋಲಾರ ತಾಲ್ಲೂಕಿನ ಚೌಡದೇನಹಳ್ಳಿಯ ನಿವಾಸಿ ಬಿ.ವೆಂಕಟಾಚಲಪತಿ ಮಾತನಾಡಿ ಸ್ವಯಂ ಉದ್ಯೋಗ ಯೋಜನೆಯಲ್ಲಿ ಟೆಂಟ್ ಹೌಸ್ ನಡೆಸಲು ಬ್ಯಾಂಕ್ ಆಫ್ ಬರೋಡಾ ಶಾಖೆಯಿಂದ ಹತ್ತು ಲಕ್ಷ ರೂಪಾಯಿ ಸಾಲ ಮಂಜೂರಾತಿ ಆಗಿತ್ತು. ಆ ಪೈಕಿ ಆರು ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಆದರೆ ಕರೋನಾ ನಂತರ ನಷ್ಠ ಎದುರಾಗಿ ಸಾಲದ ಕಂತುಗಳನ್ನು ಮರು ಪಾವತಿ ಮಾಡಲಿಲ್ಲ. ಒಂದು ಲಕ್ಷ ಹದಿನೇಳು ಸಾವಿರ ರೂಪಾಯಿ ಬಾಕಿ ಇದ್ದು, ಲೋಕ ಅದಾಲತ್ನಲ್ಲಿ ಇಪ್ಪತ್ತು ಸಾವಿರ ರೂಪಾಯಿ ಪಾವತಿ ಮಾಡಲು ಇತ್ಯರ್ಥವಾಯಿತು ಎಂದು ಸಂತಸ ವ್ಯಕ್ತಪಡಿಸಿದರು
ರಾಜೀ ಸಂದಾನಕಾರ ಹಾಗೂ ವಕೀಲ ಸತೀಶ್ ಮಾತನಾಡಿ ಲೋಕ ಅದಾಲತ್ನಲ್ಲಿ ಪರಸ್ಪರ ಒಪ್ಪಿ ರಾಜೀ ಸಂದಾನ ಮೂಲಕ ಪ್ರಕರಣಗಳು ಇತ್ಯರ್ಥಗೊಂಡಲ್ಲಿ ನ್ಯಾಯಾಲಯದ ಶುಲ್ಕ ನೀಡಬೇಕಾಗಿಲ್ಲ. ರಾಜೀ ಸಂದಾನದಿ0ದಾಗಿ ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ. ಅಲ್ಲದೆ ಸೌಹಾರ್ಧಯುತ ವಾತಾವರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಕೋಲಾರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ನ್ಯಾಯಾಲಯದ ಮುಂದೆ ಇರುವ ಕಕ್ಷೀದಾರರ ಸಮಸ್ಯೆಗಳಿಗೆ ಲೋಕ ಅದಾಲತ್ ಶಿಬಿರಗಳಲ್ಲಿ ಪರಿಹಾರ ಕಲ್ಪಿಸಲಾಗುತ್ತಿದೆ. ಇದರಿಂದ ನ್ಯಾಯಾಲಕ್ಕೆ ಅಲೆದಾಡುವುದು ತಪ್ಪುತ್ತದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್