ವಿಎಸ್ಕೆಯು : ಕಾರ್ಪೋರೇಟ್ ಪೋಸ್ಟರ್ ಪ್ರದರ್ಶನ
ಬಳ್ಳಾರಿ, 14 ಮಾರ್ಚ್ (ಹಿ.ಸ.) ಆ್ಯಂಕರ್: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳ ಪೋಸ್ಟರ್ ಪ್ರದರ್ಶನವಾದ ‘ಹೌಸ್ ಫುಲ್’ ಅನ್ನು ಬೆಂಗಳೂರಿನ ಎನ್ವಿಸಿಸ್ ಟೆಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾದ ಡಾ. ಅನಿಲ್ ಕುಮಾ
ತೆ


ತೆ


ತೆ


ಬಳ್ಳಾರಿ, 14 ಮಾರ್ಚ್ (ಹಿ.ಸ.)

ಆ್ಯಂಕರ್: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳ ಪೋಸ್ಟರ್ ಪ್ರದರ್ಶನವಾದ ‘ಹೌಸ್ ಫುಲ್’ ಅನ್ನು ಬೆಂಗಳೂರಿನ ಎನ್ವಿಸಿಸ್ ಟೆಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾದ ಡಾ. ಅನಿಲ್ ಕುಮಾರ್ ಕೊಟ್ಟಾನಿ ಅವರು ಉದ್ಘಾಟಿಸಿದ್ದಾರೆ.

ನಿರ್ವಹಣಾಶಾಸ್ತ್ರದ ಕಾರ್ಪೋರೇಟ್ ಕ್ಷೇತ್ರದಲ್ಲಿನ ವಿವಿಧ ಆಯಾಮಗಳಾದ ಎಸ್ಸಿಎಂ, ನಾವೀನ್ಯತೆ ಮತ್ತು ಸೃಜನಶೀಲತೆ, ಎಐ ಮತ್ತು ವ್ಯಾಪಾರ, ಫಿನ್ ಟೆಕ್, ಸಾರ್ಟ್ಅಪ್ಗಳು ಹಾಗೂ ಉದ್ಯಮಕ್ಕೆ ಸೇರಿದಂತೆ 500ಕ್ಕೂ ಹೆಚ್ಚು ವಿವಿಧ ಪೋಸ್ಟರ್ಗಳನ್ನು ಪ್ರದರ್ಶಿಸಲಾಯಿತು.

ಬಳ್ಳಾರಿಯ ಎಲ್ಲಾ ಬಿಬಿಎ, ಬಿಸಿಎ, ಹಾಗೂ ವಾಣಿಜ್ಯಶಾಸ್ತ್ರ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಪೋಸ್ಟರ್ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ಜಿ ಪಿ ದಿನೇಶ್ ಹಾಗೂ ವಿಭಾಗದ ಸಿಬ್ಬಂದಿ ಮತ್ತು ವಿವಿಯ ಎಲ್ಲ ವಿಭಾಗಗಳ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande