ಕರ್ನಾಟಕರತ್ನ ಪವರ್ ಸ್ಟಾರ್ ಪುನಿತ್ ಅವಾರ್ಡ್ ೨೦೨೬ಕ್ಕೆ ಭಾಜನರಾದ ಜಾನ್ ಸಮ್ಯೂವೆಲ್
ಕರ್ನಾಟಕರತ್ನ ಪವರ್ ಸ್ಟಾರ್ ಪುನಿತ್ ಅವಾರ್ಡ್ ೨೦೨೬ಕ್ಕೆ ಭಾಜನರಾದ ಜಾನ್ ಸಮ್ಯೂವೆಲ್
ಜಾನ್ ಸಮ್ಯೂವೆಲ್ ಕಿಮ್ .ಜೆ


ಕೋಲಾರ, ೧೪ ಮಾರ್ಚ್ (ಹಿ.ಸ):

ಆಂಕರ್ : ಟಿವಿ೪ ಕನ್ನಡ ಚಾನೆಲ್ ಮತ್ತು ಶ್ರೀ ಶಿರಡಿ ಸಾಯಿ ಬಾಬಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾರ್ಚ್ ೧೫ರಂದು ಬೆಳಿಗ್ಗೆ ೧೦-೦೦ಗಂಟೆಗೆ ಬೆಂಗಳೂರಿನ ಯಲಹಂಕದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯುವ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ಅವಾರ್ಡ್ಸ್ ೨೦೨೬ ಕಾರ್ಯಕ್ರಮದಲ್ಲಿ ಕೋಲಾರದ ರಾಷ್ಟಿಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಜಾನ್ ಸಮ್ಯೂವೆಲ್ ಕಿಮ್ .ಜೆ ರವರ ಸಮಾಜಸೇವೆ ಮತ್ತು ಮಾನವ ಹಕ್ಕುಗಳ ಕಾರ್ಯಕ್ರಮ ಮತ್ತು ಹೋರಾಟವನ್ನು ಗುರುತಿಸಿ ಅವರಿಗೆ ೨೦೨೬ನೇ ಸಾಲಿನ ಕರ್ನಾಟಕ ರತ್ನ ಪವರ್ಸ್ಟಾರ್ ಪುನೀತ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸಾಯಿ ಸತೀಶ್ ತೊಟ್ಲ ಅಧ್ಯಕ್ಷತೆ ವಹಿಸಲಿದ್ದು, ನಾಡಿನ ಸಮಾಜ ಸೇವಕರು ಹಾಗೂ ವಿವಿಧ ಕ್ಷೇತ್ರದಲ್ಲಿ ಗಣೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande