ಸಿಲಿಂಡರ್ ಸಮಸ್ಯೆ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ಗದಗ, 14 ಮಾರ್ಚ್ (ಹಿ.ಸ.) ಆ್ಯಂಕರ್: ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯದಿಂದ ಎಲ್ಪಿಜಿ, ಸಿಲಿಂಡರ್ ಬಿಕ್ಕಟ್ಟಿನ ಸುಳಿಯಲ್ಲಿ ದೇಶದ ಜನತೆ ಬೆಂದು ಹೋಗುತ್ತಿದ್ದಾರೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತದಲ್ಲಿ ವಾರ್ಷಿ
ಫೋಟೋ


ಗದಗ, 14 ಮಾರ್ಚ್ (ಹಿ.ಸ.)

ಆ್ಯಂಕರ್: ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯದಿಂದ ಎಲ್ಪಿಜಿ, ಸಿಲಿಂಡರ್ ಬಿಕ್ಕಟ್ಟಿನ ಸುಳಿಯಲ್ಲಿ ದೇಶದ ಜನತೆ ಬೆಂದು ಹೋಗುತ್ತಿದ್ದಾರೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತದಲ್ಲಿ ವಾರ್ಷಿಕವಾಗಿ ಸುಮಾರು 31.3ರಿಂದ 33 ಮಿಲಿಯನ್ ಮೆಟ್ರಿಕ್ ಟನ್ ಎಲ್ಪಿಜಿ ಬಳಕೆಯಾಗುತ್ತಿದ್ದು, ಅದರಲ್ಲಿ ಶೇ. 62ರಷ್ಟು ಎಲ್ ಪಿ ಜಿ ಅನ್ನು ಕತಾರ್, ಶೇ. 34ರಷ್ಟು ಯುಎಇ, ಶೇ. 26ರಷ್ಟು ಕುವೈತ್ ಹಾಗೂ ಶೇ. 8.3ರಷ್ಟನ್ನು ಸೌದಿ ಅರೇಬಿಯಾದಂತಹ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ದೇಶದಲ್ಲಿ ಒಟ್ಟು ಎಲ್ ಪಿ ಜಿ ಬಳಕೆಯಲ್ಲಿ ಶೇ. 87-88ರಷ್ಟು ಗೃಹ ಬಳಕೆ ಮತ್ತು ಉಳಿದ ಶೇ. 12-13ರಷ್ಟು ವಾಣಿಜ್ಯ ಬಳಕೆ (ಹೋಟೆಲ್, ಕೈಗಾರಿಕೆ) ಮಾಡಲಾಗುತ್ತಿದೆ.

ಭಾರತದಲ್ಲಿ ಎಲ್ಪಿಜಿ ಬಳಕೆಯು 2011-12ರಲ್ಲಿ 15 ಮಿಲಿಯನ್ ಮೆಟ್ರಿಕ್ ಟನ್ ದಿಂದ 2024-25ಕ್ಕೆ 31 ಮಿಲಿಯನ್ ಮೆಟ್ರಿಕ್ ಟನ್ಗೆ ಏರಿಕೆಯಾಗಿ ಶೇ. 100ರಷ್ಟು ಹೆಚ್ಚಾಗಿದ್ದು, ಆಮದು ಮಾಡಿಕೊಳ್ಳುವ ಎಲ್ಪಿಜಿ ಪ್ರಮಾಣವು ಸುಮಾರು 6 ಮಿಲಿಯನ್ ಮೆಟ್ರಿಕ್ ಟನ್ದಿಂದ ಸುಮಾರು 21 ಮಿಲಿಯನ್ ಮೆಟ್ರಿಕ್ ಟನ್ಗೆ ಏರಿಕೆಯಾಗಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ದೇಶದಲ್ಲಿ ಯಾವುದೇ ರೀತಿಯ ಎಲ್ ಪಿಜಿ ಕೊರತೆ ಇಲ್ಲ ಎಂದು ಹೇಳಿ ಎಲ್ ಪಿ ಜಿ ಬುಕಿಂಗ್ಗಳ ನಡುವಿನ ಕನಿಷ್ಠ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಿ ವಾಸ್ತವದಲ್ಲಿರುವ ಎಲ್ ಪಿ ಜಿ ಕೊರತೆಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದಾರೆ ಎಂದು ಆರೋಪಿಸಿದ್ದಾರೆ.

ದೇಶದಲ್ಲಿ ಸರಿಸುಮಾರು 10 ರಿಂದ 15 ದಿನಗಳಿಗೆ ಆಗುವಷ್ಟು ಮಾತ್ರ 'ಬಫರ್ ಸ್ಟಾಕ್' ಇರುವುದರಿಂದ ಇರಾನ್-ಇಸ್ರೇಲ್ ಯುದ್ಧವು ಭಾರತದ ಸುಮಾರು ಶೇ. 90ರಷ್ಟು ಎಲ್ ಪಿ ಜಿ ಆಮದುಗಳಿಗೆ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಅಡ್ಡಿಪಡಿಸಿದೆ.

ಎಲ್ ಪಿ ಜಿ ಪೂರೈಕೆಯಲ್ಲಿ ಶೇ. 10-15ರಷ್ಟು ಕೊರತೆಯಿಂದಾಗಿ ದೇಶಾದ್ಯಂತ ಬಹುತೇಕ ಹೊಟೇಲ್ಗಳು ಬಂದ್ ಆಗಿದ್ದು ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯದಿಂದ ಹೆಚ್ಚಿದ ಎಲ್ ಪಿ ಜಿ ಕೊರತೆಯಿಂದಾಗಿ ಶೇ. 25-30ರಷ್ಟು ಮಾರಾಟ ಹೆಚ್ಚಾಗಿದೆ.

ಬಳಕೆ ಹೆಚ್ಚಳದಿಂದಾಗ ವಿದ್ಯುತ್ ಕೊರತೆ ಉಂಟಾಗುವ ಸಾರ್ಧಯತೆ ಹೆಚ್ಚಾಗಿದ್ದು, ಏಕಾಏಕಿ 'ಪೀಕ್ ಲೋಡ್' ಹೆಚ್ಚಳಕ್ಕೆ ಕಾರಣವಾಗಿ ಕೈಗಾರಿಕೆಗಳಿಗೆ ನೀಡಬೇಕಾದ ಗುಣಮಟ್ಟದ ವಿದ್ಯುತ್ನಲ್ಲಿ ವ್ಯತ್ಯಯ ಉಂಟಾಗಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೃಷಿ ಚಟುವಟಿಕೆಗಾಗಿ ರೈತರಿಗೆ ನೀಡುವ 7 ಗಂಟೆ ವಿದ್ಯುತ್ನಲ್ಲಿ 2 ಗಂಟೆ ಕಡಿತವಾದರೂ, ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗದೆ ಇಳುವರಿ ಶೇ. 20-30ರಷ್ಟು ಕುಸಿಯಬಹುದು.

ಕಾಂಗ್ರೆಸ್ ಸರ್ಕಾರ 2025ರ ಡಿಸೆಂಬರ್ನಲ್ಲಿ ಬೆಂಗಳೂರಿಗೆ ವಿದ್ಯುತ್ ಪೂರೈಸಲು ಯಲಹಂಕದಲ್ಲಿ 370 ಮೆಗಾವ್ಯಾಟ್ ಅನಿಲ ಆಧಾರಿತ ವಿದ್ಯುತ್ ಘಟಕವನ್ನು ಸ್ಥಾಪಿಸಲಾಗಿತ್ತು ಆದರೆ, ಹೆಚ್ಚುತ್ತಿರುವ ಎಲ್ ಪಿ ಜಿ ಅನಿಲ ಕೊರತೆಯಿಂದಾಗಿ ಯಲಹಂಕದಲ್ಲಿರುವ ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರಕ್ಕೆ 'ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ' ಅನಿಲ ಪೂರೈಕೆಯನ್ನು ಬಿಕ್ಕಟ್ಟಿನ ಆರಂಭದಲ್ಲಿ ಶೇ. 20ರಷ್ಟು ಅನಿಲ ಪೂರೈಕೆ ಕಡಿತಗೊಳಿಸಿತ್ತು, ಈಗ ಪೂರ್ಣ ಬಂದ್ ಮಾಡಲಾಗಿದೆ.

ಆಹಾರ ಬೆಲೆ ಏರಿಕೆಯಿಂದಾಗಿ 2026ರ ಫೆಬ್ರವರಿಯಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ. 3.21ಕ್ಕೆ ಏರಿಕೆಯಾಗಿದ್ದು ಈಗ ಎಲ್ ಪಿ ಜಿ ಕೊರತೆಯಿಂದ ಪರೋಕ್ಷವಾಗಿ ಬೆಲೆಗಳ ಹೆಚ್ಚಳದಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ.

ಚುನಾವಣೆ ಗೆಲುವಿಗೆ ಅಚ್ಚೆ ದಿನ್ ಎಂದು ಜನರಿಗೆ ನಾಮಹಾಕಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರ ಸಾಲು ಸಾಲು ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ.

2026 ಜನವರಿಯಲ್ಲಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ಬೆಲೆಯನ್ನು 111 ರೂ. ಹೆಚ್ಚಳ ಮಾಡಿ ಫೆಬ್ರವರಿ 2026ರ ಕೇಂದ್ರ ಬಜೆಟ್ ದಿನವೇ 49-50 ರೂ. ಹೆಚ್ಚಳ ಮಾಡಿ ಒಟ್ಟು ಈ ವರ್ಷದ ಮೊದಲ 3 ತಿಂಗಳಲ್ಲೇ ವಾಣಿಜ್ಯ ಬಳಕೆ ಎಲ್ ಪಿ ಜಿ ಮೇಲೆ 300 ರೂ. ಹಾಗೂ ಗೃಹ ಬಳಕೆ ಎಲ್ ಪಿ ಜಿ ಮೇಲೆ 60 ಹೆಚ್ಚಳ ಮಾಡಿ ಅಚ್ಚೆದಿನ್ ಎಂದು ಕೇಂದ್ರ ಮೋದಿ ಸರ್ಕಾರ ಬೊಗಳೆ ಬಿಡುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರತಿ ತಿಂಗಳು ಎಲ್ ಪಿ ಜಿ ಬೆಲೆಗಳನ್ನು ಹೆಚ್ಚಳ ಮಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ 7 ಮಾರ್ಚ್ 2026ರಲ್ಲಿ ಗೃಹ ಬಳಕೆ ಎಲ್ ಪಿ ಜಿ ಬೆಲೆಯನ್ನು 60 ರೂ. ಹಾಗೂ ವಾಣಿಜ್ಯ ಬಳಕೆ ಎಲ್ ಪಿ ಜಿ ಬೆಲೆಯನ್ನು 115 ರೂ. ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿದೆ. ವಿಶ್ವಗುರು ಎಂದು ಹೇಳಿ ಟ್ರಂಪ್ ಬೆದರಿಕೆಗೆ ಮಣಿದು ರಷ್ಯಾದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸಿ ಈಗ ಜಾಗತಿವಾಗಿ ನಡೆಯುತ್ತಿರುವ ಇರಾನ್-ಇಸ್ರೇಲ್ ಯುದ್ಧ ಪರಿಣಾಮ ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಯಿಂದಾಗಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು 100ರ ಗಡಿ ದಾಟಿಸಿ ಜನರಿಗೆ ಬೆಲೆ ಏರಿಕೆಯ ಶಾಕ್ ನೀಡುತ್ತಿದೆ ಕೇಂದ್ರ ಬಿಜೆಪಿ ಸರ್ಕಾರ.

ಜನವರಿ 2026ರಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ 111 ರೂ., ಫೆಬ್ರವರಿಯಲ್ಲಿ 49 ರೂ. ಹಾಗೂ ಮಾರ್ಚ್ ತಿಂಗಳಲ್ಲಿ ಗೃಹ ಬಳಕೆ ಸಿಲಿಂಡರ್ 60 ರೂ. ಮತ್ತು ವಾಣಿಜ್ಯ ಸಿಲಿಂಡರ್ 115 ರೂ. ಹೆಚ್ಚಳವಾಗಿದೆ. ಗೃಹ ಬಳಕೆ ಸಿಲಿಂಡರ್ 915 ರೂ. ತಲುಪಿದ್ದು ಕೇಂದ್ರ ಬಿಜೆಪಿ ಸರ್ಕಾರದ ನಿರಂತರ ಬೆಲೆ ಏರಿಕೆಯಿಂದ 1,000 ರೂ. ಗಡಿ ದಾಟಲಿದೆ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಮನೆ ಗೃಹಣಿಯರಿಗೆ ನೀಡುತ್ತಿರುವ 2,000 ರೂ. ಹಣವು ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ಸಂಕಷ್ಟದಿಂದ ಪಾರಾಗಲು ನೆರವಾಗಿದೆ. ಏಪ್ರೀಲ್ 2025ರಲ್ಲಿ ಸಿಲಿಂಡರ್ ಬೆಲೆಯನ್ನು 50 ರೂ. ಹೆಚ್ಚಿಸಿ ಜನರಿಗೆ ಗಾಯದ ಮೇಲೆ ಬರೆ ಎಳೆದು ದೇಶದ ಜನರ ಖರೀದಿಸುವ ಸಾಮರ್ಥ್ಯ ಕುಗ್ಗಿಸಿದ ಕೇಂದ್ರ ಬಿಜೆಪಿ ಸರ್ಕಾರ ಸಿಲಿಂಡರ್ ಮಾತ್ರವಲ್ಲ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಹೆಚ್ಚಿಸಿ ದೇಶದ ಜನರ ಬದುಕನ್ನೇ ನರಕ ಮಾಡಿದೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಅವರು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande