ವಿಜಯಪುರದಲ್ಲಿ ನೀರಿನ ಚಿಲುಮೆ: ಅರಕೇರಿ ರೈತನ ಜಮೀನಿನಲ್ಲಿ ಬೋರ್ವೆಲ್ನಲ್ಲಿ ಬಾನೆತ್ತರಕ್ಕೆ ನೀರು
ವಿಜಯಪುರ, 13 ಮಾರ್ಚ್ (ಹಿ.ಸ.) ಆ್ಯಂಕರ್ : ಹಿಂದೊಂದು ಕಾಲದಲ್ಲಿ ಬರಪೀಡಿತ ಜಿಲ್ಲೆ ಎಂದು ಗುರುತಿಸಿಕೊಂಡಿದ್ದ ವಿಜಯಪುರದಲ್ಲಿ ಈಗ ನೀರಿನ ಸಮೃದ್ಧಿ ಹೆಚ್ಚುತ್ತಿರುವುದು ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿ
ಬೋರ್ ವೆಲ್


ವಿಜಯಪುರ, 13 ಮಾರ್ಚ್ (ಹಿ.ಸ.)

ಆ್ಯಂಕರ್ : ಹಿಂದೊಂದು ಕಾಲದಲ್ಲಿ ಬರಪೀಡಿತ ಜಿಲ್ಲೆ ಎಂದು ಗುರುತಿಸಿಕೊಂಡಿದ್ದ ವಿಜಯಪುರದಲ್ಲಿ ಈಗ ನೀರಿನ ಸಮೃದ್ಧಿ ಹೆಚ್ಚುತ್ತಿರುವುದು ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಒಂದಾನೊಂದು ಕಾಲದಲ್ಲಿ “ವಿಜಯಪುರ ಎಂದರೆ ಬರ – ಬರ ಎಂದರೆ ವಿಜಯಪುರ” ಎಂಬ ಮಾತು ಸಾಮಾನ್ಯವಾಗಿತ್ತು. ಸಾವಿರಾರು ಅಡಿ ಆಳಕ್ಕೆ ಬೋರ್ವೆಲ್ ಕೊರೆಸಿದರೂ ನೀರು ಸಿಗದೇ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದ ಪರಿಸ್ಥಿತಿ ಎದುರಾಗುತ್ತಿತ್ತು.

ಆದರೆ ಕಳೆದ ಕೆಲವು ವರ್ಷಗಳಲ್ಲಿ ಕೈಗೊಂಡ ವಿವಿಧ ನೀರಾವರಿ ಯೋಜನೆಗಳು ಹಾಗೂ ಕೆರೆ ತುಂಬಿಸುವ ಯೋಜನೆಗಳ ಪರಿಣಾಮವಾಗಿ ಜಿಲ್ಲೆಯ ಪರಿಸ್ಥಿತಿ ಕ್ರಮೇಣ ಬದಲಾಗುತ್ತಿದೆ. ನೀರಿನ ಲಭ್ಯತೆ ಹೆಚ್ಚುತ್ತಿರುವುದರಿಂದ ಕೃಷಿ ಚಟುವಟಿಕೆಗಳು ವಿಸ್ತರಿಸುತ್ತಿದ್ದು, ರೈತರ ಮುಖದಲ್ಲಿ ಸಂತಸದ ನಗು ಮೂಡುತ್ತಿದೆ.

ಇದಕ್ಕೆ ತಾಜಾ ಉದಾಹರಣೆಯಾಗಿ ಬಬಲೇಶ್ವರ ಕ್ಷೇತ್ರದ ಅರಕೇರಿ ಗ್ರಾಮದ ರೈತ ಅಮಸಿದ್ದ ಭೀಮಸಿಗೌಡ ಬಿರಾದಾರ ಅವರ ಜಮೀನಿನಲ್ಲಿ ಬೋರ್ವೆಲ್ ಕೊರೆಸುವ ವೇಳೆ ಬಾನೆತ್ತರಕ್ಕೆ ನೀರು ಚಿಮ್ಮಿರುವ ಘಟನೆ ಗಮನ ಸೆಳೆದಿದೆ. ಬೋರ್ವೆಲ್ನಲ್ಲಿ ನೀರು ಹೊರಬಂದ ದೃಶ್ಯ ರೈತ ಕುಟುಂಬದಲ್ಲಿ ಅಪಾರ ಸಂತಸ ತಂದಿದೆ.

ಒಂದಾನೊಂದು ಕಾಲದಲ್ಲಿ ಕನಸಾಗಿದ್ದ ಮಲೆನಾಡು ಬೆಳೆಗಳನ್ನೂ ಈಗ ಜಿಲ್ಲೆಯ ಹಲವೆಡೆ ರೈತರು ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ನೀರಾವರಿ ವ್ಯವಸ್ಥೆ ಬಲಪಡುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಮೂಡುತ್ತಿದ್ದು, ಬಸವನ ನಾಡಿನ ಕೀರ್ತಿ ಮತ್ತಷ್ಟು ವ್ಯಾಪಿಸುತ್ತಿದೆ.

ಅರಕೇರಿ ಗ್ರಾಮದ ರೈತ ಅಮಸಿದ್ದ ಭೀಮಸಿಗೌಡ ಬಿರಾದಾರ ಸೇರಿದಂತೆ ಜಿಲ್ಲೆಯ ರೈತರ ಕೃಷಿ ಚಟುವಟಿಕೆಗಳು ಇನ್ನಷ್ಟು ಯಶಸ್ವಿಯಾಗಲಿ ಎಂದು ಅವರು ಶುಭ ಹಾರೈಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande