ಬಳ್ಳಾರಿ :ಸನ್ನಡತೆ ಆಧಾರದಲ್ಲಿ ಮೂವರು ಕೈದಿಗಳ ಬಿಡುಗಡೆ
ಬಳ್ಳಾರಿ, 13 ಮಾರ್ಚ್ (ಹಿ.ಸ.) ಆ್ಯಂಕರ್: ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ಆದೇಶ ನೀಡಿದ್ದು, ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಮೂವರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾ
ಬಳ್ಳಾರಿ :  ಮೂವರು ಬಿಡುಗಡೆ


ಬಳ್ಳಾರಿ, 13 ಮಾರ್ಚ್ (ಹಿ.ಸ.)

ಆ್ಯಂಕರ್: ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ಆದೇಶ ನೀಡಿದ್ದು, ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಮೂವರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಹೊಸಮನಿ, ಜೈಲು ಅಧೀಕ್ಷಕಿ ಲತಾ ಅವರು ಬಂಧಿಗಳಾಗಿದ್ದ ಹೆಚ್.ಕೆ. ರವಿಕುಮಾರ, ಜೆ.ಎಲ್. ಮೋಹನಕುಮಾರ, ಮಂಜಾನಾಯ್ಕ ಅವರುಗಳನ್ನು ಬಿಡುಗಡೆ ಮಾಡಿದ್ದಾರೆ.

ಬಂಧಮುಕ್ತರಾದ ಹೆಚ್.ಕೆ. ರವಿಕುಮಾರ, ಜೆ.ಎಲ್. ಮೋಹನಕುಮಾರ, ಮಂಜಾನಾಯ್ಕ ಅವರು, ಸಿಟ್ಟು, ಆಕ್ರೋಶ, ದ್ವೇಷದ ಕಾರಣ ಜೈಲು ಸೇರಿದ್ದೆವು. ಸಮಾಜಕ್ಕೆ ಆದರ್ಶದ, ಸೇವಾ ಮನೋಭಾವದ ಜೀವನ ನಡೆಸಲು ನಾವುಗಳು ಉತ್ಸುಕರಾಗಿದ್ದೇವೆ. ನಮ್ಮ ಸನ್ನಡತೆಯನ್ನು ಪರಿಗಣಿಸಿ, ನಮ್ಮನ್ನು ಬಿಡುಗಡೆ ಮಾಡಲು ನೆರವಾದ ಎಲ್ಲಾ ಅಧಿಕಾರಿಗಳಿಗೂ ತುಂಬು ಹೃದಯದ ಧನ್ಯವಾದಗಳು ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande