ಮಾ 16 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಕೊಪ್ಪಳ , 13 ಮಾರ್ಚ್ (ಹಿ.ಸ.) ಆ್ಯಂಕರ್ : ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110/33/11ಕೆವಿ ಹಿರೇಸಿಂಧೋಗಿ ಉಪಕೇಂದ್ರಕ್ಕೆ ಒಳಪಡುವ ವಿವಿಧ ಫೀಡರ್ಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯ ನಿಮಿತ್ತ ಮಾರ್ಚ್ 16 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವ
ಮಾ 16 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ


ಕೊಪ್ಪಳ , 13 ಮಾರ್ಚ್ (ಹಿ.ಸ.)

ಆ್ಯಂಕರ್ : ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110/33/11ಕೆವಿ ಹಿರೇಸಿಂಧೋಗಿ ಉಪಕೇಂದ್ರಕ್ಕೆ ಒಳಪಡುವ ವಿವಿಧ ಫೀಡರ್ಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯ ನಿಮಿತ್ತ ಮಾರ್ಚ್ 16 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಹಿರೇಸಿಂಧೋಗಿ ಉಪಕೇಂದ್ರದ ಫೀಡರ್ಗಳಾದ ಎಫ್-1 ಬಿಕನಳ್ಳಿ ಎನ್ಜೆವೈ, ಎಫ್-2 ಹಂದ್ರಾಳ, ಎಫ್-3 ಗುನ್ನಳ್ಳಿ ಎನ್ಜೆವೈ, ಎಫ್-4 ವದಗನಾಳ, ಎಫ್-5 ಕೋಳೂರು, ಎಫ್-6 ಚಿಕ್ಕಸಿಂದೋಗಿ, ಎಫ್-7 ಬೂದಿಹಾಳ, ಎಫ್-8 ಗೊಂಡಬಾಳ ಎಮ್.ಐ, ಎಫ್-9 ಗೊಂಡಬಾಳ, ಎಫ್-10 ಹಿರೇಸಿಂಧೋಗಿ ಹಾಗೂ ಎಫ್-11 ಮೈನಳ್ಳಿ ಫೀಡರ್ಗಳ ವ್ಯಾಪ್ತಿಗೆ ಒಳಪಡುವ ಬಿಕನಳ್ಳಿ, ಹಂದ್ರಾಳ, ಗುನ್ನಳ್ಳಿ, ಕೋಳೂರು, ಚಿಕ್ಕಸಿಂದೋಗಿ, ಬೂದಿಹಾಳ, ಗೊಂಡಬಾಳ ಪಂಪ್ಸೆಟ್, ಹಿರೇಸಿಂಧೋಗಿ ಹಾಗೂ ಮೈನಳ್ಳಿ, ಮುಂಡರಗಿ, ಹ್ಯಾಟಿ ಗ್ರಾಮಗಳಲ್ಲಿ ಮೆಳ್ಳಿಕೇರಿ ವ್ಯಾಪ್ತಿಯ ಪಂಪ್ಸೆಟ್ ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.

ಕಾಮಗಾರಿಯು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಂಡಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ವಿಧದ ವಿದ್ಯುತ್ ದುರಸ್ತಿ ಅಥವಾ ಸಂಬಂಧಿತ ಕೆಲಸಗಳನ್ನು ಕೈಗೊಳ್ಳಬಾರದೆಂದು ಸೂಚಿಸಲಾಗಿದೆ. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande