ಸಿಲೆಂಡರ್ ಕೊರತೆ : ಹೋಟಲ್-ಖಾನಾವಳಿಯತ್ತ ಕಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳು
ಕೊಪ್ಪಳ, 13 ಮಾರ್ಚ್ (ಹಿ.ಸ.) ಆ್ಯಂಕರ್: ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್) ವೈದ್ಯಕೀಯ ವಿದ್ಯಾರ್ಥಿಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್‌ ಕೊರತೆ ಉಂಟಾಗಿದ್ದು ಇಂದು ಮಧ್ಯಾಹ್ನ ಎಲ್ಲರೂ ಊಟಕ್ಕೆ ಪರದಾಡಿ, ಹಾಸ್ಟಲ್ ಹೊರಗಡೆ ಹೋಟೆಲ್ ಮತ್ತು ಖಾನಾವಳಿಗೆ ಹೋಗಿ ಊಟ ಮಾಡಿದ್ದಾರೆ
ಸಿಲೆಂಡರ್ ಕೊರತೆ : ಹೋಟಲ್-ಖಾನಾವಳಿಯತ್ತ ಕಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳು


ಕೊಪ್ಪಳ, 13 ಮಾರ್ಚ್ (ಹಿ.ಸ.)

ಆ್ಯಂಕರ್: ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್) ವೈದ್ಯಕೀಯ ವಿದ್ಯಾರ್ಥಿಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್‌

ಕೊರತೆ ಉಂಟಾಗಿದ್ದು ಇಂದು ಮಧ್ಯಾಹ್ನ ಎಲ್ಲರೂ ಊಟಕ್ಕೆ ಪರದಾಡಿ, ಹಾಸ್ಟಲ್ ಹೊರಗಡೆ ಹೋಟೆಲ್ ಮತ್ತು ಖಾನಾವಳಿಗೆ ಹೋಗಿ ಊಟ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ನೆರವಿನಿಂದ ಸಿಲೆಂಡರ್ ಪೂರೈಕೆಯಾಗಿ, ಸಮಸ್ಯೆ ಪರಿಹಾರವಾಗಿದೆ.

ಕೊಪ್ಪಳದ ಕಿಮ್ಸ್ ವಸತಿನಿಲಯದಲ್ಲಿ 360 ವೈದ್ಯಕೀಯ ವಿದ್ಯಾರ್ಥಿಗಳಿದ್ದಾರೆ.

ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆ ಆಗಿರುವ ಕಾರಣ ಅಡುಗೆಕೋಣೆ ಬಂದ್ ಮಾಡಲಾಯಿತು. ಅಡಿಗೆ ಮಾಡಲಾಗಿಲ್ಲ. ಬೆಳಗಿನ ಉಪಹಾರಕ್ಕೆ ಮಾತ್ರವೇ

ಸಿಲಿಂಡರ್ ಲಭ್ಯವಿದ್ದು, ಉಪಹಾರವನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿತ್ತು.

ಕಿಮ್ಸ್ ನಿರ್ದೇಶಕ ಡಾ. ವಿಜಯನಾಥ ಇಟಗಿ ಅವರು, ಸಿಲೆಂಡರ್ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಪರಿಹರಿಸಲಾಗಿದೆ. ಸಿಲೆಂಡರ್ ಪೂರೈಕೆ ಪ್ರಾರಂಭವಾಗಿದೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande