
ಬಾಗಲಕೋಟೆ, 13 ಮಾರ್ಚ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕೊಣ್ಣೂರು ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಖ್ಯಾತ ವೈದ್ಯ ಅಸ್ಕಿ ಕುಟುಂಬ ಪ್ರಕಟಣೆ ಮೂಲಕ ತಿಳಿಸಿದರು.
“ಕಾಯಕವೇ ಕೈಲಾಸ – ದಾಸೋಹವೇ ಧರ್ಮ” ಎಂಬ ಮಹತ್ವದ ಸಂದೇಶದೊಂದಿಗೆ ಕೊಣ್ಣೂರು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು 22-03-2026 ಭಾನುವಾರದಂದು ಆಯೋಜಿಸಲಾಗಿದೆ.
ನಿಷ್ಠೆಯಿಂದ ಮಾಡುವ ಕೆಲಸ ಮತ್ತು ಸಮಾಜ ಸೇವೆಯೇ ನಿಜವಾದ ದೇವರ ಪೂಜೆ ಎಂಬ ತತ್ವವನ್ನು ಸಾರುವ ಈ ಶಿಬಿರವನ್ನು ಅಸ್ಕಿ ಕುಟುಂಬದ ಹಿರಿಯ ಸುಪುತ್ರರು ಆಯೋಜಿಸಿದ್ದಾರೆ.
ಅಮೆರಿಕಾದಲ್ಲಿ ನೆಲೆಸಿದ್ದರೂ ತಮ್ಮ ಸ್ವಗ್ರಾಮದೊಂದಿಗೆ ಇರುವ ನಂಟು ಮತ್ತು ಸೇವಾ ಮನೋಭಾವದಿಂದ ಗ್ರಾಮೀಣ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಮಹತ್ವದ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ರೈತರು ಮತ್ತು ರೈತ ಕುಟುಂಬಗಳಿಗೆ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಈ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹೊಸ ಸಂವತ್ಸರದ ಮೊದಲ ದಿನವಾದ ಯುಗಾದಿಯ ಪವಿತ್ರ ಸಂದರ್ಭದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande