
ಕೊಪ್ಪಳ, 13 ಮಾರ್ಚ್ (ಹಿ.ಸ.):
ಆ್ಯಂಕರ್:
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯ ಹಾಗೂ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು ಹಾಗೂ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಕೊಪ್ಪಳ (ಜಿಟಿಟಿಸಿ) ಕೊಪ್ಪಳ ಇವರಗಳ ಸಂಯುಕ್ತ ಆಶ್ರಯದಲ್ಲಿ ಪೋಕ್ಸೋ, ಸೈಬರ್ ಅಪರಾಧ, ಪ್ರಥಮ ಮಾಹಿತಿ ವರದಿ ಹಾಗೂ ಕಾರ್ಮಿಕ ಸಂಹಿತೆಗಳ ಕುರಿತು ಉಚಿತ ಕಾನೂನು ನೆರವು ಕಾರ್ಯಕ್ರಮ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಶುಕ್ರವಾರ ನಡೆಯಿತು.
ಕಾನೂನು ವಿದ್ಯಾರ್ಥಿಗಳಾದ ಕುಮಾರ್ ಸಂಕಲ್ಪ. ಎಂ ಅವರು, ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಅವಶ್ಯಕತೆ ತುಂಬಾ ಅಗತ್ಯವಾಗಿರುತ್ತದೆ. ಪ್ರಮುಖವಾಗಿ ಪೋಕ್ಸೋ ಅಪರಾಧ ಯಥೇಚ್ಛವಾಗಿ ನಡೆಯಲ್ಪಡುತ್ತದೆ ಇಂತಹ ಪ್ರಕರಣಗಳಲ್ಲಿ ನಿಮ್ಮಂತ ಯುವ ಪೀಳಿಗೆಗಳು ತೊಡಗುವುದು ಅಧಿಕವಾಗಿರುತ್ತದೆ. ಗ್ರಾಹಕರು ಇಂದಿನ ದಿನಮಾನಗಳಲ್ಲಿ ಸಾಕಷ್ಟು ಮೋಸವಾಗುವುದರಿಂದ ಸಂರಕ್ಷಿಸುವುದಕ್ಕಾಗಿ 2019ರಲ್ಲಿ ಅದಿನಿಯಮವನ್ನು ಹೊಸ ಆಯಾಮಗಳೊಂದಿಗೆ ಜಾರಿಗೆ ತರಲಾಯಿತು ಎಂದರು.
ಕುಮಾರ್ ಶ್ರೀನಿವಾಸ್ ಮಾದಗುಂಡಿ ಅವರು, ನಾಲ್ಕು ಪ್ರಮುಖ ಕಾರ್ಮಿಕರ ಸಂಹಿತೆಗಳು ಜಾರಿಗೆ ಬಂದಿದ್ದು ಇದು ಸಾಕಷ್ಟು ರೀತಿಯಲ್ಲಿ ಕಾರ್ಮಿಕರ ಹಕ್ಕು, ಸಂರಕ್ಷಣೆ, ವೇತನ ಮುಂತಾದವುಗಳ ಕುರಿತು ಅನುಕೂಲಗಳನ್ನು ಒದಗಿಸಲ್ಪಟ್ಟಿವೆ. ಯಾವುದೇ ಪ್ರದೇಶದಲ್ಲಿ ಅಥವಾ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಟೆ ತಕರಾರು ಗಲಾಟೆಗಳು ಪ್ರಕರಣಗಳು ನಡೆದಾಗ ಅದರ ಕುರಿತು ಯಾವುದೇ ಭಯವಿಲ್ಲದೆ ಪೊಲೀಸ್ ಠಾಣಾಧಿಕಾರಿಗೆ ಪ್ರಥಮ ಮಾಹಿತಿಯನ್ನು ನೀಡುವದು ಪ್ರಮುಖವಾಗಿರುತ್ತದೆ ಎಂದರು.
ಡಿಟಿಟಿಸಿ ಪ್ರಾಚಾರ್ಯರದ ಮೌನೇಶ್ ಅವರು ಅಧ್ಯಕ್ಷತೆವಹಿಸಿದ್ದರು. ರಾಷ್ಟ್ರೋತ್ಥಾನ ಪರಿಷತ್ ಸಂಯೋಜಕರಾದ ಶಶಿಧರ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರದ ಪ್ರಭುರವರು
ಕಾರ್ಯಕ್ರಮ ನಿರೂಪಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್