ಅಡುಗೆ ಗ್ಯಾಸ್ ಕೊರತೆ ಹಿಂದೆ ರಾಜ್ಯ ಸರ್ಕಾರ ಗೋವಿಂದಗೌಡ್ರ ಶಂಕೆ.
ಗದಗ, 12 ಮಾರ್ಚ್ (ಹಿ.ಸ.) ಆ್ಯಂಕರ್:- ಮಧ್ಯ ಪ್ರಾಚ್ಯದಲ್ಲಿ ಯುದ್ಧ ನಡೆದಿರುವುದರಿಂದ ವಿಶ್ವದ್ಯಂತ ಇಂಧನ ಹಾಗೂ ಅಡುಗೆ ಅನಿಲಗಳ ಕೊರತೆ ಸ್ವಾಭಾವಿಕವಾಗಿದ್ದು, ಆದರೂ ಕೂಡ ದೇಶದಲ್ಲಿ ಸಮತೋಲನವನ್ನು ಕಾಯ್ದುಕೊಂಡು ಇಂಧನ ಹಾಗೂ ಅಡುಗೆ ಅನಿಲಗಳನ್ನು ಪೂರೈಸುತ್ತಿರುವುದು ಕೇಂದ್ರ ಸರ್ಕಾರದ ಕಾರ್ಯ ಶ್ಲಾಘನೀಯ.
ಫೋಟೋ


ಗದಗ, 12 ಮಾರ್ಚ್ (ಹಿ.ಸ.)

ಆ್ಯಂಕರ್:- ಮಧ್ಯ ಪ್ರಾಚ್ಯದಲ್ಲಿ ಯುದ್ಧ ನಡೆದಿರುವುದರಿಂದ ವಿಶ್ವದ್ಯಂತ ಇಂಧನ ಹಾಗೂ ಅಡುಗೆ ಅನಿಲಗಳ ಕೊರತೆ ಸ್ವಾಭಾವಿಕವಾಗಿದ್ದು, ಆದರೂ ಕೂಡ ದೇಶದಲ್ಲಿ ಸಮತೋಲನವನ್ನು ಕಾಯ್ದುಕೊಂಡು ಇಂಧನ ಹಾಗೂ ಅಡುಗೆ ಅನಿಲಗಳನ್ನು ಪೂರೈಸುತ್ತಿರುವುದು ಕೇಂದ್ರ ಸರ್ಕಾರದ ಕಾರ್ಯ ಶ್ಲಾಘನೀಯ.

ಯುದ್ಧದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಹಾಗೂ ಅಡಿಗೆ ಅನಿಲಗಳ ಬೆಲೆ ಏರಿಕೆಯಿಂದಾಗಿ ಅಡುಗೆ ಅನಿಲಗಳ ಬೆಲೆ ಏರಿಕೆ ಆಗಿದ್ದು ಇದನ್ನು ವಿರೋಧಿಸಿ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡುತ್ತಿರುವುದು ಹಾಸ್ಯಾಸ್ಪದ ಹಾಗೂ ಅಂತರಾಷ್ಟ್ರೀಯ ಸಮಸ್ಯೆಯಿಂದ ಬೆಲೆ ಏರಿಕೆ ಆಗಿದ್ದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿರುವ ಸಿದ್ದರಾಮಯ್ಯ ಸರಕಾರಕ್ಕೆ ಇದು ತಿರುಗುಬಾಣವಾಗಲಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಮುಖ್ಯಮಂತ್ರಿಗಳ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಿಂದೆ ಜಿಎಸ್ಟಿ ಕಡಿಮೆ ಮಾಡಿದಾಗ ಎಲ್ಲ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕಾಗಿದ್ದ ಈ ಸಿದ್ದರಾಮಯ್ಯ ಸರ್ಕಾರ ವಿನಾಕಾರಣ ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ ಒಂದು ರೂಪಾಯಿ ಹಾಗೂ ತುಪ್ಪದ ದರವನ್ನು ಕೆಜಿಗೆ 90 ರೂಪಾಯಿಗಳನ್ನು ಏರಿಕೆ ಮಾಡಿ ಜನರಿಗೆ ತಲುಪ ಬೇಕಾಗಿದ್ದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಈಗ ಪೆಟ್ರೋಲಿಯಂ ಬೆಲೆಗಳ ಏರಿಕೆ ವಿರುದ್ಧ ಟೀಕೆ ಮಾಡುವುದು ಹೋರಾಟ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ವೆಂಕನಗೌಡ ಆರ್ ಗೋವಿಂದಗೌಡ್ರ ಸಿದ್ದರಾಮಯ್ಯ ಸರ್ಕಾರದ ಈ ಪ್ರತಿಭಟನೆಯನ್ನು ಟೀಕಿಸಿದ್ದಾರೆ.

ಈ ಗ್ಯಾಸ್ ಕೊರತೆಯ ಹಿಂದೆ ರಾಜ್ಯ ಸರ್ಕಾರದ ಕೈವಾಡ ಎದ್ದು ಕಾಣುತ್ತಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ ದೇಶದಲ್ಲಿ ಎಲ್ಲೂ ಇಲ್ಲದ ಗ್ಯಾಸ್ ಕೊರತೆ ಕೇವಲ ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಮಾತ್ರ ಅಡುಗೆ ಆಗಿರುವುದು ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ ಎಂದು ವೀರನಗೌಡ ನಾಡಗೌಡ್ರ, ಬಸವರಾಜ ಅಪ್ಪಣ್ಣವರ, ಜಿಕೆ ಕೊಳ್ಳಿಮಠ, ಪ್ರಫುಲ್ ಪುಣೆಕರ, ಸಂತೋಷ್ ಪಾಟೀಲ, ಪ್ರಭುರಾಜ್ ಗೌಡ ಪಾಟೀಲ, ಅಭಿಷೇಕ್ ದೇಸಾಯಿ, ಶ್ರೀಮತಿ ಮಂಜುಳಾ ಮೇಟಿ, ರಾಜಣ್ಣ ಸಂಶಿ, ಮುತ್ತು ಬಡಿಗೇರ್ ರಾಜ್ಯ ಸರಕಾರದ ಈ ಜನ ವಿರೋಧಿ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande