ಗವಿಮಠದ ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯರಾಧನೆ
ಕೊಪ್ಪಳ, 12 ಮಾರ್ಚ್ (ಹಿ.ಸ.) ಆ್ಯಂಕರ್: ಸಂಸ್ಥಾನ ಶ್ರೀ ಗವಿಮಠದ ಮ ನಿ ಪ್ರ ಜ ಲಿಂ ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯಾರಾಧನೆಯು ಗುರುವಾರ ನಡೆಯಿತು. ಗುರುವಾರ ಬೆಳಿಗ್ಗೆ 6:00 ಗಂಟೆಗೆ ಪರಮ ಪೂಜ್ಯ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಶ್ರೀ ಮಳೆಮಲ್ಲೇಶ್ವರ ದೇವಸ್ಥಾ
ಗವಿಮಠದ ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯರಾಧನೆ


ಗವಿಮಠದ ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯರಾಧನೆ


ಗವಿಮಠದ ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯರಾಧನೆ


ಗವಿಮಠದ ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯರಾಧನೆ


ಕೊಪ್ಪಳ, 12 ಮಾರ್ಚ್ (ಹಿ.ಸ.)

ಆ್ಯಂಕರ್: ಸಂಸ್ಥಾನ ಶ್ರೀ ಗವಿಮಠದ ಮ ನಿ ಪ್ರ ಜ ಲಿಂ ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯಾರಾಧನೆಯು ಗುರುವಾರ ನಡೆಯಿತು.

ಗುರುವಾರ ಬೆಳಿಗ್ಗೆ 6:00 ಗಂಟೆಗೆ ಪರಮ ಪೂಜ್ಯ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭವಾಗಿ ಅಶೋಕ ಸರ್ಕಲ್ ಹಾಗೂ ಗಡಿಯಾರ ಕಂಬದ ಮುಖಾಂತರ ಶ್ರೀ ಗವಿಮಠಕ್ಕೆ ತಲುಪಲಾಯಿತು.

ಬಳಗಾನೂರಿನ ಚಿಕೇನಕೊಪ್ಪ ಶ್ರೀ ಶಿವಶಾಂತವೀರ ಶರಣರು, ಹೂವಿನಹಡಗಲಿಯ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು, ಕಡಲಬಾಳಿನ ಮರಿಶಾಂತವೀರ ಮಹಾಸ್ವಾಮಿಗಳು, ಬಿಸರಳ್ಳಿಯ ಶಿವಶಾಂತವೀರ ಮಹಾಸ್ವಾಮಿಗಳು, ಚಿಕ್ಕಮ್ಯಾಗೇರಿ ಮೇಲುಗದ್ದುಗೆ ಹಿರೇಮಠದ ಗುರುಶಾಂತವೀರ ಸ್ವಾಮಿಗಳು ಹಾಗೂ ಭಕ್ತಾಧಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪಾದಯಾತ್ರೆಯ ನಂತರ ಶ್ರೀ ಗವಿಸಿದ್ದೇಶ್ವರ ಕತೃ ಗದ್ದುಗೆ ಹಾಗೂ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಗದ್ದುಗೆಯ ದರ್ಶನ ಪಡೆದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande