‘ವಚನ ಕಲ್ಯಾಣ'ಕ್ಕೆ ಕಲಾವಿದರ ಆಯ್ಕೆ: ಅರ್ಜಿ ಆಹ್ವಾನ
ಬಳ್ಳಾರಿ, 12 ಮಾರ್ಚ್ (ಹಿ.ಸ.) ಆ್ಯಂಕರ್: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ವಚನ ಕಲ್ಯಾಣ'' ಎಂಬ ಬೃಹತ್ ನಾಟಕವನ್ನು ಸಿದ್ಧಪಡಿಸಿ ರಾಜ್ಯಾದ್ಯಂತ ಪ್ರದರ್ಶಿಸಲು ಉದ್ದೇಶಿಸಿದ್ದು, ಈ ನಾಟಕದಲ್ಲಿ ಅಭಿನಯಿಸಲು ಆಸಕ್ತಿಯುಳ್ಳ ನುರಿತ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ:
‘ವಚನ ಕಲ್ಯಾಣ'ಕ್ಕೆ ಕಲಾವಿದರ ಆಯ್ಕೆ: ಅರ್ಜಿ ಆಹ್ವಾನ


ಬಳ್ಳಾರಿ, 12 ಮಾರ್ಚ್ (ಹಿ.ಸ.)

ಆ್ಯಂಕರ್: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ವಚನ ಕಲ್ಯಾಣ' ಎಂಬ ಬೃಹತ್ ನಾಟಕವನ್ನು ಸಿದ್ಧಪಡಿಸಿ ರಾಜ್ಯಾದ್ಯಂತ ಪ್ರದರ್ಶಿಸಲು ಉದ್ದೇಶಿಸಿದ್ದು, ಈ ನಾಟಕದಲ್ಲಿ ಅಭಿನಯಿಸಲು ಆಸಕ್ತಿಯುಳ್ಳ ನುರಿತ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ.

ಅರ್ಹತೆ:

18 ರಿಂದ 40 ವರ್ಷದೊಳಗಿನ ಮಹಿಳೆ ಮತ್ತು ಪುರುಷ ಕಲಾವಿದರು ಅರ್ಜಿ ಸಲ್ಲಿಸಬಹುದು. ಅಭಿನಯದಲ್ಲಿ ತರಬೇತಿ ಪಡೆದವರಿಗೆ ಹಾಗೂ ರಂಗಭೂಮಿಯಲ್ಲಿ ಅನುಭವ ಇರುವ ಕಲಾವಿದರಿಗೆ ಮೊದಲ ಆದ್ಯತೆ ನೀಡಲಾಗುವುದು.

ಆಯ್ಕೆಯಾದ ಅಭಿನಯಾರ್ಥಿಗಳು ಮೂರು ತಿಂಗಳ ಕಾಲ ಪೂರ್ಣಾವಧಿಯಾಗಿ ತರಬೇತಿ ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಆಯ್ಕೆಯಾದ ಕಲಾವಿದರಿಗೆ ಮಾಸಿಕ ಗೌರವಧನ ಹಾಗೂ ಊಟ-ವಸತಿ ವ್ಯವಸ್ಥೆಯನ್ನು ಇಲಾಖೆಯ ವತಿಯಿಂದ ಮಾಡಲಾಗುವುದು.

ಆಸಕ್ತರು ತಮ್ಮ ಪೂರ್ಣ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಮಾರ್ಚ್ 20 ರೊಳಗೆ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು.

ವಿಳಾಸ: ಕಾರ್ಯದರ್ಶಿಗಳು, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು - 560056.

ಇಲ್ಲವೇ ಅರ್ಜಿಗಳನ್ನು ಖುದ್ದಾಗಿ, ಅಂಚೆ ಮೂಲಕ ಅಥವಾ ಇಮೇಲ್ ಐಡಿ: kanakaresearchcentre@gmail.com ಗೆ ಕಳುಹಿಸಬಹುದಾಗಿದೆ. ಅರ್ಜಿಯ ನಮೂನೆಯನ್ನು ಇಲಾಖೆಯ ವೆಬ್ಸೈಟ್ kannadasiri.karnataka.gov.in ನಿಂದ ಪಡೆಯಬಹುದು.

ಸೂಚನೆ: ಸಂದರ್ಶನಕ್ಕೆ ಹಾಜರಾಗುವ ಕಲಾವಿದರಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆಯನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ನಾಟಕದ ನಿರ್ದೇಶಕ ಸಿ.ಬಸವಲಿಂಗಯ್ಯ (ಮೊ.94485 38620) ಅವರನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande