ಎಸ್ಐಆರ್ ಬೂತ್ ಮ್ಯಾಪಿಂಗ್ ಲೋಪ-ತಿದ್ದುಪಡಿಗೆ ಪಾಲಿಕೆ ಸದಸ್ಯ ಆಗ್ರಹ
ವಿಜಯಪುರ, 12 ಮಾರ್ಚ್ (ಹಿ.ಸ.) ಆ್ಯಂಕರ್ : ವಿಜಯಪುರನ ನಗರದ ವಾರ್ಡ್ ನಂ. 9ರ ಅರಿಹಂತ ಕಾಲೋನಿಯ ಹನುಮಾನ ಮಂದಿರದಲ್ಲಿ ನಡೆದ ಎಸ್ಐಆರ್ 108ನೇ ಬೂತ್ ಮ್ಯಾಪಿಂಗ್ ಕಾರ್ಯದ ವೇಳೆ ಕೆಲವು ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ತಕ್ಷಣ ತಿದ್ದುಪಡಿಗೆ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಸದಸ್ಯ
ಎಸ್ಐಆರ್ ಬೂತ್ ಮ್ಯಾಪಿಂಗ್ ಲೋಪ-ತಿದ್ದುಪಡಿಗೆ ಪಾಲಿಕೆ ಸದಸ್ಯ ಆಗ್ರಹ


ವಿಜಯಪುರ, 12 ಮಾರ್ಚ್ (ಹಿ.ಸ.)

ಆ್ಯಂಕರ್ : ವಿಜಯಪುರನ ನಗರದ ವಾರ್ಡ್ ನಂ. 9ರ ಅರಿಹಂತ ಕಾಲೋನಿಯ ಹನುಮಾನ ಮಂದಿರದಲ್ಲಿ ನಡೆದ ಎಸ್ಐಆರ್ 108ನೇ ಬೂತ್ ಮ್ಯಾಪಿಂಗ್ ಕಾರ್ಯದ ವೇಳೆ ಕೆಲವು ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ತಕ್ಷಣ ತಿದ್ದುಪಡಿಗೆ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಸದಸ್ಯ ಸಂದೀಪ್ ಝಳಕಿ ಆಗ್ರಹಿಸಿದರು.

ಮ್ಯಾಪಿಂಗ್ ಪ್ರಕ್ರಿಯೆ ನಡೆಯುವ ವೇಳೆ ಕಂಡುಬಂದ ಸಮಸ್ಯೆಗಳ ಬಗ್ಗೆ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ್ ಮೆಕ್ಕಳಕಿ ಅವರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದ್ದು, ಅವರ ಸಮ್ಮುಖದಲ್ಲಿ ಲೋಪದೋಷಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡಲಾಯಿತು.

ಮತದಾರರ ಪಟ್ಟಿಯ ತಿದ್ದುಪಡಿ ಕಾರ್ಯವು ಸುಸೂತ್ರವಾಗಿ ನಡೆಯಲು ಹಾಗೂ ಯಾವುದೇ ಗೊಂದಲ ಉಂಟಾಗದಂತೆ ಅಧಿಕಾರಿಗಳು ಸ್ಥಳದಲ್ಲೇ ಪರಿಶೀಲನೆ ನಡೆಸಿ ಕ್ರಮ ಕೈಗೊಂಡರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande