ವಿದ್ಯಾರ್ಥಿಗಳಿಗೆ ನೈತಿಕ ಪಾಠ ಬೋಧಿಸುವ ಅಗತ್ಯವಿದೆ ; ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು
ಬಳ್ಳಾರಿ, 11 ಮಾರ್ಚ್ (ಹಿ.ಸ.) ಆ್ಯಂಕರ್: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಪ್ರಜ್ಞೆಯ ಪಾಠಗಳನ್ನು ಬೋಧಿಸುವ ಅನಿವಾರ್ಯತೆ ಇದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ. ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಮಠದಲ್ಲಿ ಅಕ್ಕನ ಬಳಗದ ಸಹಯೋಗದಲ್ಲಿ ಮಂಗಳವಾರ
ವಿದ್ಯಾರ್ಥಿಗಳಿಗೆ ನೈತಿಕ ಪಾಠ ಬೋಧಿಸುವ ಅಗತ್ಯವಿದೆ ; ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು


ವಿದ್ಯಾರ್ಥಿಗಳಿಗೆ ನೈತಿಕ ಪಾಠ ಬೋಧಿಸುವ ಅಗತ್ಯವಿದೆ ; ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು


ವಿದ್ಯಾರ್ಥಿಗಳಿಗೆ ನೈತಿಕ ಪಾಠ ಬೋಧಿಸುವ ಅಗತ್ಯವಿದೆ ; ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು


ಬಳ್ಳಾರಿ, 11 ಮಾರ್ಚ್ (ಹಿ.ಸ.)

ಆ್ಯಂಕರ್: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಪ್ರಜ್ಞೆಯ ಪಾಠಗಳನ್ನು ಬೋಧಿಸುವ ಅನಿವಾರ್ಯತೆ ಇದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಮಠದಲ್ಲಿ ಅಕ್ಕನ ಬಳಗದ ಸಹಯೋಗದಲ್ಲಿ ಮಂಗಳವಾರ ನಡೆದ ಶಿವಾನುಭವ ಸಂಪದ - 11ರದಲ್ಲಿ ಆಶೀರ್ವಾದ ಮಾಡಿದ ಶ್ರೀಗಳು, ವಿದ್ಯಾರ್ಥಿ ಜೀವನದಲ್ಲಿ ನೈತಿಕ ಪಾಠಗಳನ್ನು ಬೋಧಿಸುವ ಮೂಲಕ ವ್ಯಕ್ತಿತ್ವ ರೂಪಿಸಿ, ಸನ್ಮಾರ್ಗದಲ್ಲಿ ನಡೆಯುವಂತೆ ಪ್ರತಿಯೊಬ್ಬರನ್ನೂ ರೂಪಿಸಬಹುದಾಗಿದೆ ಎಂದರು.

ಯಾರೇ ಆಗಲಿ ಕಾಯಕದಲ್ಲಿ ನಿಷ್ಠೆಯನ್ನು ತಪ್ಪಬಾರದರು. ಆಸೆಪಡದೇ, ತಿರಸ್ಕಾರ ಭಾವನೆ ತೋರದೇ ಬಂದಿದ್ದನ್ನು ಪ್ರಸಾದ ಎಂದು ಸ್ವೀಕರಿಸಿ ಜೀವನ ನಡೆಸುವುದೇ ಸಾಧನೆ. ವಸ್ತುಗಳನ್ನು ಸಂಗ್ರಹ ಮಾಡುವುದೇ ಜೀವನ ಅಲ್ಲ, ವಸ್ತುಗಳನ್ನು ಹೊರ ಹಾಕುವುದು ಮತ್ತು ಸಂಗ್ರಹಿಸಿದ್ದನ್ನು ಸದ್ಭಳಕೆ ಮಾಡಿಕೊಳ್ಳುವುದೇ ಸಾಧನೆ ಎಂದರು.

ಆಯ್ದಕ್ಕಿ ಲಕ್ಕಮ್ಮ ಮಹಾ ಶರಣೆ. ಸ್ತ್ರೀ ಶಕ್ತಿಯ ಪ್ರತೀಕ. ನಿಷ್ಠೆ ಮತ್ತು ಕಾಯಕತತ್ವದ ಮೂಲಕ ಶರಣತ್ವ ಪಡೆದವರು. ಆಕರ್ಷಣೆಗಳ ಮಧ್ಯೆ ಇದ್ದರೂ ಆಕರ್ಷಣೆಗಳನ್ನು ತಿರಸ್ಕರಿಸಿ ಕಾಯಕ ನಿಷ್ಠೆಯನ್ನು ಪಾಲನೆ ಮಾಡಿ ಸಾಧನೆ ಮಾಡಿ, ಅಮರರಾಗಿದ್ದಾರೆ. ವಿಶ್ವಕ್ಕೇ ಮಾದರಿ ಆಗಿದ್ದಾರೆ ಎಂದರು.

ಉಪನ್ಯಾಸಕಿ ಶ್ರೀಮತಿ ಸುಶೀಲಾ ಶಿರೂರು ಅವರು `ಸ್ತ್ರೀ ಶಕ್ತಿ ಶರಣೆ ಆಯ್ದಕ್ಕಿ ಲಕ್ಕಮ್ಮ' ವಿಷಯದ ಉಪನ್ಯಾಸ ನೀಡಿ, ಶರಣರ ನಿಷ್ಠೆ, ಕಾಯಕ ತತ್ವ, ದಾಸೋಹದ ಮಹತ್ವವನ್ನು ಅರಿತಿದ್ದ ಆಯ್ದಕ್ಕಿ ಲಕ್ಕಮ್ಮ, ಸ್ವಾಭಿಮಾನದ ಪ್ರತೀಕ. ಪ್ರಾಮಾಣಿಕತೆಯ ಪ್ರತೀಕ. ಬಡತನದಲ್ಲೂ ಮಾನಸಿಕ ಶ್ರೀಮಂತಿಕೆಯನ್ನು ಹೊಂದಿದ್ದ ಲಕ್ಕಮ್ಮಳ ಬದುಕು ಧಾರ್ಮಿಕ ಚಳವಳಿಯ ಪ್ರೇರಣಾ ಶಕ್ತಿ. ಲೀಲಾಮೃತ, ಶೂನ್ಯ ಸಂಪಾದನೆ ಇನ್ನಿತರೆ ಗ್ರಂಥಗಳಲ್ಲಿ ಆಯ್ದಕ್ಕಿ ಲಕ್ಕಮ್ಮರ ಕುರಿತು ಪ್ರಸ್ತಾಪ ಆಗಿರುವುದು ಅವರ ಬದುಕಿನ ಮಹಾನ್ ಸಾಧನೆ ಆಗಿದೆ ಎಂದರು.

ಸ್ತ್ರೀರೋಗ ತಜ್ಞೆ ಶ್ರೀಮತಿ ಡಾ. ಜ್ಯೋತಿ ಅರವಿಂದ ಪಾಟೇಲ್ ಅವರು, ಮುಖ್ಯ ಅತಿಥಿಗಳಾಗಿ, ಒತ್ತಡದ ದಿನಗಳಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಆದರ್ಶಗಳನ್ನು - ತತ್ವ ; ಸಿದ್ಧಾಂತಗಳನ್ನು ಕುಟುಂಬದಲ್ಲಿ ಪಾಲಿಸುವುದನ್ನು ಪ್ರಾರಂಭಿಸಬೇಕು. ಕುಟುಂಬದ ಮುಖ್ಯಸ್ಥರು ಈ ವಿಷಯಗಳತ್ತ ಗಮನ ನೀಡಬೇಕು ಎಂದು ಹೇಳಿದರು.

ಡಾ. ವೀಣಾ ಕೆ. ಅವರು ಮುಖ್ಯ ಅತಿಥಿಗಳಾಗಿ, ಪ್ರತಿಯೊಂದು ಕುಟುಂಬದಲ್ಲಿ ನೈತಿಕಪ್ರಜ್ಞೆಯನ್ನು ಮೂಡಿಸುವ ಪ್ರಯತ್ನ ಆಗಬೇಕು. ವಿದ್ಯಾರ್ಥಿಗಳಲ್ಲಿ ನೈತಿಕ ಪಾಠವನ್ನು ಬೋಧಿಸುವ ಅನಿವಾರ್ಯತೆ ಇದೆ. ಹೆಣ್ಣಿಂದಲೇ ಸಮಾಜ, ಹೆಣ್ಣಿಂದಲೇ ಬದುಕು, ಹೆಣ್ಣಿಂದಲೇ ಜೀವನ. ಹೆಣ್ಣಿಂದಲೇ ಮನೆ - ಮನೆತನ. ನಾವೆಲ್ಲರೂ ಹೆಣ್ಣಾಗಿ ಹುಟ್ಟಿದ್ದಕ್ಕಾಗಿ ಹೆಮ್ಮೆ ಪಡೋಣ ಎಂದರು.

ಅಕ್ಕನ ಬಳಗದ ರಾಧಾ ಅವರು ಪ್ರಾರ್ಥನೆ ಸಲ್ಲಿಸಿದರು. ಎಸ್.ಎನ್. ವನಜಾಕ್ಷಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಚ್.ಎಂ. ಶಕುಂತಲ ಅವರು ವಂದನಾರ್ಪಣೆ ಸಲ್ಲಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande