ನಾಳೆ ವಿದ್ಯುತ್ ಗ್ರಾಹಕರ ಸಭೆ
ಬಳ್ಳಾರಿ, 11 ಮಾರ್ಚ್ (ಹಿ.ಸ.): ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪ-ವಿಭಾಗ-1 ಹಾಗು 2ರ ವ್ಯಾಪ್ತಿಯ ವಿದ್ಯುತ್ ಗೆ ಸಂಬಂಧಿಸಿದಂತೆ ವಿದ್ಯುತ್ ಗ್ರಾಹಕರಿಗಿರುವ ಕುಂದು-ಕೊರತೆಗಳನ್ನು ಆಲಿಸಿ ಪರಿಹರಿಸಲು ಮಾ.12 ರಂದು ಮಧ್ಯಾಹ್ನ 03 ಗಂಟೆಗೆ ವಲಯ ಕಚೇರಿ ಮೊದಲ ಮಹಡಿಯಲ್ಲಿನ ಸಭಾಂಗಣದಲ್ಲಿ ವಿದ್ಯುತ್
ನಾಳೆ ವಿದ್ಯುತ್ ಗ್ರಾಹಕರ ಸಭೆ


ಬಳ್ಳಾರಿ, 11 ಮಾರ್ಚ್ (ಹಿ.ಸ.):

ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪ-ವಿಭಾಗ-1 ಹಾಗು 2ರ ವ್ಯಾಪ್ತಿಯ ವಿದ್ಯುತ್ ಗೆ ಸಂಬಂಧಿಸಿದಂತೆ ವಿದ್ಯುತ್ ಗ್ರಾಹಕರಿಗಿರುವ ಕುಂದು-ಕೊರತೆಗಳನ್ನು ಆಲಿಸಿ ಪರಿಹರಿಸಲು ಮಾ.12 ರಂದು ಮಧ್ಯಾಹ್ನ 03 ಗಂಟೆಗೆ ವಲಯ ಕಚೇರಿ ಮೊದಲ ಮಹಡಿಯಲ್ಲಿನ ಸಭಾಂಗಣದಲ್ಲಿ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ ಆಯೋಜಿಸಲಾಗಿದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರು ತಿಳಿಸಿದ್ದಾರೆ.

ಬಳ್ಳಾರಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರರು ಸಭೆಯ ಅಧ್ಯಕ್ಷತೆ ವಹಿಸುವರು. ಹಾಗಾಗಿ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದು-ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande