ಅನಿಮಿಯಾ ಮುಕ್ತ ಕರ್ನಾಟಕಕ್ಕೆ ವಿಜಯಪುರ ಜಿಲ್ಲಾಡಳಿತ ಪಣ
ವಿಜಯಪುರ, 11 ಮಾರ್ಚ್ (ಹಿ.ಸ.) ಆ್ಯಂಕರ್: ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ಪಂದನ ಸಂಸ್ಥೆ ಹಾಗೂ ಐಆರ್ ಡಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅನಿಮಿಯಾ ಮುಕ್ತ ಭಾರತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಚಂದ್ರಕಾಂತ್ ಕುಂಬಾರ್ ಮಾತನಾಡಿ,
Animiya disease stop


ವಿಜಯಪುರ, 11 ಮಾರ್ಚ್ (ಹಿ.ಸ.)

ಆ್ಯಂಕರ್: ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ಪಂದನ ಸಂಸ್ಥೆ ಹಾಗೂ ಐಆರ್ ಡಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅನಿಮಿಯಾ ಮುಕ್ತ ಭಾರತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಚಂದ್ರಕಾಂತ್ ಕುಂಬಾರ್ ಮಾತನಾಡಿ, ಅನಿಮಿಯಾ ಸಮಸ್ಯೆ ನಿವಾರಣೆಗಾಗಿ ಸಮಗ್ರ ಜಾಗೃತಿ ಹಾಗೂ ಸಮನ್ವಯದ ಕಾರ್ಯ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಶ್ರೀ ಮಾಸ್ತಿಹೊಳೆ ಅವರು ಆರೋಗ್ಯದ ದೃಷ್ಟಿಯಿಂದ ಅನಿಮಿಯಾ ನಿಯಂತ್ರಣದ ಮಹತ್ವವನ್ನು ವಿವರಿಸಿದರು.

ಶ್ರೀಮದ್ ರಾಜಚಂದ್ರ ಆಸ್ಪತ್ರೆ ಮತ್ತು ಸಂಶೋಧನ ಸಂಸ್ಥೆ ಧರ್ಮಪುರ, ಗುಜರಾತ್ನ ವಿರೆನ್ ಗಾಂಧಿ ಅವರು ಅನಿಮಿಯಾ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

IRD ಸಂಸ್ಥೆಯ ಬಾಬು ಸಜ್ಜನ್ ಹಾಗೂ ಬಸವರಾಜ್ ಸಜ್ಜನ್, ಸ್ಪಂದನ ಸಂಸ್ಥೆಯ ಮಹಾದೇವ ದೇವರ ಮತ್ತು ಪ್ರಶಾಂತ್ ದೇಶಪಾಂಡೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ರಾಜ್ಯದ 15 ಜಿಲ್ಲೆಗಳಿಂದ ಸರಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನಿಮಿಯಾ ಮುಕ್ತ ಕರ್ನಾಟಕ ಮಾಡುವ ಸಂಕಲ್ಪ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಜಾಗೃತಿ ಮತ್ತು ಅನಿಮಿಯಾ ತಡೆಗಟ್ಟುವ ಕುರಿತು ಚರ್ಚೆಗಳು ನಡೆಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande